Advertisement

Jammu Kashmir: ಉಗ್ರ ಚಟುವಟಿಕೆಗೆ ಬೆಂಬಲ-ಪ್ರಾಂಶುಪಾಲರು, ಪ್ರೊಫೆಸರ್‌ ಸೇರಿ 57 ಮಂದಿ ವಜಾ

12:38 PM Mar 26, 2024 | Team Udayavani |

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನದ ಆರ್ಟಿಕಲ್‌ 370 ಅನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ ಬಳಿಕ ಕಳೆದ ಎರಡು ವರ್ಷಗಳಲ್ಲಿ ಭಯೋತ್ಪಾದಕ ಚಟುವಟಿಕೆಯನ್ನು ಬೆಂಬಲಿಸಿದ ಆರೋಪದಲ್ಲಿ ಕಾಲೇಜು ಪ್ರಾಂಶುಪಾಲರು, ಪ್ರೊಫೆಸರ್‌, ಪೊಲೀಸರು, ವೈದ್ಯರು ಸೇರಿದಂತೆ 57 ಸರ್ಕಾರಿ ನೌಕರರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು ದಿ ಪ್ರಿಂಟ್‌ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:Koppala: ಮೋದಿ ಮೋದಿ ಎಂದರೆ ಕಪಾಳಕ್ಕೆ ಹೊಡಿಯಿರಿ ಎಂದ ಸಚಿವ ತಂಗಡಗಿ ವಿರುದ್ಧ ಪ್ರಕರಣ ದಾಖಲು

ಭದ್ರತಾ ಸಂಸ್ಥೆಯ ಮೂಲಗಳ ಪ್ರಕಾರ, ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಮಟ್ಟಹಾಕಲು ಆರ್ಟಿಕಲ್‌ ಕಲಂ 370ಅನ್ನು ರದ್ದುಪಡಿಸಲಾಗಿತ್ತು. ಆದರೆ ಅದಕ್ಕೆ ಬೆಂಬಲ ನೀಡಿದ 57 ಮಂದಿಯಲ್ಲಿ 21 ಮಂದಿ ಶಿಕ್ಷಣ ಇಲಾಖೆ ಸೇರಿದ್ದಾರೆ, ಇದರಲ್ಲಿ ಹಿರಿಯ ಪ್ರಾಧ್ಯಾಪಕರು, ಉಪನ್ಯಾಸಕರು, ಪ್ರಾಂಶುಪಾಲರು ಮತ್ತು ಶಾಲಾ ಉದ್ಯೋಗಿಗಳಿದ್ದಾರೆ ಎಂದು ತಿಳಿಸಿದೆ.

ವಿಚಾರಣೆಯಲ್ಲಿ, ಕಾಲೇಜಿನ ಸಹಾಯಕ ಪ್ರಾಧ್ಯಾಪಕರೊಬ್ಬರು ಲಷ್ಕರ್‌ ಎ ತೊಯ್ಬಾದ ಜತೆ ಸಂಪರ್ಕ ಹೊಂದಿದ್ದು, ಕಾಶ್ಮೀರ ವಿಶ್ವವಿದ್ಯಾಲಯದಲ್ಲಿ ಯುವಕರ ನೇಮಕಾತಿಯ ಹೊಣೆ ಹೊತ್ತಿರುವುದು ತಿಳಿದು ಬಂದಿರುವುದಾಗಿ ವರದಿ ವಿವರಿಸಿದೆ.

ಪೊಲೀಸ್‌ ಇಲಾಖೆಯಲ್ಲಿ ಡೆಪ್ಯುಟಿ ಸೂಪರಿಟೆಂಡೆಂಟ್‌ ಆಫ್‌ ಪೊಲೀಸ್‌ ಸೇರಿದಂತೆ 11 ಮಂದಿಯನ್ನು ವಜಾಗೊಳಿಸಿದ್ದು, ಆರೋಗ್ಯ ಇಲಾಖೆಯಲ್ಲಿ ಮೂವರು ಹಿರಿಯ ವೈದ್ಯರು ಸೇರಿದಂತೆ ಆರು ಮಂದಿಯನ್ನು ವಜಾಗೊಳಿಸಿರುವುದಾಗಿ ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next