Advertisement

ವಿಜಯಪುರ ಶತಕದತ್ತ ಧಾವಿಸುತ್ತಿರುವ ಸೋಂಕಿತರು

06:37 PM May 30, 2020 | Sriram |

ವಿಜಯಪುರ : ಶನಿವಾರ ಪ್ರಕಟವಾದ ಕೋವಿಡ್ ಆರೋಗ್ಯ ವರದಿಯಲ್ಲಿ ವಿಜಯಪುರ ಜಿಲ್ಲೆಯ 11 ಜನರಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 96 ಕ್ಕೆ ಏರಿದ್ದು, ಶತಕದತ್ತ‌ ಮುನ್ನುಗ್ಗುತ್ತಿದೆ.

Advertisement

96 ಸೊಂಕಿತರಲ್ಲಿ ಶನಿವಾರ ಓರ್ವ ವ್ಯಕ್ತಿ ಸೋಂಕು ಮುಕ್ತವಾಗಿ ಮನೆಗೆ ತೆರಳುವುದರೊಂದಿಗೆ 54 ಸೋಂಕಿತರು ರೋಗಮುಕ್ತರಾಗಿ ಮನೆಗೆ ಮರಳಿದ್ದಾರೆ. ಸೋಂಕಿತ 37 ರೋಗಿಗಳಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಸೋಂಕಿತರಲ್ಲಿ 5 ಮೃತಪಟ್ಟಿದ್ದಾರೆ.

ಮಹಾರಾಷ್ಟ್ರದ ಈಚಲಕರಂಜಿ ಪಟ್ಟಣಕ್ಕೆ ಅಗಲಿದ ಬಂಧುವೊಬ್ಬರ ಅಂತ್ಯ ಸಂಸ್ಕಾರಕ್ಜೆ ಹೋಗಿ ಬಂದಿದ್ದ ವೃದ್ಧೆಯಲ್ಲಿ ಸೋಂಕು ದೃಢಪಡುವ ಮೂಲಕ ವಿಜಯಪುರ ಜಿಲ್ಲೆಯಲ್ಲಿ ಏಪ್ರಿಲ್ 12 ರಂದು ಮೊದಲ ಪ್ರಕರಣ ದಾಖಲಾಗಿತ್ತು.

ಇದಾದ ಬಳಿಕ ವೃದ್ದೆಯ ಕುಟುಂಬ ಹಾಗೂ ಆಕೆಯ ಸಂಪರ್ಕದಲ್ಲಿದ್ದ ಹಲವರಿಗೆ ಸೋಂಕು ತಗುಲಿತ್ತು. ಇದಲ್ಲದೆ ಮಹಾರಾಷ್ಟ್ರ ಪುಣೆ ನಗರದಿಂದ ತಂದೆಯ ಶವಸಂಸ್ಕಾರಕ್ಕೆ ಬಂದಿದ್ದ ಮಹಿಳೆಯ ಸಂಪರ್ಕ ದಿಂದ ಬಾಲಕನೊಬ್ಬನ‌ ಮೂಲಕವೂ ಹಲವರಿಗೆ ಸೋಂಕು ಹರಡಿತ್ತು.

ಇದಾದ ಬಳಿಕ ಜಿಲ್ಲಾಡಳಿತ ರಾಜ್ಯಕ್ಕೆ ಮಾದರಿ ಆಗಬಹುದಾದ ಹಲವು ‌ಕಠಿಣ ಕ್ರಮಗಳ ಮೂಲಕ ಸೋಂಕು ಹರಡದಂತೆ ತೀವ್ರ ನಿಗಾ ಇರಿಸಿದ್ದರು. ಹೀಗಾಗಿ ನಗರದ ನಿರ್ಧಿಷ್ಟ ಪ್ರದೇಶದ ಹೊರತಾಗಿ ಇತರೆಡೆ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಸೋಂಕಿತರು ಮಾತ್ರ ಪತ್ತೆಯಾಗಿದ್ದರು. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಗ್ರಹಕ್ಕೆ ಬಂದಿತ್ತು. ಈ ಹಂತದಲ್ಲಿ ಮಹಾರಾಷ್ಟ್ರ ರಾಜ್ಯಕ್ಕೆ ವಲಸೆ ಹೋಗಿದ್ದವರು ಜಿಲ್ಲೆಗೆ ಮರಳುತ್ತಲೇ ಸೋಂಕಿತರ ಸಂಖ್ಯೆ ಅರ್ಧ ಶತಕ ದಾಟಿ, ಇದೀಗ ಶತಕದ ಗಡಿಗೆ ಬಂದು‌ ನಿಂತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next