ಮಂಗಳೂರು: ಓದು ಉದ್ಯೋಗಕ್ಕೆ ಮಾತ್ರ ಎಂಬ ಮನೋಭಾವ ದೂರ ಮಾಡಿ, ಬದುಕಿಗಾಗಿ ಓದು ಎಂಬ ಅಂಶವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಕ್ಲೊರಿಸ್ ಗ್ರೂಪ್ ಆಫ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಕಿಶನ್ ಶೆಟ್ಟಿ ಹೇಳಿದರು.
ಅಡ್ಯಾರ್‌ನ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಹಂತದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ “ವಿಜ್ ಕ್ವಿಜ್-2017′ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಹ್ಯಾದ್ರಿ ಕಾಲೇಜಿನಲ್ಲಿ ಆಯೋಜಿತ ಈ ಕ್ವಿಜ್ ಅರ್ಥಪೂರ್ಣ ಹಾಗೂ ಉಪಯುಕ್ತ. ಸ್ಪರ್ಧಾತ್ಮಕ ಮನೋಭಾವ ಬೆಳವಣಿಗೆಗೆ ಇಂತಹ ಕೌಶಲ ಕಾರ್ಯಕ್ರಮ ಅಗತ್ಯ ಎಂದು ಅವರು ಹೇಳಿದರು.
ಕೆಪಿಎಂಜಿ ಎಚ್‌ಆರ್ ವ್ಯವಸ್ಥಾಪಕ ಗುರುಪ್ರಸಾದ್ ಎಚ್.ಡಿ. ಮಾತಧಿನಾಡಿದರು. ಡಾ| ವಿಶಾಲ್ ಸಮರ್ಥ, ಪ್ರಾಚಾರ್ಯ ಡಾ| ಯು.ಎಂ. ಭುಶಿ, ರಮೇಶ್ ಎಸ್., ಕ್ವಿಜ್ ಮಾಸ್ಟರ್ ರಕ್ಷಿತ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಧಾನ ಸಂಯೋಜಕ ರಮೇಶ್ ಕೆ.ಜಿ. ಸ್ವಾಗತಿಸಿದರು. ಸಹ ಸಂಯೋಜಕ ಗಿರೀಶ್ ಮಡ್ಲ ವಂದಿಸಿದರು.
ವಿದ್ಯಾರ್ಥಿಗಳಾದ ಶ್ರೇಯಸ್ ಮತ್ತು ಕೋಮಲ್ ಕಾರ್ಯಕ್ರಮ ನಿರ್ವಹಿಸಿದರು. “ವಿಜ್ ಕ್ವಿಜ್ 2017’ನಲ್ಲಿ ಮಂಗಳೂರು ಮ್ಯಾಪ್ಸ್ ಕಾಲೇಜಿನ ಶೈಲೇಶ್ ಕೃಷ್ಣ, ಕಾರ್ತಿಕ್ ಪ್ರಭು ಎಂ. ಮತ್ತು ಸಿದ್ಧಾಂತ್ ಎರ್ಮಾಳ್ ತಂಡ 25,000 ರೂ. ನಗದು ಹಾಗೂ ಟ್ರೋಫಿ ಗೆದ್ದುಕೊಂಡಿತು. ಎಸ್‌ಡಿಎಂ ಉದ್ಯಮಾಡಳಿತ ಕಾಲೇಜಿನ ಎಲ್ವಿನ್ ಡಿ’ಸೋಜಾ, ಶಿವಪ್ರಸಾದ್ ವಿ. ಭಟ್ ತಂಡ 15,000 ರೂ. ನಗದು ಸಹಿತ ಪ್ರಥಮ ರನ್ನರ್‌ಅಪ್ ಟ್ರೋಫಿ ಹಾಗೂ ಮತ್ತು ನಿಕಾಶ್ ಆರ್.ಕೆ. ಹಾಗೂ ರತುಲ್ ಕಾಮತ್, ಕೌಶಿನ್ ಶೆಟ್ಟಿ ಮತ್ತು ವಿನೋದ್ ನಿಕೋಲಸ್ ಡಿ’ಸೋಜಾ ಅವರ ತಂಡ 10,000 ರೂ. ನಗದು ಸಹಿತ ದ್ವಿತೀಯ ರನ್ನರ್‌ಅಪ್ ಟ್ರೋಫಿ ಪಡೆದುಕೊಂಡಿತು. 31 ಕಾಲೇಜುಗಳಿಂದ 750ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.