ಪಣಜಿ: ”ದ ಕಾಶ್ಮೀರ್ ಫೈಲ್ಸ್” ಚಲನಚಿತ್ರದ ಕುರಿತು ದೆಹಲಿ ವಿಧಾನಸಭೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ನೀಡಿರುವ ಹೇಳಿಕೆಯನ್ನು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಖಂಡಿಸಿದ್ದಾರೆ.
ಪಣಜಿಯಲ್ಲಿ ಪ್ರತಿಕ್ರಿಯೆ ನೀಡಿದ ಪ್ರಮೋದ ಸಾವಂತ್, ಈ ಹಿಂದೆ ಕೇಜ್ರಿವಾಲ್ ಸರ್ಕಾರವು ಹಲವು ಬಾಲಿವುಡ್ ಚಿತ್ರಗಳ ತೆರಿಗೆ ಮನ್ನಾ ಮಾಡಿತ್ತು. ಆದರೆ ”ದ ಕಾಶ್ಮೀರ್ ಫೈಲ್ಸ್” ಚಲನಚಿತ್ರ ತೆರಿಗೆ ಮನ್ನಾ ಮಾಡಲು ನಿರಾಕರಿಸಿದ್ದಾರೆ.. ಈ ಮೂಲಕ ಕಾಶ್ಮಿರಿ ಹಿಂದೂಗಳ ನೋವನ್ನು ಬೆಳಕಿಗೆ ತರುವ ಚಿತ್ರವನ್ನು ಅಣಕಿಸಿ ನಗುತ್ತಿದ್ದಾರೆ ಎಂದು ಕಿಡಿ ಕಾರಿದರು.
ಕೇಜ್ರಿವಾಲ್ ಹೇಳಿಕೆಯು ಅಮಾನವೀಯವಾಗಿದೆ. ಕಾಶ್ಮೀರ ಭಯೋತ್ಪಾದಕರರಿಂದ ದೌರ್ಜನ್ಯ ಎದುರಿಸಿದವರಿಗೆ ಮಾಡಿದ ಅವಮಾನ ಇದಾಗಿದೆ ಎಂದರು.
ಗೋವಾದಲ್ಲಿ ‘ದ ಕಾಶ್ಮೀರ್ ಫೈಲ್ಸ್’ ಚಲನಚಿತ್ರದ ತೆರಿಗೆಯನ್ನು ರದ್ಧುಗೊಳಿಸುವುದಾಗಿ ಪ್ರಮೋದ ಸಾವಂತ್ ಘೋಷಿಸಿದ್ದರು.
ರಾಜ್ಯ ಸರ್ಕಾರಗಳನ್ನು ತೆರಿಗೆ ಮುಕ್ತ ಮಾಡುವಂತೆ ಕೇಳಿಕೊಳ್ಳುವುದಕ್ಕಿಂತ ದ ಕಾಶ್ಮೀರ್ ಫೈಲ್ಸ್ ಚಲನಚಿತ್ರವನ್ನು ಯು ಟ್ಯೂಬ್ ನಲ್ಲಿ ಅಪ್‍ಲೋಡ್ ಮಾಡುವಂತೆ ಚಿತ್ರ ನಿರ್ಮಾಪಕ ವಿವೇಕ್ ಅಗ್ಮಿಹೋತ್ರಿ ರವರಿಗೆ ಕೇಳಿ ಎಂದು ಕೇಜ್ರಿವಾಲ್ ಹೇಳಿಕೆ ನೀಡಿದ್ದರು. ಈ ವೇಳೆ ಆಪ್ ಸಚಿವರು ಮತ್ತು ಶಾಸಕರು ನಗೆಯಾಡಿರುವ ಬಗ್ಗೆ ಹಲವರು ಆಕ್ರೋಶ ಹೋರ ಹಾಕಿದ್ದಾರೆ.