Advertisement
– ದೇಶದ ಅತ್ಯುತ್ತಮ ಐಎಎಸ್ ಅಧಿಕಾರಿಗಳಲ್ಲೊಬ್ಬರಾಗಿ, ಜಮ್ಮು ಕಾಶ್ಮೀರದಲ್ಲಿ 2 ಬಾರಿ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ ಜಗಮೋಹನ್ ಅವರು ತಮ್ಮ ಪುಸ್ತಕ “ಪ್ರಕ್ಷುಬ್ಧ ಕಾಶ್ಮೀರ’ದಲ್ಲಿ ಹೇಳಿದ ಮಾತುಗಳಿವು. 1984ರಲ್ಲಿ ಒಮ್ಮೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದ ಜಗಮೋಹನ್ ಅವರು 1990ರಲ್ಲಿ ಅತ್ಯಂತ ಪ್ರಕ್ಷುಬ್ಧ ವಾತಾವರಣದಲ್ಲಿ ಮತ್ತೊಮ್ಮೆ ಅದೇ ಸ್ಥಾನಕ್ಕೆ ನೇಮಕವಾಗಿದ್ದರು.
Advertisement
ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮನ್ನು ಒಬ್ಬ ನಾಯಕನೆಂದು ಗುರುತಿಸಿಕೊಳ್ಳಬೇಕು ಎಂಬ ತುಡಿತಕ್ಕೆ ಬಿದ್ದಿದ್ದ ನೆಹರೂ ಜಮ್ಮು ಕಾಶ್ಮೀರ ವಿಚಾರವನ್ನು 1948ರಲ್ಲೇ ವಿಶ್ವಸಂಸ್ಥೆಗೆ ಒಯ್ದು ಪ್ರಮಾದವೆಸಗಿದರು. ಭಾರತಕ್ಕೆ ತನ್ನ ಸಮಸ್ಯೆ ಬಗೆಹರಿಸಿಕೊಳ್ಳುವ ಸಾಮರ್ಥ್ಯ ಇಲ್ಲವೆಂಬ ಸಂದೇಶವನ್ನು ಇದು ರವಾನಿಸಿತು. ಸಮಸ್ಯೆ ಬಗೆಹರಿಸಲು ವಿಶ್ವಸಂಸ್ಥೆಯ ಭದ್ರತಾ ಸಮಿತಿಯು 3 ನಿರ್ಣಯ ಕೈಗೊಂಡಿತು. ಮೊದಲನೆಯದಾಗಿ ಕದನವಿರಾಮ. ಎರಡನೆಯದು ಪಾಕಿಸ್ಥಾನವು ತನ್ನ ಸೈನ್ಯವನ್ನು ಹಿಂಪಡೆಯಬೇಕು. ಮೂರನೆಯದು ವಿಶ್ವಸಂಸ್ಥೆಯ ನಿಗಾದಲ್ಲಿ ಜಮ್ಮು- ಕಾಶ್ಮೀರದ ಜನತೆಯ ಜನಮತಗಣನೆ ನಡೆಯಬೇಕು. ಆದರೆ ಪಾಕಿಸ್ಥಾನ ಎರಡನೇ ಅಂಶವನ್ನು ಪಾಲಿಸದ ಕಾರಣ ಮೂರನೇ ಅಂಶ ಪಾಲನೆಗೆ ಭಾರತ ಹಿಂದೇಟು ಹಾಕಿತು.
ಭವಿಷ್ಯದಲ್ಲಿ ಜಮ್ಮು- ಕಾಶ್ಮೀರದಲ್ಲಿ ಜನಮತಗಣನೆ ನಡೆದರೆ ಎಲ್ಲಿ ಫಲಿತಾಂಶ ತಮ್ಮ ವಿರುದ್ಧ ಇರುತ್ತದೆಯೋ ಎಂಬ ಆತಂಕದಲ್ಲಿ ಪಾಕಿಸ್ಥಾನ ಪ್ರೇರಿತ ಭಯೋತ್ಪಾದಕರು ಇಡೀ ಪ್ರದೇಶದ ಹಿಂದೂಗಳ ಮೇಲೆ ಅತ್ಯಾಚಾರವೆಸಗಲು ಆರಂಭಿಸಿದರು. ಈ ವೇಳೆ ವಿದೇಶಿ ಭಯೋತ್ಪಾದಕರಷ್ಟೇ ಅಲ್ಲದೆ ನೂರಾರು ವರ್ಷದಿಂದ ಹಿಂದೂಗಳ ನೆರೆಹೊರೆಯವರೇ ಆಗಿದ್ದ ಮುಸ್ಲಿಮರೂ ಕೈಜೋಡಿಸಿದರು. ನೆರೆಯ ಹಿಂದೂ ಕುಟುಂಬ ಖಾಲಿಯಾದರೆ ಅವರ ಎಲ್ಲ ಆಸ್ತಿಪಾಸ್ತಿ ತಮಗೇ ಸಿಗುತ್ತದೆ ಎಂಬ ಆಮಿಷವೂ ಅವರ ಈ ನಡೆಗೆ ಕಾರಣವಾಯಿತು. 1988ರಲ್ಲಿ ಶ್ರೀನಗರದ ಲಾಲ್‌ಚೌಕ್‌ನಲ್ಲಿ ಮಾರುತಿ ವ್ಯಾನ್ ಸ್ಫೋಟ, 1989ರಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ಗುಂಡಿನ ಮಳೆಯಂಥ ಕೃತ್ಯಗಳು ನಡೆದವು. ಆದರೂ ಜನರು ಅದು ಹೇಗೋ ಜೀವನ ನಡೆಸುತ್ತಿದ್ದರು. ಆದರೆ 1989ರ ಸೆ. 14ರಂದು ನಡೆದ ಘಟನೆ ಎಲ್ಲ ಹಿಂದೂಗಳನ್ನು ಬೆಚ್ಚಿ ಬೀಳಿಸಿತ್ತು.
ಟೀಕಾಲಾಲ್ ಟಪ್ಲೂಅವರು ಶ್ರೀನಗರದ ಹಿರಿಯ ವಕೀಲರು. ಪ್ರಬಲ ರಾಷ್ಟ್ರೀಯವಾದಿಯಾಗಿದ್ದ ಅವರು ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷರೂ ಆಗಿದ್ದರು. ಅವರನ್ನು ಶ್ರೀನಗರದಲ್ಲಿ ಹಾಡಹಗಲೇ ಭಯೋತ್ಪಾದಕರು ಗುಂಡಿನ ಮಳೆಗರೆದು ಹತ್ಯೆಗೈದರು. “ನಿಮ್ಮ ಹಿರಿಯ ನಾಯಕನನ್ನೇ ಕೊಂದಿದ್ದೇವೆ, ನಿಮ್ಮದೂ ಇದೇ ಕಥೆಯಾಗಲಿದೆ’ ಎಂಬ ಸಂದೇಶವನ್ನು ನೀಡಿದ್ದ ಜೆಕೆಎಲ್‌ಎಫ್ ಸಂಘಟನೆ ಈ ದಾಳಿಯ ಹೊಣೆ ಹೊತ್ತಿತು. ಹಿಂದೂಗಳ ರಕ್ತದಿಂದಲೇ ಅಲ್ಲಿನ ಗೋಡೆಗಳ ಮೇಲೆ ಹಿಂದೂ ವಿರೋಧಿ ಘೋಷಣೆಗಳನ್ನು ಬರೆಯಲಾಯಿತು. ಭೂಲೋಕದ ಸ್ವರ್ಗ ಅಕ್ಷರಶಃ ನರಕವಾಯಿತು.
ಅಲ್ಲಿಂದಾಚೆಗೆ ಮೂರೇ ತಿಂಗಳಲ್ಲಿ ಅಂದರೆ 1990ರ ಜೂ. 19ರಂದು ರಾತ್ರಿ ಕಾಶ್ಮೀರಿ ಪಂಡಿತರಿಗೆ ಕರಾಳ 2 ರಾತ್ರಿಯಾಯಿತು. ಕಾಶ್ಮೀರಿ ಪಂಡಿತರು 24 ಗಂಟೆಯಲ್ಲಿ ಕೈಗೊಳ್ಳಬೇಕಾದ ಆದೇಶಗಳನ್ನು ಭಯಾನಕ ರೀತಿಯಲ್ಲಿ ಧ್ವನಿವರ್ಧಕಗಳ ಮೂಲಕ ಕೂಗಿ ಹೇಳಲಾಯಿತು. ಆ ಶಬ್ದಗಳೆಂದರೆ “ರಲೀವ್, ಗಲೀವ್ ಯಾ ಚಲೀವ್’. ಅಂದರೆ ಮುಂದಿನ 24 ಗಂಟೆಯೊಳಗೆ ಹಿಂದುಗಳೆಲ್ಲರೂ ಇಸ್ಲಾಂಗೆ ಮತಾಂತರವಾಗಿ ಅಥವಾ ಆಕ್ರಮಣಕಾರರ ಕತ್ತಿಗಳಿಗೆ ಕೊರಳೊಡ್ಡಿ ಹತ್ಯೆಗೀಡಾಗಿ ಅಥವಾ ಇಲ್ಲಿನ ಎಲ್ಲ ಆಸ್ತಿಪಾಸ್ತಿಯನ್ನೂ ಬಿಟ್ಟು ಓಡಿಹೋಗಿ -ಇದು ಈ ಸೂಚನೆ.
“ಕಾಶ್ಮೀರವನ್ನು ಸ್ವತಂತ್ರಗೊಳಿಸುತ್ತೇವೆ, ಹಿಂದೂ ಗಂಡಸರ ಹೊರತಾಗಿ.. ಆದರೆ ಹಿಂದೂ ಹೆಂಗಸರ ಜತೆಗೆ’ ಎಂಬ ಮಾತುಗಳು ಕಾಶ್ಮೀರಿ ಪಂಡಿತರ ಕಿವಿಯಲ್ಲಿ ಇನ್ನೂ ಗುಂಯ್‌ಗಾಡುತ್ತಿವೆ. ಇದಕ್ಕೆ ಸಾಕ್ಷಿ ಬೇಕೇ? ಅತ್ತ ಪಾಕಿಸ್ಥಾನದ ಕಡೆಯಿಂದ ಕಾಶ್ಮೀರಿ ಭಯೋತ್ಪಾದಕ ಕೃತ್ಯಗಳಿಗೆ ಕರೆ ನೀಡಿದ್ದಕ್ಕೆ ಸಾಕ್ಷ್ಯ ಬೇಕೆ? ನ್ಯಾಯಾಧೀಶರನ್ನು ನಡುರಸ್ತೆಯಲ್ಲಿ ಕೊಂದು ಸುತ್ತ ನರ್ತನ ಮಾಡುತ್ತ ಕ್ರೌರ್ಯ ಮಾಡಿದ್ದಕ್ಕೆ ಇನ್ನಾéವ ಸಾಕ್ಷಿ ಬೇಕು? ತೀರಾ ಇತ್ತೀಚೆಗೆ ಅಂದರೆ 2003ರಲ್ಲಿ ನಂದೀಮಾರ್ಗದಲ್ಲಿ ಎರಡು ಮಕ್ಕಳೂ ಸೇರಿ 24 ಕಾಶ್ಮೀರಿ ಪಂಡಿತರನ್ನು ಹತ್ಯೆ ಮಾಡಿದ ಘಟನೆಯನ್ನು ಯಾರು ತಾನೇ ಮರೆಯಲಾದೀತು?
ಇಂಥ ಘಟನೆಗಳನ್ನು ಹೇಗೆ ನಡೆದಿತ್ತೋ ಹಾಗೆಯೇ “ದಿ ಕಾಶ್ಮೀರ್ ಫೈಲ್ಸ್’ ಸಿನೆಮಾದಲ್ಲಿ ಚಿತ್ರಿಸಲಾಗಿದೆ. ಘಟನೆಗಳು ಹೇಗೆ ನಡೆದಿದ್ದವೋ ಹಾಗೆಯೇ ಹೇಳಬೇಕು ಎನ್ನುವುದೇ ಇತಿಹಾಸ. ಆದರೆ ಭಾರತದ ವಿಷಯದಲ್ಲಿ ಇದು ಸುಳ್ಳಾಗಿದೆ. ಸಿನೆಮಾದಲ್ಲೇ ಚಿತ್ರಿಸಿರುವಂತೆ ದೇಶದ ಪ್ರತಿಷ್ಠಿತ ವಿ.ವಿ.ಗಳಲ್ಲಿ ಸರಕಾರಿ ಸಂಬಳಕ್ಕೆ ದುಡಿಯುವವರು ದೇಶದ್ರೋಹದ ಕೆಲಸ ಮಾಡುತ್ತಿರುವುದು ಈ ಸಮಸ್ಯೆ ಉಲ್ಬಣಿಸಲು ಪ್ರಮುಖ ಕಾರಣ. ಯುವಜನತೆಯ ಬ್ರೆçನ್‌ವಾಷ್ ಮಾಡಿ ಅವರನ್ನು ದೇಶವಿರೋಧಿ ಕೃತ್ಯಗಳತ್ತ ತಿರುಗಿಸುವ ಅತೀ ದೊಡ್ಡ ಪಡೆಯೇ ಇದೆ.
ಇತಿಹಾಸವನ್ನು ತಿರುಚಿ ಹೇಳುವ ಪ್ರಕ್ರಿಯೆಯ ಕಾರಣದಿಂದಾಗಿ ಕಾಶ್ಮೀರಿ ಹಿಂದೂಗಳ ಮೇಲೆ ನಡೆದ ಹೀನಾಯ ಕೃತ್ಯಗಳು ದೇಶದ ಇತರ ಜನರಿಗೆ ತಿಳಿದೇ ಇಲ್ಲ. ಇಂಥದ್ದೊಂದು ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ “ದಿ ಕಾಶ್ಮೀರ್ ಫೈಲ್ಸ್’ ಅತ್ಯುತ್ತಮ ಪ್ರಯತ್ನ. ಕೆಲವು ವಿಮರ್ಶಕರು ಹೇಳಿರುವಂತೆ ಈ ಚಿತ್ರ ಬಾಲಿವುಡ್‌ನ ಸಿದ್ಧಸೂತ್ರಕ್ಕೆ ಅನುಗುಣವಾಗಿಲ್ಲದೇ ಇರಬಹುದು. ಅದರಲ್ಲಿ ನಾಯಕ -ನಾಯಕಿ ಮರ ಸುತ್ತುವ, ಒಬ್ಬ ಹೀರೊ ನೂರಾರು ಜನರಿಗೆ ಹೊಡೆಯುವ, ಐದಾರು ಹಾಡುಗಳಿರುವ ದೃಶ್ಯಗಳು ಇಲ್ಲ. ಇದು ಆ ಉದ್ದೇಶಕ್ಕಾಗಿ ನಿರ್ಮಾಣವಾದ ಚಲನಚಿತ್ರವೂ ಅಲ್ಲ. ಮರ ಸುತ್ತುವುದೇ ಸಿನೆಮಾ ಅಲ್ಲ. ಅತ್ಯಂತ ಪ್ರಬಲ ಮಾಧ್ಯಮವಾದ ಸಿನೆಮಾವನ್ನು ಸಶಕ್ತವಾಗಿ ಬಳಸಿಕೊಂಡು, ಇತಿಹಾಸದಲ್ಲಾಗಿರುವ ಪ್ರಮಾದಗಳನ್ನು ಪ್ರಶ್ನಿಸುವುದು, ಮುಂದಿನ ಪೀಳಿಗೆ ಸರಿದಾರಿಯಲ್ಲಿ ನಡೆಯುವಂತೆ ಮಾಡುವುದರಲ್ಲಿ ತಪ್ಪೇನೂ ಇಲ್ಲ.
-ಎಂ.ಆರ್. ವೆಂಕಟೇಶ್