Advertisement

ಕೀಪ್ಯಾಡ್‌ ಉಗ್ರರಿಗೆ ಬಲೆ   

02:07 PM May 28, 2018 | Team Udayavani |

ಶ್ರೀನಗರ: ಉಗ್ರರ ಸಂಹಾರ ಕಾರ್ಯಾಚರಣೆ ಭರದಿಂದ ಸಾಗಿರುವ ನಡುವೆಯೇ ಜಮ್ಮು-ಕಾಶ್ಮೀರದ ಪೊಲೀಸರು ಈಗ ಹೊಸ ಹೊಣೆಯೊಂದನ್ನು ಹೊತ್ತುಕೊಂಡಿದ್ದಾರೆ. ಅದೇನೆಂದರೆ, “ಕೀಪ್ಯಾಡ್‌ ಜೆಹಾದಿ’ಗಳನ್ನು ಪತ್ತೆ ಮಾಡಿ, ಸೆರೆಹಿಡಿಯುವುದು!

Advertisement

ಹೌದು, ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ನಂಥ ಸಾಮಾಜಿಕ ಜಾಲತಾಣಗಳು, ಕೆಲವು ವೆಬ್‌ಸೈಟ್‌ಗಳಲ್ಲಿ ಸಾಮಾಜಿಕ ಸ್ವಾಸ್ಥ é ಹಾಗೂ ಕಾನೂನು ಸುವ್ಯವಸ್ಥೆ ಕೆಡಿಸುವಂಥ ಪೋಸ್ಟ್‌ಗಳನ್ನು ಹಾಕುವುದು, ಆ ಮೂಲಕ ಜನರ ಮನದಲ್ಲಿ ವಿಷಬೀಜ ಬಿತ್ತುವುದು, ಕೋಮು ಸೌಹಾರ್ದ ೆ ಕದಡಿಸುವುದು ಈ ಕೀಪ್ಯಾಡ್‌ ಜೆಹಾದಿಗಳ ಕೆಲಸ. ಎಲ್ಲೋ ಕುಳಿತು ಕೀಪ್ಯಾಡ್‌ಗಳ ಮೂಲಕವೇ ದುಷ್ಕೃತ್ಯ ಎಸಗುವಂಥ ಈ ಕಿಡಿಗೇಡಿಗಳನ್ನು ಹಿಡಿಯುವುದೇ ಪೊಲೀಸರಿಗೆ ಸವಾಲಿನ ಕೆಲಸವಾಗಿದೆ.

ಆದರೆ, ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿರುವ ಪೊಲೀಸರು, ಇಂಥ ಪೋಸ್ಟ್‌ಗಳನ್ನು ವೈರಲ್‌ ಮಾಡುತ್ತಿದ್ದ ಐದು ಟ್ವಿಟರ್‌ ಖಾತೆಗಳ ವಿರುದ್ಧ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಜತೆಗೆ, ಅಂಥ ಖಾತೆಗಳ ವಿವರ ನೀಡುವಂತೆ ಟ್ವಿಟರ್‌, ಫೇಸ್‌ಬುಕ್‌ನಂಥ ಸಂಸ್ಥೆಗಳಿಗೂ ಕೋರಿಕೆ ಸಲ್ಲಿಸಿದ್ದಾರೆ. ವಾಟ್ಸ್‌ಆ್ಯಪ್‌, ಟೆಲಿಗ್ರಾಂನಂಥ ಸೇವೆಗಳ ಮೇಲೂ ಪೊಲೀಸರು ಕಣ್ಣಿಟ್ಟಿದ್ದಾರೆ.

5,500 ಬಂಕರ್‌ ನಿರ್ಮಾಣ: ಏತನ್ಮಧ್ಯೆ, ಜಮ್ಮು-ಕಾಶ್ಮೀರದ ರಜೌರಿ ಜಿಲ್ಲಾಡ ಳಿತವು ಗಡಿಗ್ರಾಮದ ಜನರ ನೆರವಿಗಾಗಿ 5,500 ಅಂಡರ್‌ಗ್ರೌಂಡ್‌ ಬಂಕರ್‌ಗಳು, 200 ಸಮುದಾಯ ಭವನಗಳು ಹಾಗೂ ಬಾರ್ಡರ್‌ ಭವನಗಳನ್ನು ನಿರ್ಮಿಸಿವೆ. ಪಾಕ್‌ ಪದೇ ಪದೆ ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಕಾರಣ, ಗ್ರಾಮಸ್ಥರಿಗೆ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next