Advertisement

ಚುನಾವಣೆ ನಡೆದರೆ ಜೆಡಿಎಸ್‌ಗೆ ಅಧಿಕಾರ

01:19 PM Sep 20, 2018 | Team Udayavani |

ಚಿಕ್ಕಬಳ್ಳಾಪುರ: ರೈತರ ಸಾಲಮನ್ನಾದ ಸಂಪೂರ್ಣ ಯಶಸ್ಸು ಮೈತ್ರಿ ಸರ್ಕಾರಕ್ಕಿಂತ ಮೊದಲು ಮುಖ್ಯಮಂತ್ರಿ ಹೆಚ್‌.ಡಿ.ಕುಮಾರ ಸ್ವಾಮಿಗೆ ಸಲ್ಲಬೇಕು. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದರೆ ಜೆಡಿಎಸ್‌ ಅಧಿಕ ಸ್ಥಾನ
ಗಳನ್ನು ಪಡೆದು ಅಧಿಕಾರ ಹಿಡಿಯುತ್ತದೆ ಎಂದು ತೋಟಗಾರಿಕಾ ಸಚಿವ ಎಂ.ಸಿ. ಮನಗೊಳಿಸಿ ತಿಳಿಸಿದರು.

Advertisement

ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಯಾವುದೇ ರೀತಿ ಭಿನ್ನಮತ ಇಲ್ಲ. ಬರೀ ಮಾಧ್ಯಮಗಳಲ್ಲಿ ಮಾತ್ರ ಭಿನ್ನಮತ ಕಾಣಸಿಕೊಳ್ಳುತ್ತಿದೆ. ಚುನಾವಣೆಗೂ ಮೊದಲು ರೈತರ ಸಾಲಮನ್ನಾ ಬಗ್ಗೆ ಕುಮಾರ ಸ್ವಾಮಿ ರಾಜ್ಯದ ಪ್ರವಾಸ ಮಾಡಿ ರೈತರಿಗೆ ಭರವಸೆ ನೀಡಿದ್ದರು. ಅದರಂತೆ ಅವರು ಕೊಟ್ಟ ಮಾತಿನಂತೆ ರೈತರ ಸಾಲದ ಜತೆಗೆ ಬಡ್ಡಿ ಸಹ ಮನ್ನಾ ಮಾಡಿದ್ದಾರೆ. ಇದರಲ್ಲಿ ಕಾಂಗ್ರೆಸ್‌ ಪಾತ್ರವು ಇರಬಹುದು. ಆದರೆ ರಾಜ್ಯದ ರೈತರು ಸಂಪೂರ್ಣವಾಗಿ ಜೆಡಿಎಸ್‌ ಕಡೆ ಪರಿವರ್ತನೆ ಗೊಂಡಿದ್ದಾರೆ. ಆದ್ದರಿಂದ ವಿಧಾನಸಭಾ ಚುನಾ ವಣೆ ನಡೆದರೆ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರ ಲಿದೆ. ಮೈತ್ರಿ ಸರ್ಕಾರದ
ವಿರುದ್ಧ ಯಾರು ಅಸಮಾಧಾನಗೊಂಡಿಲ್ಲ.

ಬೆಳಗಾವಿ ಜಾರಕಿ ಹೊಳಿ ಸಹೋದರರು ಜಿಲ್ಲೆಗೆ ಸಂಬಂಧಿಸಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಅದನ್ನು ಈಡೇರಿಸುವ ಭರವಸೆ ಸಿಎಂ ಕುಮಾರ ಸ್ವಾಮಿ ನೀಡಿದ್ದಾರೆ. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಸದ್ಯದ ರಾಜ್ಯಕೀಯ ಬೆಳವಣಿಗಳನ್ನು ಕಂಡು ಅಧಿಕಾರ ಹಿಡಿಯುವ ಹಗಲು ಕನಸು ಕಾಣುತ್ತಿದ್ದ ಮಾಜಿ ಸಿಎಂ ಯಡಿಯೂರಪ್ಪಗೆ ತಳಮಳ ಶುರು ವಾಗಿದೆ ಎಂದು ವ್ಯಂಗ್ಯವಾಡಿದರು.

ಸರ್ಕಾರದಲ್ಲಿ ಹಣದ ಕೊರತೆ ಇಲ್ಲ: ಸ್ಥಳೀಯ ಕಾಂಗ್ರೆಸ್‌ ಶಾಸಕ ಡಾ.ಕೆ.ಸುಧಾಕರ್‌ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೊಡುತ್ತಿಲ್ಲ ಎಂದು ಬಹಿರಂಗವಾಗಿ ಸಿಎಂ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿರುವ ಕುರಿತು
ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಮೈತ್ರಿ ಸರ್ಕಾರ ಜನರ ಪರವಾಗಿ ಕೆಲಸ ಮಾಡುತ್ತಿದೆ. ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ದಲ್ಲಿ ಯಾವುದೇ ರೀತಿ ಅನುದಾನ ಕೊರತೆ ಇಲ್ಲ. ಎಲ್ಲಾ ಇಲಾಖೆಗಳಿಗೆ ಸಿಎಂ ಕುಮಾರಸ್ವಾಮಿ ಅನುದಾನ ಕೊಡುತ್ತಿದ್ದಾರೆ.

ಅನುದಾನ ಕೊಡುವ ವಿಚಾರದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಶಾಸಕರನ್ನು ಪ್ರತ್ಯೇಕವಾಗಿ ಪರಿಗಣಿಸುತ್ತಿಲ್ಲ. ಅಲ್ಲದೇ ತಾವು ಸ್ಥಳೀಯ ಶಾಸಕರನ್ನು ಖುದ್ದು ಭೇಟಿ ಮಾಡಿ ಶಾಸಕರ ಆಹವಾಲು ಆಲಿಸು ವುದಾಗಿ ತಿಳಿಸಿದರು. 

Advertisement

ನಂದಿ ಪ್ರಾಧಿಕಾರ ರಚನೆಗೆ ಸಹಮತ ಪ್ರವಾಸಿಗರಿಗೆ ಅನುಕೂಲವಾಗುವಂತೆ ನಂದಿ ಗಿರಿಧಾಮವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಗಿರಿಧಾಮದ ವ್ಯಾಪ್ತಿಗೆ ಒಳಪಡುವ ಎಲ್ಲಾ ಇಲಾಖೆಗಳನ್ನು ಒಗ್ಗೂಡಿಸಿ ರಚಿಸಲು
ಉದ್ದೇಶಿಸಿರುವ ನಂದಿಗಿರಿಧಾಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಇಲಾಖೆಯ ಸಹಮತವಿದೆ ಎಂದು ಸಚಿವ ಎಂ.ಸಿ.ಮನಗೊಳಿ ಸ್ಪಷ್ಟಪಡಿಸಿದರು. ಗಿರಿಧಾಮದ ನಿರ್ವಹಣೆ ಯನ್ನು ಸಂಪೂರ್ಣವಾಗಿ ಪ್ರವಾಸೋದ್ಯಮ ಇಲಾಖೆಗೆ ವಹಿಸಿ ಕೊಡಲು ತೋಟ ಗಾರಿಕಾ ಇಲಾಖೆ ಸಿದ್ಧವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next