Advertisement

ನಿಮ್ಮವರ ಶವ ತೆಗೆದುಕೊಂಡು ಹೋಗಿ

06:00 AM Oct 23, 2018 | Team Udayavani |

ಹೊಸದಿಲ್ಲಿ: ಜಮ್ಮು ಕಾಶ್ಮೀರದಲ್ಲಿ ರವಿವಾರ ಭಾರತದ ಗಡಿಯೊಳಗೆ ಒಳನುಸುಳಲು ಯತ್ನಿಸಿದ ಇಬ್ಬರು ನುಸುಳುಕೋರರನ್ನು ಸೇನಾಪಡೆ ಹೊಡೆದುರು ಳಿಸಿದ್ದು, ಅವರ ಶವಗಳನ್ನು ತೆಗೆದುಕೊಂಡು ಹೋಗಿ ಎಂದು ಪಾಕಿಸ್ಥಾನಕ್ಕೆ ಭಾರತ ಸೂಚಿಸಿದೆ. ಸುಂದರ್‌ಬನಿ ವಲಯದ ಗಡಿ ನಿಯಂತ್ರಣಾ ರೇಖೆಯಲ್ಲಿ ರವಿವಾರ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಒಳನುಸುಳು ಕೋರರು ಸಾವನ್ನಪ್ಪಿದ್ದರು. ಈ ವೇಳೆ ಮೂವರು ಯೊಧರೂ ಹುತಾತ್ಮರಾಗಿದ್ದಾರೆ.

Advertisement

ನುಸುಳುಕೋರರನ್ನು ಪಾಕ್‌ನ ಗಡಿ ಕಾರ್ಯಪಡೆ (ಬಿಎಟಿ) ಯೋಧರು ಎಂದು ಹೇಳಲಾಗಿದೆ. ಯೋಧರ ಸಮವಸ್ತ್ರ ಧರಿಸಿದ್ದ ಇವರ ಶವಗಳನ್ನು ವಾಪಸ್‌ ತೆಗೆದುಕೊಂಡು ಹೋಗು ವಂತೆ ಅಧಿಕೃತ ಚಾನೆಲ್‌ ಮೂಲಕ ಸಂವಹನ ನಡೆಸಲಾಗಿದೆ. ಅಷ್ಟೇ ಅಲ್ಲ, ನಿಮ್ಮ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂಬ ಎಚ್ಚರಿಕೆಯನ್ನೂ ಪಾಕ್‌ಗೆ ನೀಡಲಾಗಿದೆ ಎಂದು ಸೇನೆ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ರವಿವಾರ ಐದರಿಂದ ಆರು ನುಸುಳುಕೋರರು ಗಡಿಯನ್ನು ದಾಟಿ ಭಾರತದ ನೆಲ ಪ್ರವೇಶಿಸಿದ್ದರು. ರವಿವಾರ ಎರಡು ಕಡೆ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಆರು ಉಗ್ರರು ಸಾವನ್ನಪ್ಪಿದ್ದರು. ಅಷ್ಟೇ ಅಲ್ಲ, ಪಾಕ್‌ ಪ್ರದೇಶ ದಲ್ಲಿ ಭಾರಿ ಪ್ರಮಾಣದಲ್ಲಿ ಉಗ್ರರು ನೆಲೆಸಿದ್ದು, ಇವರು ಒಳನುಸುಳುವುದಕ್ಕೆ ಸತತ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ.

ವಿವಾದ ಬಗೆಹರಿಸಲು ಭಾರತ ಮುಂದಾಗಬೇಕು: ರವಿವಾರ ಕಾಶ್ಮೀರದಲ್ಲಿ ಏಳು ನಾಗರಿಕರು ಸಾವನ್ನಪ್ಪಿದ್ದನ್ನು ಖಂಡಿಸಿ ರುವ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌, ವಿಶ್ವಸಂಸ್ಥೆ ನಿಲುವಳಿಯ ಆಧಾರದಲ್ಲಿ ಹಾಗೂ ಕಾಶ್ಮೀರ ಜನರ ಬೇಡಿಕೆಯ ಮೇರೆಗೆ ಕಾಶ್ಮೀರ ವಿವಾದವನ್ನು ಬಗೆಹರಿಸುವ ಅಗತ್ಯ ವನ್ನು ಭಾರತ ಈಗಲಾದರೂ ಮನಗಾಣಲಿ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next