Advertisement

ಯುಎಇ: ಕಾಶ್ಮೀರ್‌ ಫೈಲ್ಸ್‌ ಬಿಡುಗಡೆಗೆ ಒಪ್ಪಿಗೆ

09:56 PM Mar 31, 2022 | Team Udayavani |

ನವದೆಹಲಿ: ಬಾಲಿವುಡ್‌ ಚಿತ್ರ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ “ದ ಕಾಶ್ಮೀರ್‌ ಫೈಲ್ಸ್‌’ ಚಿತ್ರದಲ್ಲಿನ ಯಾವುದೇ ದೃಶ್ಯಕ್ಕೆ ಕತ್ತರಿ ಹಾಕದೇ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ (ಯುಎಇ) ಪ್ರದರ್ಶನಗೊಳಿಸುವಂತೆ ಅಲ್ಲಿನ ಸರ್ಕಾರ ಅನುಮತಿ ನೀಡಿದೆ.

Advertisement

ಈ ವಿಚಾರವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿರುವ ಅಗ್ನಿಹೋತ್ರಿ, “ನಿಜಕ್ಕೂ ಇದೊಂದು ದೊಡ್ಡ ಜಯ. ಇಸ್ಲಾಮಿಕ್‌ ರಾಷ್ಟ್ರವು ಸತತ ನಾಲ್ಕು ವಾರಗಳ ಕಾಲ ಚಿತ್ರವನ್ನು ಪರಿಶೀಲಿಸಿದ ನಂತರ ಯಾವುದೇ ಕತ್ತರಿ ಪ್ರಯೋಗವಿಲ್ಲದೆ ಚಿತ್ರದ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದೆ. ಚಿತ್ರಕ್ಕೆ 15+ ಪ್ರಮಾಣ ಪತ್ರ ನೀಡಲಾಗಿದೆ. ಏ. 7ರಂದು ಈ ಚಿತ್ರ ಯುಎಇಯಾದ್ಯಂತ ಬಿಡುಗಡೆಯಾಗಲಿದೆ” ಎಂದು ಹೇಳಿದ್ದಾರಲ್ಲದೆ, ಸದ್ಯದಲ್ಲೇ ಈ ಚಿತ್ರ ಸಿಂಗಾಪುರದಲ್ಲಿಯೂ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

“ಭಾರತದಲ್ಲಿ ಕೆಲವರು, ಈ ಚಿತ್ರವನ್ನು ಇಸ್ಲಾಮೋಫೋಬಿಕ್‌ ಎಂದು ಬಣ್ಣಿಸಲಾಗಿದೆ. ಆದರೆ, ಇಸ್ಲಾಮಿಕ್‌ ದೇಶವೇ ಈ ಚಿತ್ರದಲ್ಲಿ ಯಾವುದೇ ಕಟ್‌ಗಳಿಗೆ ಸೂಚಿಸದೆ ಬಿಡುಗಡೆ ಮಾಡಲು ಒಪ್ಪಿದೆ” ಎಂದು ಚುಚ್ಚಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next