Advertisement

ಶಾಲೆಗೆ ಬಂದ ಕಾಡಿನ ಮಕ್ಕಳು

10:56 PM Feb 04, 2020 | Team Udayavani |

ಶ್ರೀನಿವಾಸಪುರ: ಎರಡು ತಿಂಗಳಿಂದ ಶಿಕ್ಷಣದಿಂದ ವಂಚಿತರಾಗಿ ಆದಿವಾಸಿಗಳಂತೆ ಕಾಡಿನಲ್ಲಿ ಇದ್ದ ಮಕ್ಕಳು ಇದೀಗ ಶಾಲೆಗೆ ಆಗಮಿಸುತ್ತಿದ್ದಾರೆ. ಆದರೆ, ನಿತ್ಯ 2 ಕಿ.ಮೀ.ನಡೆಯುವುದು ಈ ಸಣ್ಣ ಮಕ್ಕಳಿಗೆ ಪ್ರಯಾಸದ ಕೆಲಸವಾಗಿದೆ.

Advertisement

ತಾಲೂಕಿನ ಕೊಳ್ಳೂರು ಮತ್ತು ದೊಡಮಲದೊಡ್ಡಿ ಗ್ರಾಮಗಳಿಗೆ ಹೋಗುವ ರಸ್ತೆಯ ನಡುವಿನ ಕಾಡಿನಲ್ಲಿ ಕೂಲಿ ಮಾಡಿ ಕತ್ತಲೆಯ ಜೀವನ ನಡೆಸುತ್ತಿರುವ ಶಿವಮೊಗ್ಗ ಜಿಲ್ಲೆಯ ಈ ಕಾರ್ಮಿಕರ ಮಕ್ಕಳು, ಶಿಕ್ಷಣದಿಂದ ವಂಚಿತರಾಗಿರುವ ಬಗ್ಗೆ “ಉದಯವಾಣಿ’ ಜ.28ರಂದು ಸುದ್ದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾಡಿನ ಸ್ಥಳಕ್ಕೆ ಹೋಗಿ, ಮಕ್ಕಳ ಪೋಷಕರಿಗೆ ತಿಳುವಳಿಕೆ ನೀಡಿದ್ದರು. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಶನಿವಾರ 8, ಸೋಮವಾರ 18 ಮಕ್ಕಳು ಶಾಲೆಗೆ ಬಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next