ಬ್ರಹ್ಮನ ಇಚ್ಛೆಗೆ ಒಳ್ಳಪಟ್ಟದ್ದು ಧರ್ಮ. ನಮ್ಮದೇ ವಿಧಾನದಲ್ಲಿ ಭಗವಂತನ ಇಚ್ಛೆ ಯಾವುದು ಎಂದು ಅರಿತು ನಡೆಯಬೇಕು. “ದ್ವಾವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಉಚ್ಯತೆ… ಪುರುಷೋತ್ತಮ… ತನ್ನನ್ನು ಪುರುಷೋತ್ತಮ ಎಂದು ಕೃಷ್ಣನೇ ಹೇಳಿದ್ದಾನೆ. ಇಲ್ಲಿ ಪುರುಷ ಎಂದರೆ ಗಂಡಸು ಎಂದರ್ಥವಲ್ಲ.
ಪುರುಷೋತ್ತಮ ಎನ್ನುವಾಗ ಸ್ತ್ರೀಯರನ್ನು ಏಕೆ ಬಿಟ್ಟರು ಎಂದು ಕೆಲವರು ಪ್ರಶ್ನೆ ಮಾಡುತ್ತಾರೆ. “ಪುರ’ ಅಂದರೆ ದೇಹ. ದೇಹಧಾರಿಗಳೆಲ್ಲರೂ ಪುರುಷರೆಂದೆನಿಸಿಕೊಳ್ಳುತ್ತಾರೆ. ದೇಹಧಾರಿಗಳು ಪುರುಷರೂ ಆಗಬಹುದು, ಸ್ತ್ರೀಯರೂ ಆಗಬಹುದು. ಕ್ಷರ (ಜೀವ ರಾಶಿ), ಅಕ್ಷರ (ಲಕ್ಷ್ಮೀ) ಎಂಬ ಎರಡು ಜಾತಿಗಳು. ಬುದ್ಧಿವಂತರು ಯಾರು ಎಂದರೆ ಭಗವಂತನ ಸರ್ವೋತ್ತಮತ್ವವನ್ನು ಒಪ್ಪಿಕೊಂಡವರು ಎಂಬುದುತ್ತರ. ಬುದ್ಧಿ = ನಿಶ್ಚಯ ಮಾಡುವ ಶಕ್ತಿ.
ಭಗವಂತನನ್ನು ಪುರುಷೋತ್ತಮ ಎಂದು ನಿರ್ಧಾರ ತಳೆಯುವ ಶಕ್ತಿ ಇಲ್ಲದಿದ್ದರೆ ಬುದ್ಧಿ ಇಲ್ಲ ಎಂದೇ ಅರ್ಥ. ಬುದ್ಧಿಮಾನ್ =ನಿರ್ಧಾರ ತಳೆಯುವ ಶಕ್ತಿ ಉಳ್ಳವನು. ಭಗವಂತನ ಸರ್ವೋತ್ತಮತ್ವವನ್ನು ಅರಿಯಲಾಗದಿದ್ದರೆ “ಅಬುದ್ಧಿಮಾನ್’. ದೇವರು ಬಿಟ್ಟರೆ ಉಳಿದದ್ದು ಅನಿತ್ಯ. ನಾವು ಹೆಚ್ಚಿನ ವಿಷಯಗಳನ್ನು ಹೇಳುವುದು ಈ ಜನ್ಮಕ್ಕೆ ಸಂಬಂಧಿಸಿ. ಎಲ್ಲ ಜನ್ಮಗಳಿಗೆ ಸಂಬಂಧಪಟ್ಟವ ಭಗವಂತ ಮಾತ್ರ. ಭಗವಂತನಿಗೂ ನಮಗೂ ನಿತ್ಯಸಂಬಂಧ. ಆತನಿಗೆ ನಮ್ಮದೆಲ್ಲವೂ ಗೊತ್ತಿದೆ. ಅದನ್ನೇ ಬಲಪಡಿಸಬೇಕು. ಆದ್ದರಿಂದಲೇ “ಕೃತಕೃತ್ಯಶ್ಚ ಭಾರತ’.
-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811