ಹೊಸದಿಲ್ಲಿ: ಮಾದಕ ವಸ್ತುಗಳು ಹಾಗೂ ಇತರ ಅಕ್ರಮ ಸರಕುಗಳನ್ನು ಸರಬರಾಜು ಮಾಡಲು ಅಪರಾಧ ಸಂಘಟನೆ ಸದಸ್ಯರು ಆಹಾರ ಡೆಲಿವರಿ ಸಿಬಂದಿ ಅವತಾರ ತಳೆಯುತ್ತಿದ್ದಾರೆ ಎಂದು ಇಂಟರ್‌ಪೋಲ್ ಎಚರಿಸಿದೆ.
ಮನೆ ಬಾಗಿಲಿಗೆ ಆಹಾರ ತಲುಪಿಸುವ ಸಿಬಂದಿ ಸೋಗಿನಲ್ಲಿ ಗಾಂಜಾ, ಕೊಕೇನ್, ಕೆಟಮಿನ್ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿರುವ ಪ್ರಕರಣಗಳು ಐರ್ಲೆಂಡ್, ಮಲೇಷಿಯಾ, ಸ್ಪೇನ್ ಮತ್ತು ಯುನೈಟೆಡ್ ಕಿಂಗ್ಡಮ್‌ನಲ್ಲಿ ವರದಿಯಾಗಿವೆ.
ಈ ಮೂಲಕ ಮಾದಕ ದ್ರವ್ಯ ಸಾಗಾಟದ ಅಪರಾಧಿಗಳು ಜಗತ್ತಿನಾದ್ಯಂತ ಸೃಷ್ಟಿಯಾಗಿರುವ ಕೋವಿಡ್ ಪರಿಸ್ಥಿತಿಯ ದುರುಪಯೋಗ ಪಡೆಯಲಾಗುತ್ತಿದ್ದಾರೆ ಎಂದು ಇಂಟರ್‌ಪೋಲ್ ಹೇಳಿದೆ.
ಆಹಾರ ಡೆಲಿವರಿ ಸಿಬಂದಿಯ ರೀತಿ ಸಮವಸ್ತ್ರ ಧರಿಸಿದ್ದ ಏಳು ಮಂದಿ ಮಾದಕ ವಸ್ತು ಡೀಲರ್‌ಗಳನ್ನು ಸ್ಪೇನ್ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು.
ಮನೆ ಬಾಗಿಲಿಗೆ ಆಹಾರ ತಲುಪಿಸುವವರ ರೀತಿ ಸೈಕಲ್, ಬೈಕ್ ಮತ್ತು ಕಾರುಗಳಲ್ಲಿ ಹೊರಟಿದ್ದ ಆರೋಪಿಗಳ ಬಳಿ ಗಾಂಜಾ ಮತ್ತು ಕೊಕೇನ್ ಪತ್ತೆಯಾಗಿತ್ತು. ಈ ಪೈಕಿ ಕೆಲವರು ಬ್ಯಾಕ್ ಪ್ಯಾಕ್‌ನ ಕೆಳ ಭಾಗದಲ್ಲಿ ಡ್ರಗ್ಸ್ ಬಚ್ಚಿಟ್ಟಿದ್ದರು.