Advertisement
ಮಂಗನ ಕಾಯಿಲೆ ವೈರಸ್ ಪತ್ತೆಗೆ 2014ರಲ್ಲಿ ಆರಂಭಗೊಂಡಿದ್ದ ರ್ಯಾಪಿಡ್ ಟೆಸ್ಟ್ ಪಾಲಿಮರೈಸ್ಡ್ ಚೈನ್ ರಿಯಾಕ್ಷನ್ (ಆರ್‌ಟಿಪಿಸಿಆರ್) ಪ್ರಯೋಗಾಲಯ ನಾಲ್ಕು ವರ್ಷ ಬಳಿಕ ಕಾರ್ಯಾರಂಭಕ್ಕೆ ಸಿದ್ಧವಾಗಿದೆ. ಸೋಮವಾರದಿಂದ ಶಿವಮೊಗ್ಗದಲ್ಲೇ ಶಂಕಿತರ ರಕ್ತ ಪರೀಕ್ಷೆ ನಡೆಯಲಿದೆ.
Related Articles
Advertisement
ರಾಜ್ಯದಲ್ಲಿ ಉಲ್ಬಣವಾಗುತ್ತಿರುವ ಎಚ್1 ಎನ್1, ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್‌ಡಿ), ಡೆಂಘೀ, ಚಿಕುನ್‌ಗುನ್ಯಾ, ಇಲಿ ಜ್ವರ ಸೇರಿದಂತೆ ಶಂಕಿತ ವೈರಾಣು ಕಾಯಿಲೆಗಳಿಂದ ಬಳಲುತ್ತಿರುವವರ ರಕ್ತ, ಕಫವನ್ನು ಪುಣೆಯ ಆರ್‌ಟಿಪಿಸಿಆರ್ ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಬರುವವರೆಗೆ ಕಾಯಬೇಕು. ಅಲ್ಲಿಯವರೆಗೆ ರೋಗಿಯ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಮನಗಂಡು ಪ್ರಯೋಗಾಲಯಕ್ಕೆ ರಾಜ್ಯ ಸರಕಾರ ಹಸಿರು ನಿಶಾನೆ ನೀಡಿತ್ತು. ಆದರೆ, ಸೌಕರ್ಯಗಳ ಕೊರತೆಯಿಂದಾಗಿ ಪ್ರಯೋಗಾಲಯ ಇದ್ದೂ ಇಲ್ಲದಂತಾಗಿತ್ತು.
ಬಡವರಿಗೆ ಅನುಕೂಲವಾಗಲಿ ಎಂಬ ಸದಾಶಯದೊಂದಿಗೆ ಒಂದೇ ದಿನ ಸಾವಿರಾರು ರೋಗಿಗಳ ರಕ್ತ, ಕಫದ ಪರೀಕ್ಷೆ ಫಲಿತಾಂಶ ನೀಡಬಹುದಾದ ಅತ್ಯಾಧುನಿಕ ಸರಕಾರಿ ಸ್ವಾಮ್ಯದ ಆರ್‌ಟಿಪಿಸಿಆರ್ ಪ್ರಯೋಗಾಲಯ ಸ್ಥಾಪಿಸಲಾಗಿದೆ. ರೋಗಿಯ ರಕ್ತದ ಮಾದರಿಯನ್ನು ಆರ್‌ಟಿಪಿಸಿಆರ್‌ನಲ್ಲಿ ಪರೀಕ್ಷೆಗೆ ಒಳಪಡಿಸಿದರೆ, ಆರಂಭಿಕ ಹಂತದಲ್ಲಿಯೇ ವೈರಾಣುಗಳನ್ನು ಪತ್ತೆ ಹಚ್ಚಿ ಆಗಬಹುದಾದ ಅನಾಹುತದ ಪ್ರಮಾಣ ಕುಗ್ಗಿಸುವ ಸಾಧ್ಯತೆಯೂ ಇದೆ. ಈ ಪ್ರಯೋಗಾಲಯ ಸರಿಯಾಗಿ ಕಾರ್ಯ ನಿರ್ವಹಿಸಿದರೆ,ಪುಣೆ ಅಥವಾ ಬೆಂಗಳೂರಿನ ಮೇಲೆ ಅವಲಂಬಿಸುವುದು ತಪ್ಪಲಿದೆ. ಹೀಗಾಗಿ ಮತ್ತೆ ಪ್ರಯೋಗಾಲಯ ಕಾರ್ಯಾರಂಭ ಮಾಡಲಿದ್ದು ಕಾಯಲೆ ಪತ್ತೆ ಹಾಗೂ ನಿಯಂತ್ರಣಕ್ಕೆ ಅನುಕೂಲವಾಗಲಿದೆ.
ಎಲ್ಲ ಸಿದ್ಧತೆ: ಕಳೆದ 15 ದಿನಗಳಲ್ಲಿ ಸಾಗರ ತಾಲೂಕಿನ ಅರಳಗೋಡು ಗ್ರಾಪಂ ವ್ಯಾಪ್ತಿಯ ಆರು ಮಂದಿ ಮಂಗನ ಕಾಯಿಲೆಗೆ ಬಲಿಯಾಗಿದ್ದಾರೆ. ಕೋಟ್ಯಂತರ ರೂ. ಖರ್ಚು ಮಾಡಿ ಪ್ರಯೋಗಲಾಯ ಸ್ಥಾಪಿಸಿದರೂ ಲ್ಯಾಬ್ ಸಕಾಲಕ್ಕೆ ಲಭ್ಯವಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಹಿಂದೆದಿಗಿಂತಲೂ ಹೆಚ್ಚು ಮಂದಿ ಮಾರಕ ಕಾಯಿಲೆಗೆ ಬಲಿಯಾಗಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. 70ಕ್ಕೂ ಹೆಚ್ಚು ಮಂದಿ ರಕ್ತದ ಮಾದರಿಯನ್ನು ಈಗಾಗಲೇ ಪುಣೆಗೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬರುವುದು ತಡವಾಗುತ್ತಿದ್ದರಿಂದ ಚಿಕಿತ್ಸೆಗೆ ತೊಡಕಾಗಿತ್ತು. ಸೋಮವಾರದಿಂದ ಇಲ್ಲೇ ರಕ್ತ ತಪಾಸಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೋಮವಾರದಿಂದ ಶಿವಮೊಗ್ಗದಲ್ಲೇ ರಕ್ತದ ಮಾದರಿ ಪರೀಕ್ಷೆ ನಡೆಸಲಾಗುವುದು. ಇದಕ್ಕಾಗಿ ವಾರ, ಹದಿನೈದು ದಿನ ಕಾಯುವುದು ತಪ್ಪಲಿದೆ. ಮಂಗಗಳು ಸತ್ತಿದ್ದು ಕಂಡುಬಂದಲ್ಲಿ ತಕ್ಷಣ ನಾಶಪಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಕೂಂಬಿಂಗ್ ನಡೆಸುತ್ತಿದ್ದಾರೆ. ಸ್ಥಳೀಯ ಆಸ್ಪತ್ರೆಯಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಗ್ರಾಮದಲ್ಲಿಯೇ ಆ್ಯಂಬುಲೆನ್ಸ್‌ಗಳನ್ನು ಇಡಲಾಗಿದೆ.
ಕೆ.ಎ. ದಯಾನಂದ್, ಜಿಲ್ಲಾಧಿಕಾರಿ ಶರತ್ ಭದ್ರಾವತಿ