Advertisement

ವಿಜಯಪುರ ಘಟನೆ ಖಂಡಿಸಿ ಜೆಡಿಎಸ್‌ ಪ್ರತಿಭಟನೆ

03:19 PM Dec 23, 2017 | Team Udayavani |

ನಗರ: ಪರೇಶ್‌ ಮೇಸ್ತಾ ಸಾವಿನ ವಿಚಾರವಾಗಿ ಹೊನ್ನಾವರದಲ್ಲಿ ಬೆಂಕಿ ಹಚ್ಚಿದ ಬಿಜೆಪಿಯ ನಿಜಬಣ್ಣ, ವಿಜಯಪುರದಲ್ಲಿ ಬಯಲಾಗಿದೆ. ವಿದ್ಯಾರ್ಥಿನಿಯನ್ನು ಅಪಹರಿಸಿ, ಅತ್ಯಾಚಾರ ನಡೆಸಿ, ಅಮಾನುಷವಾಗಿ ಕೊಲೆಗೈದಿರುವುದು ಬಿಜೆಪಿ ಕಾರ್ಯಕರ್ತ ಎನ್ನುವುದು ಬಯಲಾಗಿದೆ ಎಂದು ಜೆಡಿಎಸ್‌ ಪುತ್ತೂರು ಅಧ್ಯಕ್ಷ ಐ.ಸಿ. ಕೈಲಾಸ್‌ ಹೇಳಿದರು. ವಿಜಯಪುರ ಘಟನೆಯನ್ನು ಖಂಡಿಸಿ, ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೋಮವಾರ ಜೆಡಿಎಸ್‌ ವತಿಯಿಂದ ಪುತ್ತೂರು ಕೆಎಸ್‌ಆರ್‌ಟಿಸಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

Advertisement

ದಾನಮ್ಮ ಎನ್ನುವ ಬಾಲಕಿಯನ್ನು ಹತ್ಯೆಗೈಯುವ ಮೂಲಕ ಬಿಜೆಪಿಯ ನಿಜಬಣ್ಣ ಜಗಜ್ಜಾಹೀರಾಗಿದೆ. ಬಾಲಕಿಯನ್ನು ಅತ್ಯಾಚಾರ ಮಾಡಿರುವ ವ್ಯಕ್ತಿಯು ಬಿಜೆಪಿ ಕಾರ್ಯಕರ್ತ ಎನ್ನುವುದು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಈಗ ಯಾಕೆ ಬಿಜೆಪಿಯವರು ಮೌನಿಗಳಾಗಿದ್ದಾರೆ ಎಂದು ಪ್ರಶ್ನಿಸಿದರು. ದಲಿತ ಬಾಲಕಿ ದಾನಮ್ಮನ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ವ್ಯಕ್ತಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಜೆಡಿಎಸ್‌ ಯುವಘಟಕದ ರಾಜ್ಯ ಉಪಾಧ್ಯಕ್ಷ ಅಶ್ರಫ್‌ ಕಲ್ಲೇಗ ಮಾತನಾಡಿ, ದಲಿತ ಬಾಲಕಿಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವ ವ್ಯಕ್ತಿ ಬಿಜೆಪಿ ಕಾರ್ಯಕರ್ತ ಎನ್ನುವುದು ಸ್ಪಷ್ಟ. ಇದೀಗ ಆತನನ್ನು ರಕ್ಷಿಸಲು ಮುಂದಾಗುತ್ತಿದ್ದು, ಪ್ರಕರಣ ಮುಚ್ಚಿ ಹಾಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಚುನಾವಣೆ ವೇಳೆ ಎಸ್ಸಿ, ಎಸ್ಟಿ ನೆನಪು
ಅಂಬೇಡ್ಕರ್‌ ತತ್ವ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಗಿರಿಧರ್‌ ನಾಯ್ಕ ಮಾತನಾಡಿ, ಚುನಾವಣೆ ಬಂದಾಗ ಮಾತ್ರ ಎಸ್ಸಿ, ಎಸ್ಟಿಗಳ ನೆನಪಾ ಗುತ್ತದೆ ಎಂದರು. ರಾಜ್ಯ ಉಪಾಧ್ಯಕ್ಷ ಬಾಲಚಂದ್ರ ಸೊರಕೆ ಮಾತನಾಡಿ, ದಲಿತ ಬಾಲಕಿಯ ಹತ್ಯೆಗೆ ಕಾಂಗ್ರೆಸ್‌, ಬಿಜೆಪಿ ಎರಡೂ ಕಾರಣ. ಆದ್ದರಿಂದ ಜೆಡಿಎಸ್‌ಗೆ ಅಂಬೇಡ್ಕರ್‌ ತತ್ತ್ವರಕ್ಷಣಾ ವೇದಿಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದರು. ಜೆಡಿಎಸ್‌ ತಾ| ಘಟಕ ಮಾಜಿ ಅಧ್ಯಕ್ಷೆ ಪದ್ಮಮಣಿ, ಅಲ್ಪಸಂಕ್ಯಾಕ ಘಟಕದ ಕರೀಂ, ರಾಜ್ಯ ಅಲ್ಪಸಂಖ್ಯಾಕ ಘಟಕ ಉಪಾಧ್ಯಕ್ಷ ಅಶ್ರಫ್‌ ಕಲ್ಲೇಗ, ತಾಲೂಕು ಕಾರ್ಯಾಧ್ಯಕ್ಷ ಅಬ್ದುಲ್‌ ರಹಿಮಾನ್‌ ಯೂನಿಕ್‌, ಜೆಡಿಎಸ್‌ ಯುವ ಅಧ್ಯಕ್ಷ ಶಿವು ಸಾಲ್ಯಾನ್‌, ಅಶ್ರಫ್‌ ಕೊಟ್ಯಾಡಿ, ಕವಿರಾಜ್‌ ಗುಂಡ್ಯ, ಜಯರಾಜ ಅಮೀನ್‌, ಶಾಫಿ ಗೋಳಿತ್ತಡಿ, ಪುರುಷೋತ್ತಮ ನಾಯಕ್‌ ಕೃಷ್ಣನಗರ, ಉಪೇಂದ್ರ ಸಂಟ್ಯಾರ್‌, ಅದ್ದು ಪಡೀಲ್‌, ವಿಕ್ಟರ್‌ ಗೋನ್ಸಾಲ್ವೀಸ್‌ ಉಪಸ್ಥಿತರಿದ್ದರು. ಪುತ್ತೂರು ಜೆಡಿಎಸ್‌ ಘಟಕದ ಉಪಾಧ್ಯಕ್ಷ ಅಬ್ದುಲ್‌ ರಹಿಮಾನ್‌ ಸ್ವಾಗತಿಸಿದರು. 

ಸುವ್ಯವಸ್ಥೆ ಕಾಪಾಡಿ
ರಾಜ್ಯ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ 3,012 ಅತ್ಯಾಚಾರ ಪ್ರಕರಣ, 2,534 ಕೊಲೆ ನಡೆದಿವೆ. ಇದು ಸಿದ್ದರಾಮಯ್ಯ ಸರಕಾ ರದ ಕಾನೂನು ಸುವ್ಯವಸ್ಥೆಯ ವೈಫಲ್ಯತೆಯನ್ನು ತಿಳಿಸುತ್ತದೆ. ಸಿದ್ದರಾಮಯ್ಯ ಅವರು ನಿದ್ದೆ ಮಾಡುವುದನ್ನು ಬಿಟ್ಟು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡಲಿ. ಕಾಂಗ್ರೆಸ್‌ ಹಾಗೂ ಬಿಜೆಪಿಯ ಕೆಟ್ಟ ವಿಚಾರಗಳನ್ನು, ಮತ ಬ್ಯಾಂಕ್‌ ರಾಜ ಕಾರಣವನ್ನು ಜನತೆ ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜೆಡಿಎಸ್‌ ಅ ಧಿಕಾರಕ್ಕೆ ಬರುವ ಮೂಲಕ ಕರ್ನಾಟಕವನ್ನು ಸುಭೀಕ್ಷೆ ಮಾಡಲಿದೆ ಎಂದು ಐ.ಸಿ. ಕೈಲಾಸ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next