Advertisement
ಇದು ಕರ್ಫ್ಯೂ ಬಿಗಿಗೊಳಿಸಿದ್ದರ ಎಫೆಕ್ಟ್.ಇದೊಂದು ಸ್ಯಾಂಪಲ್ ಅಷ್ಟೇ. ನಗರದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಇಂತಹ ಹತ್ತಾರು ಉದಾಹರಣೆಗಳನ್ನು ನೀವು ಕಾಣಬಹುದು. ಬುಧವಾರಬೆಳಗಾದರೆ ಬಸ್, ಮೆಟ್ರೋ, ಟ್ಯಾಕ್ಸಿ, ಆಟೋ ಸೇವೆಗಳು ಇರುವುದಿಲ್ಲ ಎಂಬ ಕಾರಣಕ್ಕೆ ಜನ ಹಿಂದಿನದಿನವೇ ಕ್ಯಾಂಪ್‌ಗಳು, ಗುಡಿಸಲುಗಳನ್ನು ತೊರೆದು,ಕಾಲ್ನಡಿಗೆಯಲ್ಲಿ ನಿಲ್ದಾಣಗಳನ್ನು ಬಂದು ಸೇರಿದ್ದಾರೆ.ಗಂಟೆಗಟ್ಟಲೆ ರೈಲಿಗಾಗಿ ಕಾದು, ಪ್ರಯಾಣಬೆಳೆಸಿದರು.
Related Articles
Advertisement
ಆನ್‌ಲೈನ್ ಪೋರ್ಟಲ್‌ಗೆ ಆಗ್ರಹ: ಸೇವೆನೀಡಲು ಯಾವುದೇ ಸಮಸ್ಯೆ ಇಲ್ಲ. ಆದರೆ,ಪ್ರಯಾಣಿಕರು ನಿಲ್ದಾಣಕ್ಕೋ ಅಥವಾ ರೋಗಿಗಳನ್ನು ನೋಡಿಕೊಳ್ಳುವವರನ್ನು ಆಸ್ಪತ್ರೆಗೋ ಬಿಟ್ಟುಬರಲು ಹೋದರೆ, ವಾಪಸ್ ಬರುವಾಗಯಾವುದೇ ದಾಖಲೆಗಳು ಚಾಲಕರ ಬಳಿ ಇರುವುದಿಲ್ಲ.
ಆಗ, ಪೊಲೀಸರು ಕಿರಿಕಿರಿ ಮಾಡುತ್ತಾರೆ.ಇದು ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರಹೊರಡಿಸಿರುವ ಮಾರ್ಗಸೂಚಿ ಸಮರ್ಪಕವಾಗಿಲ್ಲ ಅನಿಸುತ್ತದೆ. ಕೊನೆಪಕ್ಷ ಕಳೆದ ಬಾರಿ ಲಾಕ್‌ಡೌನ್ ಸಂದರ್ಭದಲ್ಲಿ ಇದ್ದಂತೆ ಆನ್‌ಲೈನ್‌ಪೋರ್ಟಲ್ ವ್ಯವಸ್ಥೆಯನ್ನಾದರೂ ಮಾಡಿದರೆಉತ್ತಮ ಎಂದು ರಾಜ್ಯ ಪ್ರವಾಸಿ ವಾಹನಗಳಮಾಲಿಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳಒತ್ತಾಯಿಸುತ್ತಾರೆ.