Advertisement
ಗೋವಿಂದಪುರದ ನಿವಾಸಿ ಮೊಹಮ್ಮದ್ ನೂರುಲ್ಲಾ (24) ಗುಂಡೇಟು ತಿಂದಿದ್ದು, ಮಗು ಅಪಹರಣಕ್ಕೆ ಈತನಿಗೆ ನೆರವಾಗಿದ್ದ ಐಸಾಕ್ ಖಾನ್ (19), ಅಬ್ದುಲ್ ವಾಹಿದ್ ಹಾಗೂ ಭಾರತಿ ನಗರ ನಿವಾಸಿ, ಪ್ರಕರಣದ ಮಾಸ್ಟರ್ ಮೈಂಡ್, ಶಹನಾಜ್ ಖಾನಮ್ (39) ಎಂಬಾಕೆಯನ್ನು ಬಂಧಿಸಲಾಗಿದೆ.
ತಿಳಿಸಿದ್ದಾರೆ. ಪತಿಯಿಂದ ಹಣ ವಸೂಲಿಗಾಗಿ ಕೃತ್ಯ: ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ಶಹನಾಜ್ ಖಾನಮ್‌ಳ ಮೊದಲ ಪತಿ ಮೃತಪಟ್ಟಿದ್ದು, ಬಳಿಕ ಗೌರಿಪಾಳ್ಯದ ಫೈರೋಜ್‌ಖಾನ್ ಎಂಬಾತನನ್ನು ಎರಡನೇ ಮದುವೆಯಾಗಿದ್ದಳು. ಮೊದಲ ಪತಿಯಿಂದ ಜನಿಸಿದ್ದ ಮೂವರು ಹೆಣ್ಣು ಮಕ್ಕಳ ಜತೆ ಶಿವಾಜಿನಗರದ ತಿಮ್ಮಯ್ಯ ರಸ್ತೆಯಲ್ಲಿ ನೆಲೆಸಿದ್ದ ಆಕೆಗೆ ಮನೆ ನಿರ್ವಹಣೆಗೆ ಫೈರೋಜ್ ಖಾನ್ ಹಣ ನೀಡುತ್ತಿದ್ದ. ಆದರೆ, ಕೆಲ ತಿಂಗಳಿನಿಂದ ಮನೆಗೆ ಬರುವುದನ್ನೇ ನಿಲ್ಲಿಸಿದ್ದ ಆತ, ಹಣವನ್ನೂ ಕೊಡುತ್ತಿರಲ್ಲಿಲ್ಲ. ಇದರಿಂದ ಬೇಸತ್ತ ಶಹನಾಜ್ ಖಾನಮ್ ಗಂಡು ಮಗುವೊಂದನ್ನು ತಂದು, ಆ ಮಗು ಫೈರೋಜ್‌ಖಾನ್‌ಗೆ ಹುಟ್ಟಿದೆ ಎಂದು ಹೇಳಿ, ಆತನಿಂಧ ಹಣ ವಸೂಲಿ ಮಾಡಲು ಯೋಚಿಸಿದ್ದಳು.
Related Articles
Advertisement
ಮಗುವಿನ ತಲೆ ಬೋಳಿಸಿದ್ದ ಶಹನಾಜ್: ಅ.5ರಂದು ಬೆಳಗ್ಗೆ 9 ಗಂಟೆಗೆ ಐಸಾಕ್ ಮತ್ತು ವಾಹಿದ್‌ನನ್ನು ಹೆಗ್ಗಡೆ ನಗರಕ್ಕೆ ಕರೆತಂದ ನೂರುಲ್ಲಾ, ಆಟೋವೊಂದರಲ್ಲಿ ಅವರನ್ನು ಕೂರಿಸಿ, ತಾನು ಬೈಕ್ ಏರಿ ಕೂಲಿ ಕಾರ್ಮಿಕರ ಶೆಡ್ ಬಳಿ ಸುತ್ತಾಡಿದ್ದಾನೆ. ಈ ವೇಳೆ ಅಭಿರಾಮ್ ಎಂಬ ಬಾಲಕನನ್ನು ವೃದ್ಧೆಯೊಬ್ಬರು ನೋಡಿಕೊಳ್ಳುತ್ತಿದ್ದರು. ಮಧ್ಯಾಹ್ನ 2 ಗಂಟೆವರೆಗೆ ಕಾದ ಆರೋಪಿ, ವೃದ್ಧೆ ಮನೆಯೊಳಗೆ ಹೋಗುತ್ತಿದ್ದಂತೆ ಮಗುವನ್ನು ಅಪಹರಿಸಿದ್ದ. ನಂತರ ಮೂವರು ಆರೋಪಿಗಳು ಒಂದೇ ಬೈಕ್ ನಲ್ಲಿ ಬಂದು, ಶಿವಾಜಿನಗರದಲ್ಲಿರುವ ಶಹನಾಜ್ ಗೆ ಮಗು ಕೊಟ್ಟ ಪರಾರಿಯಾಗಿದ್ದರು. ಇತ್ತ ಮಗುವನ್ನು ಪಡೆದ ಶಹನಾಜ್, ಮಗುವನ್ನು ಯಾರೂ ಗುರುತಿಸಬಾರದು ಎಂದು ತಲೆ ಬೋಳಿಸಿದ್ದಳು. ಬಳಿಕ ತನ್ನ ಎರಡನೇ ಪತಿ ಫೈರೋಜ್‌ಖಾನ್ ಗೆ ಕರೆ ಮಾಡಿ ಮುಖ್ಯವಾದ ವಿಚಾರವೊಂದರ ಕುರಿತು ಮಾತನಾಡಬೇಕು ಕೂಡಲೇ ಬಾ ಎಂದು ಹೇಳಿದ್ದಳು.
ಸುಳಿವು ಕೊಟ್ಟ ಸಿಸಿಟಿವಿ: ಪ್ರಕರಣ ದಾಖಲಾಗುತ್ತಿದ್ದಂತೆ ಸಂಪಿಗೆಹಳ್ಳಿ ಉಪವಿಭಾಗದಲ್ಲಿ ಪ್ರತ್ಯೇಕ ತಂಡ ರಚಿಸಲಾಗಿತ್ತು. ಘಟನಾ ಸ್ಥಳದ ಬಳಿಯಿರುವ ಸಿಸಿಟಿವಿಗಳನ್ನು ಪರಿಶೀಲಿಸಿದ ಈ ತಂಡಕ್ಕೆ ಮೂವರು ಆರೋಪಿಗಳು ಅಪಾಚೆ ಬೈಕ್‌ನಲ್ಲಿ ಅನುಮಾನಸ್ಪದವಾಗಿ ಹೋಗುತ್ತಿರುವುದು ಕಂಡುಬಂತು. ದರೊಂದಿಗೆ ಈ ಭಾಗದ ಫೋನ್ ಕರೆ ವಿವರಗಳನ್ನೂ ಸಂಗ್ರಹಿಸಿದ ತಂಢ ಗುರುವಾರ ರಾತ್ರಿ ವಾಹಿದ್ ಮತ್ತು ಐಸಾಕ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯದ ಬಗ್ಗೆ ಬಾಯಿಬಿಟ್ಟಿದ್ದರು. ಇವರು ನೀಡಿದ ಮಾಹಿತಿ ಮೇರೆಗೆ ತಡರಾತ್ರಿ 10.30ರ ಸುಮಾರಿಗೆ ಶಿವಾಜಿನಗರದಲ್ಲಿರುವ ಶಹನಾಜ್‌ಳನ್ನು ಬಂಧಿಸಿ, ಮಗುವನ್ನು ರಕ್ಷಿಸಲಾಯಿತು.ಆದರೆ ನೂರುಲ್ಲಾ ಪರಾರಿಯಾಗಿದ್ದ.