Advertisement

Jammu and Kashmirಕ್ಕೆ ರಾಜ್ಯ ಸ್ಥಾನಮಾನ ಸಿಗಲಿದೆ, ಶೀಘ್ರವೇ ವಿಧಾನಸಭೆ ಚುನಾವಣೆ; ಪ್ರಧಾನಿ

01:21 PM Apr 12, 2024 | Team Udayavani |

ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ಶೀಘ್ರದಲ್ಲಿ ರಾಜ್ಯ ಸ್ಥಾನಮಾನ ನೀಡಲಾಗುವುದು. ಅಲ್ಲದೇ ಒಂದು ಬಾರಿ ರಾಜ್ಯ ಸ್ಥಾನಮಾನ ನೀಡಿದ ನಂತರ ವಿಧಾನಸಭೆ ಚುನಾವಣೆ ನಡೆಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement

ಇದನ್ನೂ ಓದಿ:Movie: ಬಹುಕೋಟಿ ʼರಾಮಾಯಾಣʼಕ್ಕೆ ಬಂಡವಾಳ ಹಾಕಲಿದ್ದಾರೆ ಯಶ್:‌ ʼರಾವಣʼನಾಗಿ ಕಾಣಿಸೋದು ಡೌಟ್

ಜಮ್ಮು-ಕಾಶ್ಮೀರದ ಉಧಾಂಪುರ್‌ ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜಮ್ಮು-ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಮಯ ಹೆಚ್ಚು ದೂರವಿಲ್ಲ. ಜಮ್ಮು-ಕಾಶ್ಮೀರದಕ್ಕೆ ರಾಜ್ಯ ಸ್ಥಾನಮಾನ ಸಿಗಲಿದೆ. ಈ ಮೂಲಕ ನಿಮ್ಮ ಕನಸುಗಳನ್ನು ನಿಮ್ಮ ಶಾಸಕರು ಮತ್ತು ಸಚಿವರ ಜೊತೆ ಹಂಚಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಯಾವುದೇ ಭಯೋತ್ಪಾದನೆ, ಬಂದ್‌, ಕಲ್ಲು ತೂರಾಟದಂತಹ ಭಯವಿಲ್ಲದೇ ಜಮ್ಮು-ಕಾಶ್ಮೀರದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ದಯವಿಟ್ಟು ನನ್ನ ಮೇಲೆ ವಿಶ್ವಾಸ ಇಡಿ, ಕಳೆದ 60 ವರ್ಷಗಳಿಂದ ಬಗೆಹರಿಯದ ಜಮ್ಮು-ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸುತ್ತೇನೆ. ಕಳೆದ 10 ವರ್ಷಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಸಂಪೂರ್ಣವಾಗಿ ಬದಲಾವಣೆಯಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ರದ್ದುಗೊಳಿಸಿರುವ ಕಲಂ 370 ಅನ್ನು ಮತ್ತೆ ವಾಪಸ್‌ ತರುವುದಾಗಿ ಹೇಳಿರುವ ಕಾಂಗ್ರೆಸ್‌ ಮತ್ತು ವಿರೋಧಪಕ್ಷಗಳಿಗೆ ಸವಾಲೆಸೆದಿರುವ ಪ್ರಧಾನಿ ಮೋದಿ, ಜಮ್ಮು-ಕಾಶ್ಮೀರದಲ್ಲಿ ಏನು ಮಾಡಬೇಕೆಂದು ಭರವಸೆ ನೀಡಿದ್ದೇನೋ ಅದನ್ನು ಈಡೇರಿಸುವುದಾಗಿ ತಿಳಿಸಿದರು.

Advertisement

ಉಧಾಂಪುರ್‌ ಮತ್ತು ಜಮ್ಮು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಪ್ರಧಾನಿ ಮೋದಿ ಮತದಾರರಲ್ಲಿ ಮನವಿ ಮಾಡಿಕೊಂಡರು. ಏಪ್ರಿಲ್‌ 19ರಂದು ಉಧಾಂಪುರ್‌ ನಲ್ಲಿ ಚುನಾವಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next