Advertisement
ಕಾಂಗ್ರೆಸ್‌ನ ಟ್ವೀಟ್‌ಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಕಣಿವೆ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದಾಗಲೇ ಇಂಥ ದುರ್ಘಟನೆಗಳು ನಡೆದಿವೆ ಎಂದು ತಿರುಗೇಟು ನೀಡಿದೆ. ಬಿಜೆಪಿಯಿಂದ ತೀಕ್ಷ್ಣ ಪ್ರತಿಕ್ರಿಯೆ ಬಂದ ಅನಂತರ ತನ್ನ ವಿವಾದಾತ್ಮಕ ಟ್ವೀಟ್ ಅನ್ನು ಕೇರಳ ಕಾಂಗ್ರೆಸ್ ಡಿಲೀಟ್ ಮಾಡಿದೆ.
Related Articles
Advertisement
ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಸಲಹೆಗಾರರಾದ ಕಂಚನ್ ಗುಪ್ತಾ ಪ್ರತಿಕ್ರಿಯಿಸಿದ್ದು, “1989ರ ಸೆಪ್ಟಂಬರ್‌ನಲ್ಲಿ ಕಾಶ್ಮೀರಿ ಪಂಡಿತರ ಮೇಲೆ ದಾಳಿಗಳು ಆರಂಭಗೊಂಡಿದ್ದವು. ಹಾಗಾಗಿ ಆ ವರ್ಷದ ನವೆಂಬರ್-ಡಿಸೆಂಬರ್ ಹೊತ್ತಿಗೆ ಪಂಡಿತರು ಕಾಶ್ಮೀರ ವನ್ನು ತೊರೆಯಬೇಕಾಯಿತು. ಆಗ ಅಲ್ಲಿಯೇ ಉಳಿದು ಕೊಂಡ ಕುಟುಂಬಗಳ ಮೇಲೆ 1990ರ ಜನವರಿಯ ಕರಾಳ ರಾತ್ರಿಯೊಂದರ ಸಂದರ್ಭದಲ್ಲಿ ಮತ್ತೆ ದಾಳಿಗಳಾ ದಾಗ ಪ್ರಾಯಶಃ ಜ. 20ರಂದು ಆ ಕುಟುಂಬಗಳು ಕಣಿವೆಯನ್ನು ತೊರೆದವು. ಇಂಥ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರದಲ್ಲಿ ಪ್ರಧಾನಿಯಾಗಿದ್ದ ವಿ.ಪಿ. ಸಿಂಗ್ ವಿಫಲವಾದರು’ ಎಂದು ಹೇಳಿದ್ದಾರೆ.
ಪೊಲೀಸರಿಗೆ ರಜೆ!: ದ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಮಧ್ಯಪ್ರದೇಶದ ಪೊಲೀಸರೂ ವೀಕ್ಷಿಸಲು ಅಲ್ಲಿನ ರಾಜ್ಯ ಸರಕಾರ ಅನುಕೂಲ ಕಲ್ಪಿಸಿದೆ. ಸಿನೆಮಾ ವೀಕ್ಷಣೆಗಾಗಿ ದಿನ ನಿಗದಿಪಡಿಸುವ ಪೊಲೀಸರಿಗೆ ಆ ದಿನದಂದು ರಜೆ ನೀಡುವುದಾಗಿ ಪ್ರಕಟಿಸಿದೆ.
ಸಿನೆಮಾ ವೀಕ್ಷಿಸಿದ ಹಿಮಂತ “ಪರಿವಾರ’: ಅಲ್ಲಿನ ಮುಖ್ಯಮಂತ್ರಿ ಹಿಮಂತ ಬಿಸ್ವಾಸ್ ಅವರು, ತಮ್ಮ ಸಂಪುಟ ಸಹೋದ್ಯೋಗಿಗಳು, ಬಿಜೆಪಿ ಶಾಸಕರು ಹಾಗೂ ಅಸ್ಸಾಂ ಸರಕಾರದಲ್ಲಿ ಭಾಗಿಯಾಗಿರುವ ಅಸೋಂ ಗಣ ಪರಿಷತ್, ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ ಪಕ್ಷದ ಶಾಸಕರೊಂದಿಗೆ ಗುವಾಹಟಿಯ ಮಲ್ಟಿಪ್ಲೆಕ್ಸ್ ಒಂದರಲ್ಲಿ ಈ ಸಿನೆಮಾ ವೀಕ್ಷಿಸಿದ್ದಾರೆ.
ದಾಖಲೆಯ ಗಳಿಕೆ ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಕುರಿತಾಗಿ ಮಾಡ ಲಾಗಿರುವ “ದಿ ಕಾಶ್ಮೀರ್ ಫೈಲ್ಸ್’ ಸಿನೆಮಾ ಭಾರ ತೀಯರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಬಿಡುಗಡೆಯಾದ ದಿನದಂದು 3.55 ಕೋಟಿ ರೂ. ಗಳಿಸಿದ್ದ ಸಿನೆಮಾ ರವಿವಾರದಂದು ಬರೋಬ್ಬರಿ 15.10 ಕೋಟಿ ರೂ. ಗಳಿಸಿದೆ. ರವಿವಾರ ರಾತ್ರಿಯ ವರೆಗೆ ಚಿತ್ರದ ಒಟ್ಟಾರೆ ಗಳಿಕೆ 27.15 ಕೋಟಿ ರೂ. ಆಗಿದೆ. ಕೊರೊನಾ ಮುನ್ನೆಚ್ಚರಿಕ ನಿಯಮಗಳು, “ರಾಧೆ ಶ್ಯಾಮ್’, “ಗಂಗೂಬಾಯಿ ಕಥಿಯಾವಾಡಿ’ ಸಿನೆಮಾಗಳ ಸ್ಪರ್ಧೆಯಿದ್ದರೂ ಕಾಶ್ಮೀರ್ ಫೈಲ್ಸ್ ಒಳ್ಳೆಯ ಗಳಿಕೆ ಪಡೆದಿದೆ.