Advertisement

“ದ. ಕೊರಿಯಾದ ನಾಶ ಕೇಕ್‌ ತಿಂದಷ್ಟು ಸುಲಭ’

02:55 AM Jul 09, 2017 | Harsha Rao |

ಸಿಯೋಲ್‌: “ದಕ್ಷಿಣ ಕೊರಿಯಾವನ್ನು ನಾಶ ಮಾಡುವುದು ನಮಗೆ ಕೇಕ್‌ ತಿಂದಷ್ಟೇ ಸುಲಭ.’ ಹೀಗೆಂದು ಆಕ್ರೋಶಭರಿತವಾಗಿ ಮಾತನಾಡಿದ್ದು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌. ಸಿಯೋಲ್‌ನಲ್ಲಿ ಅಮೆರಿಕ ಮತ್ತು ದಕ್ಷಿಣ ಕೊರಿಯಾವು ಜಂಟಿ ಸಮರಾಭ್ಯಾಸ ನಡೆಸಲು ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕೊರಿಯಾವು ಇಂತಹುದೊಂದು ಬೆದರಿಕೆಪೂರಿತ ಮಾತುಗಳನ್ನಾಡಿದೆ.

Advertisement

ಉತ್ತರ ಕೊರಿಯಾವು ಸತತ ಕ್ಷಿಪಣಿ ಪರೀಕ್ಷೆಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿರುವ ದಕ್ಷಿಣ ಕೊರಿಯಾ ಇದೀಗ ಅಮೆರಿಕದೊಂದಿಗೆ ಜಂಟಿ ಸಮರಾಭ್ಯಾಸಕ್ಕೆ ಮುಂದಾಗಿದೆ. ನಮ್ಮ ಮೇಲೆ ಪದೇ ಪದೇ ದಾಳಿಗೆ ಯತ್ನಿಸುತ್ತಿರುವ ಉ.ಕೊರಿಯಾಗೆ ಮಾತುಗಳಿಗೆ ಹೊರತಾದ ಉತ್ತರ ನೀಡಬೇಕು ಎಂದು ಇತ್ತೀಚೆಗಷ್ಟೇ ದ.ಕೊರಿಯಾ ಅಧ್ಯಕ್ಷ ಮೂನ್‌ ಜೆ-ಇನ್‌ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಮಾತನಾಡಿರುವ ಕಿಮ್‌ ಜಾಂಗ್‌ ಉನ್‌, ” ನಮಗೀಗ ನಿಮ್ಮನ್ನು ಮಾತ್ರವಲ್ಲ, ಅಮೆರಿಕವನ್ನೂ ನಾಶ ಮಾಡಬಲ್ಲಂಥ ಶಕ್ತಿಯಿದೆ,’ ಎಂದು ಬೆದರಿಕೆ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next