Advertisement
ಚಿತ್ರಕ್ಕೆ ವಿವಾದದ ನಂಟು2019ರಲ್ಲೇ ಈ ಚಿತ್ರದ ಸಿದ್ಧತೆ ಆರಂಭವಾಗಿದ್ದು, 2020ರಲ್ಲಿ ಶೂಟಿಂಗ್ ಶುರುವಾಗಿತ್ತು. ಅನುಪಮ್ ಖೇರ್ ಮತ್ತು ಮಿಥುನ್ ಚಕ್ರವರ್ತಿ ಅವರು ಲೀಡ್ ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದರು. ವಿಶೇಷವೆಂದರೆ, ಪ್ರಸಕ್ತ ವರ್ಷದ ಗಣರಾಜ್ಯೋತ್ಸವ ದಿನವಾದ ಜ.26ರಂದೇ ಈ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಆ ಸಮಯದಲ್ಲಿ ಒಮಿಕ್ರಾನ್ ಭೀತಿ ಹೆಚ್ಚಾಗಿದ್ದರಿಂದ ಬಿಡುಗಡೆ ಆಗಿರಲಿಲ್ಲ. ವಿವೇಕ್ ಅಗ್ನಿಹೋತ್ರಿ ಅವರ ನಿರ್ದೇಶನದ ಈ ಚಿತ್ರಕ್ಕೆ ಬಿಜೆಪಿ ರಾಜ್ಯಗಳು ತೆರಿಗೆ ವಿನಾಯಿತಿ ನೀಡಿರುವ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಚರ್ಚೆಯಾಗಿದೆ.
ಗುಜರಾತ್ ,ಮಧ್ಯ ಪ್ರದೇಶ,ಕರ್ನಾಟಕ ,ಹರಿಯಾಣ,ಗೋವಾ,ಮಹಾರಾಷ್ಟ್ರ, ರಾಜಸ್ಥಾನ, ಬಿಹಾರದಲ್ಲಿ ಕೆಲವು ಶಾಸ ಕರು ತೆರಿಗೆ ವಿನಾಯಿತಿ ನೀಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ಈ ಮನವಿ ಸಲ್ಲಿಸಿರುವುದು ವಿಶೇಷ. ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ಬಿಜೆಪಿ ಶಾಸಕರಿಂದ ಮನವಿ ಸಲ್ಲಿಕೆಯಾಗಿದೆ. ಕಾಶ್ಮೀರಿ ಪಂಡಿತರ ವಲಸೆಗೆ ಕಾರಣ?
1990ರ ಜುಲೈ 19ರಲ್ಲಿ ಆಗಿನ ರಾಜ್ಯಪಾಲ ಜಗಮೋಹನ್ ರಾಷ್ಟ್ರಪತಿ ಆಳ್ವಿಕೆ ಶುರು ಮಾಡಿದ ಅನಂತರ ಬಹುದೊಡ್ಡ ಗಲಭೆ ಸೃಷ್ಟಿಯಾಗಿತ್ತು. ಸರಕಾರದಲ್ಲಿ, ಕಾಶ್ಮೀರದಲ್ಲಿ ಇದ್ದವರನ್ನು ಅಲ್ಲಿಂದ ಒಕ್ಕಲೆಬ್ಬಿಸುವ ಕಾರ್ಯ ನಡೆದಿತ್ತು. ಆಗ ಉಗ್ರಗಾಮಿಗಳು, ಲೌಡ್ ಸ್ಪೀಕರ್‌ಗಳನ್ನು ಬಳಸಿಕೊಂಡು ಕಾಶ್ಮೀರಿ ಪಂಡಿತರಿಗೆ ಎಚ್ಚರಿಕೆ ನೀಡಿದ್ದರು. ಅಂದರೆ ಒಂದೋ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ಇಲ್ಲವೇ ಈ ಭೂಮಿ ಬಿಟ್ಟು ಹೊರಡಿ, ಇಲ್ಲವಾದರೆ ಸಾಯಲು ಸಿದ್ಧರಾಗಿ ಎಂದು ಹೇಳಿದ್ದರು. ಮಾರ್ಚ್ ಮತ್ತು ಎಪ್ರಿಲ್ ವೇಳೆಗೆ ನೂರಾರು ಕಾಶ್ಮೀರಿ ಪಂಡಿತರು ಸಾವನ್ನಪ್ಪಿದ್ದರು. ಇವರಿಗೆ ಚಿತ್ರಹಿಂಸೆ ನೀಡಿ, ಮಹಿಳೆಯರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಯಿತು. ಈ ವೇಳೆ 3.5 ಲಕ್ಷಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರು ಕಣಿವೆ ತೊರೆದರು. ಕೆಲವರಿಗೆ ಜಮ್ಮು ಭಾಗದಲ್ಲಿ ನಿರಾಶ್ರಿತರ ಶಿಬಿರ ಮಾಡಿ ವಾಸ್ತವ್ಯ ನೀಡಲಾಯಿತು. ಇನ್ನೂ ಕೆಲವರು ಬೇರೆ ಬೇರೆ ರಾಜ್ಯಗಳಿಗೆ ಹೋದರು. ಇತ್ತೀಚೆಗಷ್ಟೇ ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಮಾಡಿದ ಮೇಲೆ ಹಲವಾರು ಕಾಶ್ಮೀರಿ ಪಂಡಿತರು ವಾಪಸ್ ತಮ್ಮ ರಾಜ್ಯಕ್ಕೆ ಹೋಗಿದ್ದಾರೆ.
Advertisement