Advertisement

ದೇವನಹಳ್ಳಿಯಲ್ಲಿ ಹಸಿ ಕರಗ ಮಂಟಪ ಉದ್ಘಾಟನೆ

05:41 PM May 03, 2022 | Team Udayavani |

ದೇವನಹಳ್ಳಿ: ಪಟ್ಟಣದ ಪುಟ್ಟಪ್ಪನಗುಡಿ ಬೀದಿಯಲ್ಲಿ ಮೌಕ್ತಿಕಾಂಭ ವಹ್ನಿಕುಲ ಕ್ಷತ್ರಿಯ ತಿಗಳರ ಸಂಘದಿಂದ ಹಸಿಕರಗ ಮಂಟಪ ಉದ್ಘಾಟನೆಯು ವಿವಿಧ ಪೂಜಾ ಕಾರ್ಯಗಳೊಂದಿಗೆ ನಡೆಯಿತು.

Advertisement

ಪ್ರತಿವರ್ಷ ಕರಗ ಮಹೋತ್ಸವದ ಅಂಗವಾಗಿ ಪುಟ್ಟಪ್ಪನಗುಡಿ ಬೀದಿಯಲ್ಲಿ ಹಸಿಕರಗವನ್ನು ವಿವಿಧ ಪೂಜಾ ಕಾರ್ಯ ಗಳೊಂದಿಗೆ ಅಲ್ಲಿಂದಲೇ ಪ್ರಾರಂಭವಾಗುತ್ತದೆ. ಸುಮಾರು 20ಲಕ್ಷ ವೆಚ್ಚದಲ್ಲಿ ಹಸಿಕರಗ ಮಂಟಪ ನಿರ್ಮಾಣವಾಗಿದೆ. ಬೆಳತೂರಿನ ಎನ್‌.ನಾರಾಯಣಪ್ಪ ಮತ್ತು ಕುಟುಂಬದವರು 5 ಲಕ್ಷ ಹಣವನ್ನು ಮಂಟಪಕ್ಕೆ ನೀಡಿದ್ದಾರೆ. ಇನ್ನುಳಿದ ಹಣವನ್ನು ಮೌಕ್ತಿಕಾಂಭ ದೇವಾಲಯ ಭರಿಸಿದೆ.

16ರಂದು ಕರಗ ಮಹೋತ್ಸವ:
ತಾಲೂಕು ತಿಗಳರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಮಾತನಾಡಿ, ದೇವನ ಹಳ್ಳಿಯಲ್ಲಿ ಮೊದಲ ಬಾರಿಗೆ ಹಸಿಕರಗ ಮಂಟಪವನ್ನು ನಿರ್ಮಾಣ ಮಾಡಲಾಗಿದೆ. ಮಂಟಪಕ್ಕೆ ಕಳಸ ಸ್ಥಾಪನೆ ಮಾಡಲಾಗಿದೆ. ಮೇ 16ರಂದು ದೇವನಹಳ್ಳಿ ಕರಗಮಹೋತ್ಸವ ನಡೆಯಲಿದೆ. ಹಸಿಕರಗ ಮಂಟಪವನ್ನು 20 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದೇವೆ ಎಂದು ಹೇಳಿದರು.

ಧಾರ್ಮಿಕ ಕಾರ್ಯದಿಂದ ನೆಮ್ಮದಿ:
ಮೌಕ್ತಿಕಾಂಭ ದೇವಾಲಯ ಸಮಿತಿ ಅಧ್ಯಕ್ಷ ಶಿವನಾಪುರ ವಿಜಯಕುಮಾರ್‌ ಮಾತನಾಡಿ, ಬೆಂಗಳೂರು ಕರಗ ಮಾದರಿಯಲ್ಲೇ ದೇವನಹಳ್ಳಿ ಕರಗವನ್ನು ಆಚರಿಸಿಕೊಂಡು ಬಂದಿದ್ದೇವೆ. ಮೇ 14ರಂದು ಹಸಿಕರಗ ನಡೆಯಲಿದ್ದು, ಇಲ್ಲಿಂದಲೇ ವಿವಿಧ ಪೂಜಾ ಕಾರ್ಯಗಳು ಹಸಿಕರಗ ಮಂಟಪದಲ್ಲಿ ನಡೆಯಲಿದೆ.

ಧಾರ್ಮಿಕ ಕಾರ್ಯಗಳಿಂದ ಪ್ರತಿ ಜನರಿಗೂ ಮನಸ್ಸಿಗೆ ಶಾಂತಿ ನೆಮ್ಮದಿ ನೆಲೆಸಲಿದೆ. ಕಳೆದ ಎರಡು ವರ್ಷದಿಂದ ಕೊರೊನಾದಿಂದ ಕರಗ ಮಹೋತ್ಸವ ಮಾಡಲಿಲ್ಲ, ಈ ಬಾರಿ ಕರಗ ಮಹೋತ್ಸವವನ್ನು ವಿಜೃಂಭಣೆಯಿಂದ ಮಾಡಲಾಗುತ್ತಿದೆ ಎಂದು ಹೇಳಿದರು. ಶಾಸಕ ಎಲ್‌.ಎನ್‌.ನಾರಾಯಣ ಸ್ವಾಮಿ, ಮಾಜಿ ಶಾಸಕ ಪಿಳ್ಳಮುನಿ ಶಾಮಪ್ಪ, ಕೆಪಿಸಿಸಿ ಪ್ರಧಾನ ಕಾರ್ಯ ದರ್ಶಿ ಎ.ಸಿ.ಶ್ರೀನಿವಾಸ್‌, ಕಾಂಗ್ರೆಸ್‌ ಮುಖಂಡ ಶೆಟ್ಟಿಗೆರೆ ಎಂ.ರಾಜಣ್ಣ, ಕೆಪಿಸಿಸಿ ಹಿಂದುಳಿದ ವರ್ಗದ ಉಪಾಧ್ಯಕ್ಷ ಸಿ.ಜಗನ್ನಾಥ್‌, ತಾಲೂಕು ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ತಾಲೂಕು ಯಾದವ ಸಂಘದ ಅಧ್ಯಕ್ಷ ಎನ್‌.ರಘು, ಪುರಸಭಾ ಸ್ಥಾಯಿಸಮಿತಿ ಅಧ್ಯಕ್ಷ ಎಸ್‌.ಸಿ.ಚಂದ್ರಪ್ಪ, ಮಾಜಿ ಪುರಸಭಾ ಸದಸ್ಯ ಶಶಿಕುಮಾರ್‌, ದೇವಸ್ಥಾನದ ಅರ್ಚಕ ರವಿಕುಮಾರ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next