Advertisement

Chandrayaan 3; ಕಕ್ಷೆ ಎತ್ತರಿಸುವ 2ನೇ ಪ್ರಕ್ರಿಯೆಯೂ ಯಶಸ್ವಿ

11:35 PM Jul 17, 2023 | Team Udayavani |

ಹೊಸದಿಲ್ಲಿ: ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಕಕ್ಷೆ ಎತ್ತರಿಸುವ 2ನೇ ಹಂತದ ಪ್ರಕ್ರಿಯೆಯನ್ನು ಸೋಮವಾರ ಯಶಸ್ವಿಯಾಗಿ ಪೂರ್ಣ ಗೊಳಿಸಲಾಗಿದೆ. ಇದರ ಬಳಿಕ ಈಗ ಬಾಹ್ಯಾಕಾಶ ನೌಕೆಯು 41,603 ಕಿ.ಮೀ. x 226 ಕಿ.ಮೀ. ಕಕ್ಷೆಯಲ್ಲಿದೆ ಎಂದು ಭಾರತೀಯ ಬಾಹ್ಯಾ ಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಹೇಳಿದೆ.

Advertisement

ಮಂಗಳವಾರ ಅಪರಾಹ್ನ 2 ಮತ್ತು 3 ಗಂಟೆಯ ನಡುವೆ ಮುಂದಿನ ಹಂತದ ಕಕ್ಷೆ ಎತ್ತ ರಿಸುವ ಪ್ರಕ್ರಿಯೆ ನಡೆಯಲಿದೆ ಎಂದೂ ತಿಳಿಸಿದೆ. ಅದಾದ ಬಳಿಕ ಮತ್ತೆರಡು ಬಾರಿ ಇಂಥದ್ದೇ ಪ್ರಕ್ರಿಯೆ ಯನ್ನು ನಡೆಸಲಾಗುತ್ತದೆ. ಈ ಮೂಲಕ ಬಾಹ್ಯಾಕಾಶ ನೌಕೆಯು ಭೂಮಿಯ ಗುರುತ್ವ ಬಲದಿಂದ ಹೊರ ಹೋಗಿ ಚಂದ್ರನತ್ತ ಪ್ರಯಾ ಣಿಸು ವಂತೆ ಮಾಡಲಾ ಗುತ್ತದೆ ಎಂದೂ ಇಸ್ರೋ ಮಾಹಿತಿ ನೀಡಿದೆ. ಜು.14ರಂದು ಚಂದ್ರಯಾನ-3 ನೌಕೆಯು ಆಂಧ್ರದ ಶ್ರೀಹರಿಕೋಟಾದಿಂದ ನಭಕ್ಕೆ ಚಿಮ್ಮಿತ್ತು.

Advertisement

Udayavani is now on Telegram. Click here to join our channel and stay updated with the latest news.

Next