Advertisement

ಕೊಚ್ಚಿ ಕಟ್ಟಡ ತೆರವು ನಮಗೆ ಮಾದರಿಯಲ್ಲ

12:37 AM Jan 12, 2020 | Lakshmi GovindaRaj |

ಬೆಂಗಳೂರು: ಕೇರಳದ ಕೊಚ್ಚಿಯ ಮರಡು ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿದ್ದ 350 ಫ್ಲ್ಯಾಟ್‌ಗಳಿದ್ದ ವಸತಿ ಸಮುತ್ಛಯವನ್ನು ಅಲ್ಲಿನ ಅಧಿಕಾರಿಗಳು ಶನಿವಾರ ಕೆಲವೇ ಗಂಟೆಗಳಲ್ಲಿ ನೆಲಸಮ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಅನಧಿಕೃತ ಕಟ್ಟಡಗಳ ತೆರವು ವಿಷಯ ಮತ್ತೆ ಚರ್ಚೆಗೆ ಬಂದಿದೆ.

Advertisement

ಕೇರಳದ ಕರಾವಳಿ ಪ್ರದೇಶ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ನಿರ್ಮಾಣ ಮಾಡಲಾಗಿರುವ ನಾಲ್ಕು ಪ್ರಮುಖ ಕಟ್ಟಡಗಳನ್ನು ನೆಲಸಮ ಮಾಡಲು ಅಲ್ಲಿನ ಅಧಿಕಾರಿಗಳು ಮುಂದಾಗಿದ್ದು, ಇದರ ಮೊದಲ ಹಂತವಾಗಿ ಶನಿವಾರ ಬೆಳಗ್ಗೆ 350 ಫ್ಲ್ಯಾಟ್‌ಗಳಿದ್ದ ಅರ್ಪಾಟ್‌ಮೆಂಟ್‌ ಒಂದನ್ನು ನೆಲಸಮ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೇಯರ್‌ ಎಂ.ಗೌತಮ್‌ಕುಮಾರ್‌, ಕೊಚ್ಚಿಯ ಘಟನೆ ಬಿಬಿಎಂಪಿಗೆ ಮಾದರಿ ಆಗಬೇಕಿಲ್ಲ. ಪಾಲಿಕೆ ನಗರಾಭಿವೃದ್ಧಿ ಇಲಾಖೆ ಅಡಿ ಕಾರ್ಯನಿರ್ವ ಹಿಸುತ್ತಿದೆ. ಇಲಾಖೆಯ ನಿರ್ದೇಶನದ ಮೇರೆಗೆ ಪಾಲಿಕೆ ನಿರ್ಧಾರ ಕೈಗೊಳ್ಳಲಿದೆ ಎಂದರು.

ನಗರದಲ್ಲಿನ ಅಕ್ರಮ ಕಟ್ಟಡಗಳು, ಕೆರೆ ಮತ್ತು ರಾಜಕಾಲುವೆ ಬಫ‌ರ್‌ ಜೋನ್‌ಗಳ ವಿಚಾರಕ್ಕೆ ಸಂಬಂಧಿಸಿದ ಪ್ರಕರಣಗಳು ಸುಪ್ರೀಂ ಕೋರ್ಟ್‌ನಲ್ಲಿವೆ. ಹೀಗಾಗಿ, ಪಾಲಿಕೆ ಕ್ರಮ ತೆಗೆದುಕೊಳ್ಳಲು ಬರುವುದಿಲ್ಲ. ಈ ಸಮ ಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಗ್ರ ಅಭಿವೃದ್ಧಿ ಯೋಜನೆ-2019 ರೂಪಿಸಿ ಕೊಳ್ಳಲಾಗುತ್ತಿದೆ. ಸರ್ಕಾರದಿಂದ ಅನುಮತಿ ಸಿಕ್ಕ ಬಳಿಕ ಬೈಲಾ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ಕಟ್ಟಡ ತೆರವು ಮುಂದುವರಿಕೆ: ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಮಾತ ನಾಡಿ, ನಗರದಲ್ಲಿ ಶೇ.90ರಷ್ಟು ಕಟ್ಟಡಗಳನ್ನು ನಿಯಮ ಬಾಹಿರವಾಗಿ ಕಟ್ಟಲಾಗಿದೆ. ಇದರಲ್ಲಿ ಅತಿಯಾಗಿ ನಿಯಮ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಾಣ ಮಾಡಿದ ಕಟ್ಟಡಗಳನ್ನು ತೆರವು ಮಾಡಲಾಗುತ್ತಿದೆ.

Advertisement

ರಾಜಕಾಲುವೆ ಮಾರ್ಗದಲ್ಲಿ ಈ ಹಿಂದೆ 2,626 ಅಕ್ರಮ ಕಟ್ಟ ಡಗಳಿದ್ದವು. ಅವುಗಳಲ್ಲಿ 1,600 ಕಟ್ಟಡಗಳನ್ನು ತೆರವು ಮಾಡಲಾಗಿದೆ. ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಮುಂದುವರಿ ಯಲಿದೆ. ನಗರದ 10 ಕೆರೆಗಳ ವ್ಯಾಪ್ತಿಯಲ್ಲೂ ಅಕ್ರಮ ಕಟ್ಟಡಗಳು ನಿರ್ಮಾಣವಾಗಿರುವುದನ್ನು ಪತ್ತೆ ಹಚ್ಚಿದ್ದು, ಅವುಗಳನ್ನು ಕೂಡಲೇ ತೆರವು ಮಾಡಲಾ ಗುವುದು ಎಂದು ಹೇಳಿದರು.

980 ಕಾನೂನು ಬಾಹಿರ ಕಟ್ಟಡ: ಬಿಬಿಎಂಪಿಯು ನಗರದಲ್ಲಿ ನಕ್ಷೆ ಉಲ್ಲಂ ಸಿ ನಿರ್ಮಿಸಿದ ಕಟ್ಟಡಗಳ ಕುರಿತು ಸರ್ವೇ ನಡೆಸಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ 980 ಕಾನೂನು ಬಾಹಿರ ಕಟ್ಟಡಗಳಿದ್ದು, ಈ ಕಟ್ಟಡಗಳ ಮಾಲೀಕರು ನಕ್ಷೆ ಉಲ್ಲಂ ಸಿ ಕಾನೂನು ಬಾಹಿರವಾಗಿ ಕಟ್ಟಡಗಳನ್ನು ನಿರ್ಮಿಸಿರುವುದಾಗಿ ಪಾಲಿಕೆಯ ಅಧಿಕಾರಿಗಳು ಗುರುತಿಸಿದ್ದಾರೆ.

ಅದರಂತೆ ಪಶ್ಚಿಮ ವಲಯದಲ್ಲಿ 88, ದಕ್ಷಿಣದಲ್ಲಿ 274, ಪೂರ್ವದಲ್ಲಿ 108, ಬೊಮ್ಮನಹಳ್ಳಿಯಲ್ಲಿ 92, ದಾಸರಹಳ್ಳಿಯಲ್ಲಿ 3, ಮಹದೇವಪುರದಲ್ಲಿ 176, ಆರ್‌.ಆರ್‌. ನಗರದಲ್ಲಿ 103 ಹಾಗೂ ಯಲಹಂಕದಲ್ಲಿ 136 ಕಟ್ಟಡಗಳನ್ನು ಕಾನೂನು ಬಾಹಿರವಾಗಿ ನಿರ್ಮಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next