Advertisement

Nawada; ಖರ್ಗೆ ಮಾತುಗಳು ದೇಶ ವಿಭಜಿಸಲು ಬಯಸುವ ಜನರ ಮನಸ್ಥಿತಿ ತೋರಿಸುತ್ತದೆ: ಪ್ರಧಾನಿ ಮೋದಿ

03:44 PM Apr 07, 2024 | Team Udayavani |

ಹೊಸದಿಲ್ಲಿ: ರಾಜಸ್ಥಾನದ ರ್ಯಾಲಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ‘ಪ್ರಸ್ತುತತೆ’ಯನ್ನು ಪ್ರಶ್ನಿಸಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಭಾನುವಾರ ತೀವ್ರ ವಾಗ್ದಾಳಿ ನಡೆಸಿದರು. ಖರ್ಗೆಯವರ ಮಾತುಗಳು ದೇಶವನ್ನು ವಿಭಜಿಸಲು ಬಯಸುವ ಜನರ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದರು.

Advertisement

ಇದಕ್ಕೂ ಮೊದಲು, ರಾಜಸ್ಥಾನದಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ಮೋದಿಯವರ ಇತ್ತೀಚಿನ ಭಾಷಣವನ್ನು ಉಲ್ಲೇಖಿಸಿದ ಖರ್ಗೆ ಅವರು 370 ನೇ ವಿಧಿಯ ರದ್ದತಿಯನ್ನು ಪ್ರಸ್ತಾಪಿಸಿದರು. ಇದು ರಾಜಸ್ಥಾನದ ವಿಷಯವಲ್ಲ, ಆದರೆ ಜಮ್ಮು ಮತ್ತು ಕಾಶ್ಮೀರದ ಸಮಸ್ಯೆ ಎಂದು ಹೇಳಿದ್ದರು.

ಬಿಹಾರದ ನವಾಡದಲ್ಲಿ ಮಾತನಾಡಿದ ಪಿಎಂ ಮೋದಿ, ಖರ್ಗೆಯವರ ಮಾತು ಕೇಳಿ ನಾಚಿಕೆಯಾಗಿದೆ ಎಂದರು.

“ಮೋದಿ ಅವರು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಲು ಗ್ಯಾರಂಟಿ ನೀಡಿದರು. ಫಲಿತಾಂಶವೇನು? ನಾವು ಅದನ್ನು ಮಾಡಿದ್ದೇವೆ. ಅವರು (ವಿಪಕ್ಷ ಕೂಟ) ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಉಳಿಸುವ ಬಗ್ಗೆ ಮಾತನಾಡುತ್ತಾರೆ, ಆದರೆ ನೀವು ಅದನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಗೊಳಿಸಲಿಲ್ಲ” ಎಂದು ಅವರು ಹೇಳಿದರು.

“ನೀವು ಸಂವಿಧಾನದ ಬಗ್ಗೆ ರಾಗದಲ್ಲಿ ಹಾಡಿದ್ದೀರಿ. ಆದರೆ, ಈ ಮೋದಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಬಹಳ ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ಕೊಂಡೊಯ್ದರು,” ಎಂದು ಪ್ರಧಾನಿ ಹೇಳಿದರು.

Advertisement

ಖರ್ಗೆಯವರು ತಮ್ಮ ಭಾಷಣದಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು 370 ನೇ ವಿಧಿಯ ಬಗ್ಗೆ ಹೇಳಿದ್ದನ್ನು ಉಲ್ಲೇಖಿಸಿದ ಪ್ರಧಾನಿ, ಬಿಹಾರ ಮತ್ತು ರಾಜಸ್ಥಾನದ ಯುವಕರು ಜಮ್ಮು ಮತ್ತು ಕಾಶ್ಮೀರವನ್ನು ರಕ್ಷಿಸಲು ಹೋಗಿ ತಮ್ಮ ಪರಮ ತ್ಯಾಗವನ್ನು ಅರ್ಪಿಸಿದರು ಎಂದು ಹೇಳಿದರು.

“ಇದನ್ನು ಕೇಳಲು ನನಗೆ ನಾಚಿಕೆಯಾಯಿತು. ಕಾಂಗ್ರೆಸ್ ನನ್ನ ಮಾತನ್ನು ಕೇಳಬೇಕು. ರಾಜಸ್ಥಾನ ಮತ್ತು ಬಿಹಾರದ ಯುವಕರು ಜಮ್ಮು ಮತ್ತು ಕಾಶ್ಮೀರವನ್ನು ರಕ್ಷಿಸುವ ಸಂದರ್ಭದಲ್ಲಿ ತಮ್ಮ ಪರಮ ತ್ಯಾಗವನ್ನು ನೀಡಿದರು. ಆದರೆ ನೀವು ‘ಕಾಶ್ಮೀರ ಸೇ ಕ್ಯಾ ಲೇನಾ ದೇನಾ’ ಎಂದು ಹೇಳುತ್ತಿದ್ದೀರಿ. ಇದು ತುಕ್ಡೆ-ತುಕ್ಡೆ ಗ್ಯಾಂಗ್‌ನ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

“ಇಂತಹ ಭಾಷೆ ಬಳಸಿದ್ದಕ್ಕಾಗಿ ನಾವು ಈ ಜನರಲ್ಲಿ ಕ್ಷಮೆಯಾಚಿಸಬೇಕೇ? ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರಿಗೆ ನಾವು ಅಗೌರವ ತೋರಿಸಬೇಕೇ?” ಎಂದು ಪಿಎಂ ಮೋದಿ ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next