Advertisement

ಬುರ್ಜ್ ಖಲೀಫಾದಲ್ಲಿ ರಾರಾಜಿಸಿದ ಕಿಚ್ಚ

10:19 PM Jan 31, 2021 | Team Udayavani |

ಬೆಂಗಳೂರು: ಸ್ಯಾಂಡಲ್ ವುಡ್ ನ  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಫ್ಯಾಂಟಮ್ ಸಿನಿಮಾದ ಹೊಸ  ಹೆಸರಾದ ‘ವಿಕ್ರಾಂತ್ ರೋಣ’ ಶೀರ್ಷಿಕೆಯ ಲೋಗೋದೊಂದಿಗೆ 2000 ಅಡಿಯ ಕಿಚ್ಚನ ವರ್ಚುವಲ್ ಕಟೌಟ್ ಪ್ರಪಂಚದ ಅತೀ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ ದ ಮೇಲೆ ಅನಾವರಣಗೊಂಡಿದೆ.

Advertisement

ರವಿವಾರ ರಾತ್ರಿ  9:30ರ ಸುಮಾರಿಗೆ ಕಟೌಟ್ ಬಿಡುಗಡೆಗೊಂಡಿದ್ದು, ಆ ಮೂಲಕ ಇಷ್ಟು ಎತ್ತರದ  ಕಟೌಟ್ ನಲ್ಲಿ ಕಾಣಿಸಿಕೊಂಡ ಸ್ಯಾಂಡಲ್ ವುಡ್ ನ ಮೊದಲ ನಟ ಎಂಬ ಖ್ಯಾತಿಗೆ ಕಲಾಕೇಸರಿ ಸುದೀಪ್ ಪಾತ್ರವಾಗಿದ್ದಾರೆ.

ಕಳೆದ ಜನವರಿ 21 ರಂದು ಚಿತ್ರಕ್ಕೆ ಸಂಬಂಧಿಸಿದಂತೆ ಬಿಗ್ ಅಪ್ ಡೇಟ್ ನೀಡುತ್ತೇವೆ ಎಂದಿದ್ದ ನಿರ್ದೇಶಕ ಅನೂಪ್ ಬಂಡಾರಿ, ಆ ದಿನದಂದು ಚಿತ್ರಕ್ಕೆ ಹಿಂದೆ ನೀಡಲಾಗಿದ್ದ ಫ್ಯಾಂಟಮ್ ಎಂಬ ಶೀರ್ಷಿಕೆ ಯನ್ನು ಚಿತ್ರತಂಡ  ವಿಕ್ರಾಂತ್ ರೋಣ  ಎಂದು ಬದಲಾಯಿಸಿದ್ದು, ಹೊಸ ಶೀರ್ಷಿಕೆ ಯನ್ನು ಒಳಗೊಂಡಂತೆ ಕಿಚ್ಚನ ಕಟೌಟ್ ಅನ್ನು ಪ್ರಪಂಚದ ಅತೀ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದಿದ್ದರು.

ಇದನ್ನೂ ಓದಿ:“ಹಾರ್ಮ್ ಫುಲ್ ಕಂಟೆಂಟ್ ಗಳನ್ನು ನಿಯಂತ್ರಿಸಲು ಹೊಸ ತಂತ್ರ” : ಫೇಸ್ ಬುಕ್

ನಿರ್ದೇಶಕ ಅನೂಪ್ ಭಂಡಾರಿ ಆ್ಯಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾವನ್ನು ಜಾಕ್ ಮಂಜು ಮತ್ತು ಅಲಂಕಾರ್ ಪಾಂಡಿಯನ್ ನಿರ್ಮಾಣ ಮಾಡುತ್ತಿದ್ದಾರೆ. ನಿರೂಪ್ ಭಂಡಾರಿ, ನೀತಾ ಅಶೋಕ್ ಪ್ರಮುಖ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿರುವ ಈ ಸಿನಿಮಾದಲ್ಲಿ  ಅಜನೀಶ್ ಲೋಕನಾಥ್ ಸಂಗೀತವಿರಲಿದೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next