Advertisement

ನೇಪಥ್ಯಕ್ಕೆ ಸರಿಯಲಿದೆ ಭಾರತೀಯ ವಾಯುಪಡೆಯ ಮಿಗ್‌-21 ಯುದ್ಧ ವಿಮಾನ

12:18 AM Jul 30, 2022 | Team Udayavani |

1962ರ ಚೀನ ಯುದ್ಧದಿಂದ ಮೊದಲ್ಗೊಂಡು ದೇಶದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ ಭಾರತೀಯ ವಾಯುಪಡೆಯ ಮಿಗ್‌-21 ಯುದ್ಧ ವಿಮಾನಗಳು 2025 ಸೆಪ್ಟಂಬರ್‌ ವೇಳೆಗೆ ಪೂರ್ಣ ಪ್ರಮಾಣದಲ್ಲಿ ನಿವೃತ್ತಿಯಾಗಲಿವೆ. ಸದ್ಯ ಐಎಎಫ್ ಬಳಿ ನಾಲ್ಕು ಸ್ಕ್ವಾಡ್ರನ್‌ ಮಿಗ್‌-21 ಯುದ್ಧ ವಿಮಾನಗಳು ಇವೆ.

Advertisement

ಹಠಾತ್‌ ನಿರ್ಧಾರ ಏಕೆ?
ರಾಜಸ್ಥಾನದ ಬಾರ್ಮರ್‌ನಲ್ಲಿ ಗುರುವಾರ ರಾತ್ರಿ ಮಿಗ್‌-21 ವಿಮಾನಗಳು ಪತನಗೊಂಡು ಇಬ್ಬರು ಪೈಲೆಟ್‌ಗಳಾದ ಫ್ಲೈಟ್‌ ಲೆಫ್ಟಿನೆಂಟ್‌ ಆದಿತ್ಯ ಬಾಲ್‌ ಮತ್ತು ವಿಂಗ್‌ ಕಮಾಂಡರ್‌ ರಾಣಾ ಮಂಡಿ ಹುತಾತ್ಮರಾಗಿದ್ದರು. ಹೀಗಾಗಿ ಹಂತ ಹಂತ ವಾಗಿ ಅವುಗಳನ್ನು ಹಿಂಪಡೆಯಲು ಐಎಎಫ್ ನಿರ್ಧರಿಸಿದೆ.

ಹಾರುವ ಶವಪೆಟ್ಟಿಗೆಗಳು
1963ರ ಡಿಸೆಂಬರ್‌ನಲ್ಲಿ ಮಿಗ್‌-21 ಯುದ್ಧ ವಿಮಾನಗಳ ಮೊದಲ ಅಪಘಾತ ಉಂಟಾಗಿತ್ತು. 2012ರಲ್ಲಿ ಆಗ ರಕ್ಷಣ ಸಚಿವರಾಗಿದ್ದ ಎ.ಕೆ. ಆ್ಯಂಟನಿ ರಷ್ಯಾದಿಂದ ಖರೀದಿಸಲಾಗಿದ್ದ 872 ಯುದ್ಧ ವಿಮಾನಗಳ ಪೈಕಿ ಅರ್ಧದಷ್ಟು ವಿಮಾನಗಳು ಅಪಘಾತಕ್ಕೀಡಾಗಿದ್ದವು ಎಂದು ಸಂಸತ್ತಿಗೆ ಮಾಹಿತಿ ನೀಡಿದ್ದರು. ಮಿಗ್‌ ಅವಘಡಗಳಲ್ಲಿ 171 ಪೈಲೆಟ್‌ಗಳು, 39 ನಾಗರಿಕರು, ಎಂಟು ಮಂದಿ ಇತರರು ಜೀವ ಕಳೆದುಕೊಂಡಿದ್ದಾರೆ. ಹೀಗಾಗಿಯೇ ಅದನ್ನು ಹಾರಾಡುವ ಶವಪೆಟ್ಟಿಗೆಗಳು ಎಂದು ಕರೆಯಲಾರಂಭಿಸಿದ್ದರು.

ದೀರ್ಘಾವಧಿಯ ಮಿತ್ರ
1955ರ ಜೂ. 16ರಂದು ಹಿಂದಿನ ಸೋವಿಯತ್‌ ಒಕ್ಕೂಟದ ಮಿಕ್‌ಯಾನ್‌-ಗ್ರುವೆಕ್‌ ಡಿಸೈನ್‌ ಬ್ಯೂರೋ ಮಿಗ್‌-21ರ ವಿನ್ಯಾಸ ಮಾಡಿ ಅಭಿವೃದ್ಧಿಪಡಿಸಿತ್ತು. ವಾಯುಪಡೆಗೆ 1963ರಲ್ಲಿ ಅದರ ಪ್ರವೇಶವಾಯಿತು. ಒಟ್ಟು 874 ಸೋವಿಯತ್‌ ವಿಮಾನಗಳನ್ನು ಐಎಎಫ್ ಒಳಗೊಂಡಿದೆ.

ನಿವೃತ್ತಿ ಅವಧಿ ಮೀರಿದ್ದರೂ ಬಳಕೆ
1990ರ ದಶಕದಲ್ಲಿಯೇ ಅವುಗಳ ಸೇವೆಯ ಅವಧಿ ಮೀರಿತ್ತು. ಐಎಎಫ್ ಗೆ ಆ ಸಂದರ್ಭದಿಂದ ಇದುವರೆಗೆ ಬೇರೆ ಅತ್ಯಾಧುನಿಕ ಯುದ್ಧ ವಿಮಾನಗಳ ಆಯ್ಕೆ ಇರಲಿಲ್ಲ. ಹೀಗಾಗಿ ಅವುಗಳ ಬಳಕೆಯನ್ನು ಮುಂದುವರಿಸಲಾಗಿತ್ತು.

Advertisement

ಮುಂದಿನ ಆಯ್ಕೆ- ಪ್ರಕ್ರಿಯೆಗಳು
-ಎಚ್‌ಎಎಲ್‌ ಅಭಿವೃದ್ಧಿಪಡಿಸುತ್ತಿರುವ ತೇಜಸ್‌ ಎಲ್‌ಎಸಿ ಸೇರ್ಪಡೆ.
-83 ಎಲ್‌ಸಿಎ ಎಂಕೆ-1ಎ ಜೆಟ್‌ ಉತ್ಪಾದಿಸಲು ರಕ್ಷಣ ಸಚಿವಾಲಯದಿಂದ ಎಚ್‌ಎಎಲ್‌ಗೆ 48 ಸಾವಿರ ಕೋಟಿ ರೂ. ಗುತ್ತಿಗೆ
-3 ವರ್ಷದಲ್ಲಿ ಮೊದಲ ಯುದ್ಧ ವಿಮಾನ ಸಿಗುವ ಸಾಧ್ಯತೆ.
ಈ ಡೀಲ್‌ನಲ್ಲಿ 73 ಎಂಕೆ-1ಎ ಯುದ್ಧ ವಿಮಾನ ಮತ್ತು 10 ಎಲ್‌ಸಿಎ ಎಂಕೆ-1 ಟ್ರೈನರ್‌ ಏರ್‌ಕ್ರಾಫ್ಟ್ ಸೇರಿದೆ.

ಸದ್ಯದ ಸ್ಥಿತಿ ಏನು?
42ಐಎಎಫ್ ನಲ್ಲಿ ಇರಬೇಕಾಗಿರುವ ಸ್ಕ್ವಾಡ್ರನ್‌ ಗಳು
32 ಐಎಎಫ್ ನಲ್ಲಿ ಹಾಲಿ ಇರುವ ಸ್ಕ್ವಾಡ್ರನ್‌ ಗಳು
12 24 ಒಂದು ಸ್ಕ್ವಾಡ್ರನ್‌ ನಲ್ಲಿ ಇರುವ ಯುದ್ಧ
ವಿಮಾನಗಳ ಸಂಖ್ಯೆ

ಸಾವು – ನೋವು
400 ಮಿಗ್‌ 21 ವಿಮಾನ ಅಪಘಾತಗಳು
200 ಇದುವರೆಗೆ ಅಸುನೀಗಿರುವ ಪೈಲಟ್‌ಗಳು
45 ರಕ್ಷಣಾ ಇಲಾಖೆಯ ಸಿಬಂದಿ (5 ವರ್ಷಗಳಲ್ಲಿ)

Advertisement

Udayavani is now on Telegram. Click here to join our channel and stay updated with the latest news.

Next