Advertisement

ʼಬಸ್ತಾರ್‌ʼ ಮೂಲಕ ಮತ್ತೊಂದು ಸತ್ಯ ಘಟನೆಯ ಕಥೆ ಹೇಳಲು ಹೊರಟ ʼದಿ ಕೇರಳ ಸ್ಟೋರಿʼ ತಂಡ

05:17 PM Jun 26, 2023 | Team Udayavani |

ಮುಂಬಯಿ:  ʼದಿ ಕೇರಳ ಸ್ಟೋರಿʼ ದೇಶದಲ್ಲಿ ಸಂಚಲನ ಮೂಡಿಸಿದ್ದು ಗೊತ್ತೇ ಇದೆ. ಸಿನಿಮಾದ ಓಟಿಟಿ ರಿಲೀಸ್‌ ಬಗೆಗಿನ ವಿಚಾರ ಚರ್ಚೆಯಲ್ಲಿರುವಾಗಲೇ ಸಿನಿಮಾ ತಂಡ ಮತ್ತೊಂದು ಹೊಸ ಸಿನಿಮಾವನ್ನು ಅನೌನ್ಸ್‌ ಮಾಡಿದೆ.

Advertisement

ʼದಿ ಕೇರಳ ಸ್ಟೋರಿ ಕೇರಳದ ಹಿಂದು ಯುವತಿಯ ಕಥೆಯಾಗಿದ್ದು, ಮತಾಂತರ ಹಾಗೂ ಭಯೋತ್ಪಾದನೆಯ ವಿಚಾರವೂ ಸಿನಿಮಾದಲ್ಲಿತ್ತು. ಈ ಕಾರಣದಿಂದ ಸಿನಿಮಾಕ್ಕೆ ಕೆಲ ಕಡೆ ಭಾರೀ ವಿರೋಧ ವ್ಯಕ್ತವಾಗಿತ್ತು. ಕೆಲ ಕಡೆ ಬ್ಯಾನ್‌ ಹಾಗೂ ತಡೆ ನೀಡಲಾಗಿತ್ತು. ಈ ಎಲ್ಲ ಕಾರಣದಿಂದ ಚಿತ್ರ ತಂಡಕ್ಕೆ ಜೀವ ಬೆದರಿಕೆಯೂ ಬಂದಿತ್ತು.

ಇದೆಲ್ಲ ವಿವಾದದ ಬಳಿಕ ಇದೀಗ ‘ದಿ ಕೇರಳ ಸ್ಟೋರಿʼಯನ್ನು ನಿರ್ದೇಶನ ಮಾಡಿರುವ ಸುದೀಪ್ತೋ ಸೇನ್ ಹಾಗೂ ಸಿನಿಮಾವನ್ನು ನಿರ್ಮಾಣ ಮಾಡಿರುವ ವಿಪುಲ್ ಅಮೃತಲಾಲ್ ಶಾ ಇಬ್ಬರು ಜೊತೆಯಾಗಿ ಮತ್ತೊಂದು ಸಿನಿಮಾವನ್ನು ಮಾಡಲಿದ್ದಾರೆ. ಈ ಸಿನಿಮಾಕ್ಕೆ ʼಬಸ್ತಾರ್‌ʼ ಎಂದು ಟೈಟಲ್‌ ಇಡಲಾಗಿದೆ.

ಸನ್  ಶೈನ್ ಪಿಕ್ಚರ್ಸ್ ʼಬಸ್ತಾರ್‌ʼ ಸಿನಿಮಾದ ಪೋಸ್ಟರ್‌ ನ್ನು ಹಂಚಿಕೊಂಡಿದೆ. ಮತ್ತೊಂದು ಸತ್ಯ ಘಟನೆಗೆ ಸಾಕ್ಷಿಯಾಗಲು ಸಿದ್ಧರಾಗಿ. ನಿಮ್ಮ ಕ್ಯಾಲೆಂಡರ್‌ನಲ್ಲಿ ಏಪ್ರಿಲ್ 5, 2024 ರ ದಿನವನ್ನು ಗುರುತಾಗಿ ಇಟ್ಟುಕೊಳ್ಳಿ ಎಂದು ಪೋಸ್ಟರ್‌ ಹಂಚಿಕೊಂಡಿದೆ.

ಇದನ್ನೂ ಓದಿ: WATCH: ಪ್ರಿಯಕರ ಅರ್ಜುನ್‌ ಬರ್ತ್‌ ಡೇಗೆ ಮೈ ಚಳಿ ಬಿಟ್ಟು ಹಾಟ್‌ ಆಗಿ ಹೆಜ್ಜೆ ಹಾಕಿದ ಮಲೈಕಾ

Advertisement

ದಟ್ಟ ಕಾಡಿನಲ್ಲಿ ಹೋರಾಟದ ಪ್ರತೀಕದಂತೆ ಕೆಂಪು ಬಾವುಟವಿದೆ. ಅಲ್ಲೇ ಬೃಹತ್‌ ಮರವೊಂದು ಉರುಳಿ ಬಿದ್ದಿದೆ. ಹಿನ್ನೆಲೆಯಲ್ಲಿ ಹೊಗೆಯಿರುವುದನ್ನು ಪೋಸ್ಟರ್‌ ನಲ್ಲಿ ತೋರಿಸಲಾಗಿದ್ದು, ಅದರ ಪಕ್ಕದಲ್ಲೇ ಗನ ಕೂಡ ಇದೆ.ʼʼಅಡಗಿದ ಸತ್ಯ ದೇಶದಲ್ಲಿ ಸಂಚಲನ ಮೂಡಿಸಲಿದೆ” ಪೋಸ್ಟರ್‌ ಮೇಲೆ ಬರೆಯಲಾಗಿದೆ. ಮೇಲ್ನೋಟಕ್ಕೆ ಇದು ನಕ್ಸಲ್‌ ಚಟುವಟಿಕೆ ಸುತ್ತ ಸಾಗುವ ಕಥೆಯಂತೆ ಕಾಣುತ್ತದೆ.

ʼಬಸ್ತಾರ್‌ʼ ಛತ್ತೀಸ್‌ಗಢ ರಾಜ್ಯದ ಒಂದು ಜಿಲ್ಲೆ ಆಗಿದೆ. ಬುಡಕಟ್ಟು ಜನಸಂಖ್ಯೆಗೆ ಈ ಜಿಲ್ಲೆ ಹೆಸರುವಾಸಿಯಾಗಿದೆ. ಇಲ್ಲಿನ ಬುಡಕಟ್ಟು ಜನ ಈಗಲೂ ಕೂಡ ಹೊರಗಿನವರ ಬಳಿ ಅಷ್ಟಾಗಿ ಸಂಪರ್ಕ ಸಾಧಿಸದೆ ದಟ್ಟ ಕಾಡಿನಲ್ಲೇ ವಾಸಿಸುತ್ತಿದ್ದಾರೆ.

ಸದ್ಯ ʼಬಸ್ತಾರ್‌ʼ ಸಿನಿಮಾದ ಕಥಾಹಂದರದ ಬಗ್ಗೆ ಚಿತ್ರತಂಡ ಹೆಚ್ಚಿನ ಮಾಹಿತಿಯನ್ನು ರಿವೀಲ್‌ ಮಾಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಚಿತ್ರತಂಡ ಮಾಹಿತಿಯನ್ನು ಹಂಚಿಕೊಳ್ಳಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next