Advertisement

ವೇಣೂರು ನವೀಕೃತ ಕ್ರಿಸ್ತರಾಜ ದೇವಾಲಯದ ಉದ್ಘಾಟನೆ 

02:53 PM Nov 25, 2017 | Team Udayavani |

ವೇಣೂರು: ನವೀಕರಣಗೊಂಡ ವೇಣೂರು ಕ್ರಿಸ್ತರಾಜ ದೇವಾಲಯದ ಉದ್ಘಾಟನೆ, ಆಶೀರ್ವಚನ , ಅಭಿನಂದನ ಕಾರ್ಯಕ್ರಮವು ಶುಕ್ರವಾರ ವೇಣೂರು ಚರ್ಚ್‌ ಸಭಾಂಗಣದಲ್ಲಿ ನಡೆಯಿತು.

Advertisement

ನವೀಕರಣಗೊಂಡ ದೇವಾಲಯದ ಉದ್ಘಾಟನೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ| ಡಾ| ಎಲೋಸಿಯಸ್‌ ಪೌಲ್‌ ಡಿ’ಸೋಜ ನೆರವೇರಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ವೇಣೂರು ಚರ್ಚ್‌ನ ಧರ್ಮಗುರುಗಳ ಕಾರ್ಯಸಾಧನೆ, ಚರ್ಚ್‌ ಪಾಲನಾ ಪರಿಷತ್‌ ಪದಾಧಿಕಾರಿಗಳ ಶ್ರಮ, ದಾನಿಗಳ ಸೇವೆಯನ್ನು ಶ್ಲಾಘಿಸಿದರು.

ಬೆಳ್ತಂಗಡಿ ವಲಯದ ಧರ್ಮಾಧ್ಯಕ್ಷ ಡಾ| ಲಾರೆನ್ಸ್‌ ಮುಕ್ಕುಯಿ ಆಗಮಿಸಿದ್ದರು. ಬೆಳ್ತಂಗಡಿ ವಲಯದ ಪ್ರಧಾನ ಧರ್ಮಗುರು ವಂ| ಬೊನ್‌ವೆಂಚರ್‌ ನಜ್ರತ್‌ ಮುಖ್ಯ ಅತಿಥಿಗಳಾಗಿ ಸಂದೇಶ ನೀಡಿದರು. ಮೂಲ್ಕಿ-ಮೂಡಬಿದಿರೆ ಕ್ಷೇತ್ರದ ಶಾಸಕ ಕೆ. ಅಭಯಚಂದ್ರ ಜೈನ್‌, ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್‌, ವೇಣೂರು ತಾ.ಪಂ. ಸದಸ್ಯ ಕೆ. ವಿಜಯ ಗೌಡ ಮಾತನಾಡಿದರು. ಜುಲಿಯಾನ ಪಿರೇರಾ, ವೇಣೂರು ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿ, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭಾಸ್ಕರ ಬಲ್ಯಾಯ, ವೇಣೂರು ಶ್ರೀ ದಿಗಂಬರ ಜೈನತೀರ್ಥ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಎಂ. ವಿಜಯರಾಜ ಅಧಿಕಾರಿ, ವೇಣೂರು ಚರ್ಚ್‌ ಪಾಲನ ಪರಿಷತ್‌ ಉಪಾಧ್ಯಕ್ಷ ರೊನಾಲ್ಡ್‌ ಡಿ’ಸೋಜ, ಕಾರ್ಯದರ್ಶಿ ಸ್ಟೀವನ್‌ ಡಿಕುನ್ಹಾ ಉಪಸ್ಥಿತರಿದ್ದರು. ಮಂಗಳೂರು ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಿಲಿಯಂ ಮಿನೇಜಸ್‌ ಉಪಸ್ಥಿತರಿದ್ದರು.

ಸಮ್ಮಾನ
ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್‌ ಡಾ| ಎಲೋಸಿಯಸ್‌ ಪೌಲ್‌ ಡಿ’ಸೋಜಾ , ಬೆಳ್ತಂಗಡಿ ವಲಯದ ಪ್ರಧಾನ ಧರ್ಮಗುರು ವಂ| ಬೋರ್‌ ವೆಂಚರ್‌ ನಜರತ್‌, ವೇಣೂರು ಚರ್ಚ್‌ನ ಧರ್ಮಗುರು ವಂ| ಆ್ಯಂಟನಿ ವಿ. ಲೂವಿಸ್‌, ಚರ್ಚ್‌ ಪಾಲನ ಪರಿಷತ್‌ ಉಪಾಧ್ಯಕ್ಷ ರೊನಾಲ್ಡ್‌ ಡಿ’ಸೊಜಾ, ಕಾರ್ಯದರ್ಶಿ ಸ್ಟೀವನ್‌ ಡಿಕುನ್ಹಾ, ಎಂಜಿನಿಯರ್‌ ಲಾರೆನ್ಸ್‌ ಕುಟಿನ್ಹೊ ಮಂಗಳೂರು, ಮಡಂತ್ಯಾರು ಕೊರೆಯಾ ಕನ್‌ಸ್ಟ್ರಕ್ಷನ್‌ನ ಮ್ಯಾಕ್ಸಿಂ ಕೊರೆಯಾ, ವೇಣೂರು ಚರ್ಚ್‌ನಲ್ಲಿ ಸೇವೆ ನೀಡಿದ ಧರ್ಮಗುರುಗಳನ್ನು, ಮಾಜಿ, ಹಾಲಿ ಚರ್ಚ್‌ ಪಾಲನ ಪರಿಷತ್‌ ಪದಾಧಿಕಾರಿಗಳನ್ನು, ದಾನಿಗಳನ್ನು, ವೇಣೂರು ಐಸಿವೈಎಂ ಪದಾಧಿಕಾರಿಗಳನ್ನು ಹಾಗೂ ವಿವಿಧ ರೀತಿಯಲ್ಲಿ ಸಹಕಾರ , ಸೇವೆ ನೀಡಿದವರನ್ನು ಸಮ್ಮಾನಿಸಿ ಗೌರವಿಸಲಾಯಿತು.

ಸ್ಮರಣಸಂಚಿಕೆ ಬಿಡುಗಡೆ: 
ನವೀಕೃತ ಚರ್ಚ್‌ನ ಉದ್ಘಾಟನಾ ಸಮಾರಂಭದ ಸವಿನೆನಪಿಗಾಗಿ ಹೊರತಂದ ‘ಕ್ರೀಸ್ತಿ ಸುವಾದ್‌ ಸ್ಮರಣಸಂಚಿಕೆಯನ್ನು ಧರ್ಮಾಧ್ಯಕ್ಷ ವಂ| ಡಾ| ಎಲೋಶಿಯಸ್‌ ಪೌಲ್‌ ಡಿ’ಸೋಜ ಅನಾವರಣಗೊಳಿಸಿದರು.

Advertisement

ವೇಣೂರು ಚರ್ಚ್‌ನ ಧರ್ಮಗುರು ವಂ| ಆ್ಯಂಟನಿ ವಿ. ಲೂವಿಸ್‌ ಸ್ವಾಗತಿಸಿದರು. ಚರ್ಚ್‌ ನವೀಕರಣ ಸಮಿತಿ ಸದಸ್ಯ ಅನೂಪ್‌ ಜೆ. ಪಾಯಸ್‌ ಮತ್ತು ಪದವೀಧರ ಶಿಕ್ಷಕ ವಿನೋದ್‌ ಮೊನೀಸ್‌ ಕಾರ್ಯಕ್ರಮ ನಿರೂಪಿಸಿ, ವೇಣೂರು ಚರ್ಚ್‌ ಪಾಲನ ಪರಿಷತ್‌ ಉಪಾಧ್ಯಕ್ಷ ರೊನಾಲ್ಡ್‌ ಡಿ’ಸೋಜಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next