Advertisement
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗೆದಗೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಶಿಧರ ಹಿರೇಮಠ, ವಿದ್ಯಾರ್ಥಿನಿಯರಿಗೆ ದೈಹಿಕ ಕಿರುಕುಳ ನೀಡುತ್ತಿದ್ದ ಆರೋಪ ಎದುರಿಸುತ್ತಿದ್ದ. ಈ ಮಾಹಿತಿ ಅರಿತ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ತಂಡವು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರಿಂದ ಹಾಗೂ ಶಾಲಾ ಶಿಕ್ಷಕ ವರ್ಗದಿಂದ ಮಾಹಿತಿ ಪಡೆದು ಜಿಲ್ಲಾಡಳಿತ, ರಾಜ್ಯ ಮಕ್ಕಳ ರಕ್ಷಣಾ ಘಟಕಕ್ಕೆ ವರದಿ ನೀಡಿತ್ತು. ಇಷ್ಟಾದರೂ ಶಿಕ್ಷಕನ ಮೇಲೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಯಲಬುರ್ಗಾ ಬಿಇಒ ಕೇವಲ ಒಂದೇ ದಿನ ಈತನನ್ನು ಅಮಾನತು ಮಾಡಿ ಮತ್ತೆ ವಿದ್ಯಾರ್ಥಿನಿಯರು ಇರುವ ಚಿಕ್ಕ ಮ್ಯಾಗೇರಿ ಶಾಲೆಗೆ ನಿಯೋಜನೆ ಮಾಡಿದ್ದರು. ಗಂಭೀರವಾಗಿ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣಾ ಘಟಕವು ರಾಜ್ಯ ಮಕ್ಕಳ ರಕ್ಷಣಾ ಆಯೋಗಕ್ಕೆ ವರದಿ ಮಾಡಿತ್ತು.
– ನಿಲೋಪರ್ ರಾಂಪೂರಿ, ಮಕ್ಕಳ ಕಲ್ಯಾಣ
ಸಮಿತಿ ಅಧ್ಯಕ್ಷೆ, ಕೊಪ್ಪಳ