ಗಳನ್ನು ಪಡೆದು ಅಧಿಕಾರ ಹಿಡಿಯುತ್ತದೆ ಎಂದು ತೋಟಗಾರಿಕಾ ಸಚಿವ ಎಂ.ಸಿ. ಮನಗೊಳಿಸಿ ತಿಳಿಸಿದರು.
Advertisement
ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಯಾವುದೇ ರೀತಿ ಭಿನ್ನಮತ ಇಲ್ಲ. ಬರೀ ಮಾಧ್ಯಮಗಳಲ್ಲಿ ಮಾತ್ರ ಭಿನ್ನಮತ ಕಾಣಸಿಕೊಳ್ಳುತ್ತಿದೆ. ಚುನಾವಣೆಗೂ ಮೊದಲು ರೈತರ ಸಾಲಮನ್ನಾ ಬಗ್ಗೆ ಕುಮಾರ ಸ್ವಾಮಿ ರಾಜ್ಯದ ಪ್ರವಾಸ ಮಾಡಿ ರೈತರಿಗೆ ಭರವಸೆ ನೀಡಿದ್ದರು. ಅದರಂತೆ ಅವರು ಕೊಟ್ಟ ಮಾತಿನಂತೆ ರೈತರ ಸಾಲದ ಜತೆಗೆ ಬಡ್ಡಿ ಸಹ ಮನ್ನಾ ಮಾಡಿದ್ದಾರೆ. ಇದರಲ್ಲಿ ಕಾಂಗ್ರೆಸ್ ಪಾತ್ರವು ಇರಬಹುದು. ಆದರೆ ರಾಜ್ಯದ ರೈತರು ಸಂಪೂರ್ಣವಾಗಿ ಜೆಡಿಎಸ್ ಕಡೆ ಪರಿವರ್ತನೆ ಗೊಂಡಿದ್ದಾರೆ. ಆದ್ದರಿಂದ ವಿಧಾನಸಭಾ ಚುನಾ ವಣೆ ನಡೆದರೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರ ಲಿದೆ. ಮೈತ್ರಿ ಸರ್ಕಾರದವಿರುದ್ಧ ಯಾರು ಅಸಮಾಧಾನಗೊಂಡಿಲ್ಲ.
ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಮೈತ್ರಿ ಸರ್ಕಾರ ಜನರ ಪರವಾಗಿ ಕೆಲಸ ಮಾಡುತ್ತಿದೆ. ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ದಲ್ಲಿ ಯಾವುದೇ ರೀತಿ ಅನುದಾನ ಕೊರತೆ ಇಲ್ಲ. ಎಲ್ಲಾ ಇಲಾಖೆಗಳಿಗೆ ಸಿಎಂ ಕುಮಾರಸ್ವಾಮಿ ಅನುದಾನ ಕೊಡುತ್ತಿದ್ದಾರೆ.
Related Articles
Advertisement
ನಂದಿ ಪ್ರಾಧಿಕಾರ ರಚನೆಗೆ ಸಹಮತ ಪ್ರವಾಸಿಗರಿಗೆ ಅನುಕೂಲವಾಗುವಂತೆ ನಂದಿ ಗಿರಿಧಾಮವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಗಿರಿಧಾಮದ ವ್ಯಾಪ್ತಿಗೆ ಒಳಪಡುವ ಎಲ್ಲಾ ಇಲಾಖೆಗಳನ್ನು ಒಗ್ಗೂಡಿಸಿ ರಚಿಸಲುಉದ್ದೇಶಿಸಿರುವ ನಂದಿಗಿರಿಧಾಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಇಲಾಖೆಯ ಸಹಮತವಿದೆ ಎಂದು ಸಚಿವ ಎಂ.ಸಿ.ಮನಗೊಳಿ ಸ್ಪಷ್ಟಪಡಿಸಿದರು. ಗಿರಿಧಾಮದ ನಿರ್ವಹಣೆ ಯನ್ನು ಸಂಪೂರ್ಣವಾಗಿ ಪ್ರವಾಸೋದ್ಯಮ ಇಲಾಖೆಗೆ ವಹಿಸಿ ಕೊಡಲು ತೋಟ ಗಾರಿಕಾ ಇಲಾಖೆ ಸಿದ್ಧವಿಲ್ಲ ಎಂದರು.