Advertisement

ಉದ್ಘಾಟನೆ ಭಾಗ್ಯ ಕಾಣದ ಶೌಚಾಲಯ

04:31 PM Oct 07, 2017 | Team Udayavani |

ದೇವದುರ್ಗ: ಪುರಸಭೆಯ ಎಸ್‌ಎಫ್‌ಸಿ ಮುಕ್ತನಿಧಿ ಐದು ಲಕ್ಷ ರೂ. ವೆಚ್ಚದಲ್ಲಿ ವಾರ್ಡ್‌ 1 ಜಹಿರುದ್ಧೀನ್‌ ದರ್ಗಾ ಹತ್ತಿರ
ಮಹಿಳೆಯರ ಸಾರ್ವಜನಿಕ ಶೌಚಾಲಯ ನಿರ್ಮಿಸಿ ಆರೂ ವರ್ಷ ಗತಿಸಿದರೂ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ.

Advertisement

ಸಕಾಲಕ್ಕೆ ಸದ್ಬಳಕೆ ಮಾಡದೇ ಇರುವುದರಿಂದ ಈಗಾಗಲೇ ಸುತ್ತಲೂ ಜಾಲಿಗಿಡಗಳು ಬೆಳೆದು ಅವ್ಯವಸ್ಥೆ ಆಗರವಾಗಿ ಮಾರ್ಪಟಿದೆ. ಹಲವು ಬಾರಿ ವಾರ್ಡ್‌ ನಿವಾಸಿಗಳು ಬಳಕೆಗೆ ಅನುಕೂಲ ಕಲ್ಪಿಸಬೇಕು ಎಂದು ಪುರಸಭೆ ಅಧಿಕಾರಿಗಳಿಗೆ
ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ವಾರ್ಡ್‌ನ ಮಹಿಳೆಯರು ಬಹಿರ್ದೆಸೆಗೆ ಬಯಲನ್ನು ಆಶ್ರಯಿಸಬೇಕಾದ
ಪರಿಸ್ಥಿತಿಯಿದೆ.

ಇಲ್ಲಿನ ಐತಿಹಾಸಿಕ ಪ್ರಸಿದ್ಧ ಜಹಿರುದ್ಧೀನ್‌ ದರ್ಗಾಕ್ಕೆ ಪ್ರತಿ ಗುರುವಾರ ರಾತ್ರಿ ಉಳಿದುಕೊಳ್ಳಲು ಭಕ್ತ ಸಾಗರವೇ ಹರಿದು
ಬರುತ್ತದೆ. ಇವರು ಬೆಳಗ್ಗೆ ಶೌಚಾಲಯಕ್ಕೆ ಹೋಗಲು ಪರದಾಡುತ್ತಾರೆ. ಇಲ್ಲಿನ ಶೌಚಾಲಯ ಬಳಕೆಯಾದರೆ ಭಕ್ತರಿಗೂ ಆಸರೆಯಾಗುತಿತ್ತು. ಆದರೆ ಇದು ವಾರ್ಡನ ಜನರಿಗೆ, ಭಕ್ತರಿಗೆ ಅನುಕೂಲ ಆಗದೇ ನಿರುಪಯುಕ್ತವಾಗಿ ಪಾಳು ಬಿದ್ದಿದೆ.

ಲಕ್ಷಾಂತರ ರೂ. ವೆಚ್ಚ ಮಾಡಿ ಶೌಚಾಲಯ ನಿರ್ಮಿಸಿದರೂ ಪ್ರಯೋಜನವಾಗಿಲ್ಲ. ಪುರಸಭೆ ಅಧಿಕಾರಿಗಳು ಹಾಗೂ
ವಾರ್ಡ್‌ನ ಸದಸ್ಯರು ಯಾರೊಬ್ಬರೂ ಈ ಕುರಿತು ಗಮನ ಹರಿಸುತ್ತಿಲ್ಲ. ನೀರಿನ ಸೌಲಭ್ಯಕ್ಕೆ ಬೋರ್‌ವೆಲ್‌ ಹಾಕಿದರು
ಸದ್ಬಳಕೆಯಾಗದೇ ಕೆಟ್ಟುನಿಂತಿವೆ. ಕೆಲ ವಾರ್ಡ್‌ನಲ್ಲಿ ಮಹಿಳೆಯರ ಸಾರ್ವಜನಿಕ ಶೌಚಾಲಯಕ್ಕೆ ನೀರಿನ ಸೌಲಭ್ಯವಿಲ್ಲದೆ ದುರ್ನಾತ ಬೀರುತ್ತಿವೆ. ವಾರದಲ್ಲಿ ಒಂದು ಬಾರಿಯೂ ಸ್ವತ್ಛಗೊಳಿಸುತ್ತಿಲ್ಲ. ಇದರಿಂದಾಗಿ ಶೌಚಾಲಯಗಳು ಗಬ್ಬು ನಾರುತ್ತಿವೆ.

ಬಯಲು ಬಹಿರ್ದೆಸೆ ಮುಕ್ತಿಗೊಳಿಸಲು ಸರಕಾರ ಶಕ್ತಿ ಮೀರಿ ಕೋಟಿ ಕೋಟಿ ಹಣ ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ ಇಲ್ಲಿ ಮಾತ್ರ ಅಧಿಕಾರಿಗಳು ಈ ಬಗ್ಗೆ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಸಾರ್ವಜನಿಕ ಶೌಚಾಲಯ ಉದ್ಘಾಟಿಸಿ ಮಹಿಳೆಯರಿಗೆ ಅನೂಕೂಲ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next