Advertisement
ಪ್ರತಿಭಟನಾಕಾರರನ್ನು ಉದ್ದೇಶಿಸಿ ಎಸ್ ಯುಸಿಐ ನಗರ ಕಾರ್ಯದರ್ಶಿ ವಿ.ಜಿ.ದೇಸಾಯಿ ಮಾತನಾಡಿ, ಆಸ್ಸಾಂನಲ್ಲಿ ಮೂರು ದಶಕಗಳಿಂದ ನಡೆಯುತ್ತಿರುವ ಅಕ್ರಮ ವಲಸಿಗರ ಕುರಿತ ವಿವಾದದ ಮುಂದುವರಿಕೆಯಾಗಿ ಕಳೆ ಐದುವರ್ಷದಿಂದ 1200 ಕೋಟಿ ರೂ.ವೆಚ್ಚದಲ್ಲಿ ಪೌರತ್ವ ನೋಂದಣಿ ಕಾಯ್ದೆಯಡಿ ಸಮೀಕ್ಷೆ ನಡೆಸಿ ಈಗ ಅಂತಿಮ ಕರಡು ಪಟ್ಟಿ ಪ್ರಕಟಿಸಿದ್ದು, ಅದರಲ್ಲಿ 40 ಲಕ್ಷಜನರ ಹೆಸರು ಕೈಬಿಟ್ಟಿರುವುದು ಖಂಡನೀಯ ಎಂದರು.
ಸೇನೆಯಲ್ಲಿ ಸೇವೆ ಸಲ್ಲಿಸಿದವರು, ಮಾಜಿ ಶಾಸಕರು ಸೇರಿದಂತೆ ಹಲವರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿದರು. ಭಾಷಾ ಮತ್ತು ಮತೀಯ ಅಲ್ಪಸಂಖ್ಯಾತರ ವಿರುದ್ಧ ಇಂತಹ ಫ್ಯಾಸೀಸ್‌ಂ ದಾಳಿ ಜನತಂತ್ರ ವಿರೋಧಿ ಕ್ರಮವಾಗಿದೆ ಎಂದರು. ಜಿಲ್ಲಾ ಸಮಿತಿ ಸದಸ್ಯ ಗಣಪತರಾವ ಕೆ. ಮಾನೆ ಮಾತನಾಡಿ, 1985ರ ಸುಮಾರಿಗೆ ಆಸ್ಸಾಂ ಗಣಪರಿಷತ್ ನೇತೃತ್ವದ ಸರ್ಕಾರ ತೀವ್ರ ಪ್ರಾದೇಶಿಕತಾವಾದಿ ಧೋರಣೆಯಿಂದ ಅಸ್ಸಾಮೇತರ ಜನರ ವಿರುದ್ಧ ಚಳವಳಿ ನಡೆಸಿತ್ತು. ಆಸ್ಸಾಂನಲ್ಲಿ ಲಕ್ಷಾಂತರ ಜನ ವಲಸಿಗರಿದ್ದಾರೆ ಎಂದು ವಾದಿಸಿತ್ತು. ಆದರೂ ದಾಖಲೆಗಳ ಮೂಲಕ ಅದನ್ನು ಸಾಬೀತುಪಡಿಸಲು ಆಗಿರಲಿಲ್ಲ. ಕೇವಲ 3.7 ಲಕ್ಷ ಜನರು ಸಂಶಯಾಸ್ಪದ ಮತದಾರರು ಎಂದು ಗುರುತಿಸಲಾಗಿತ್ತು ಎಂದು ವಿವರಿಸಿದರು.
Related Articles
ಬಾಂಗ್ಲಾ ವಿಭಜನೆಗೊಂಡ ಬಳಿಕ 1971ಕ್ಕೂ ಮೊದಲು ಭಾರತಕ್ಕೆ ವಲಸೆ ಬಂದವರನ್ನು ಭಾರತೀಯ ಪ್ರಜೆಗಳೆಂದು ಪರಿಗಣಿಸಲು ಎಲ್ಲಾ ಪ್ರಜಾಪ್ರಭುತ್ವವಾದಿ ಪಕ್ಷಗಳ ನಿಲುವಾಗಿತ್ತು ಎಂದರು.
Advertisement
ಭಾರತೀಯ ಪೌರತ್ವ ಪಡೆಯಲು 1971 ಕ್ಕೂ ಹಿಂದಿನ ಮತದಾರರ ಪಟ್ಟಿಯಲ್ಲಿ ಅಥವಾ 1951 ರ ಎನ್‌ಆರ್‌ಸಿಯಲ್ಲಿ ತಮ್ಮ ಅಥವಾ ವಂಶಸ್ಥರ ಹೆಸರನ್ನು ದಾಖಲೆಗಳ ಸಮೇತ ಸಲ್ಲಿಸಬೇಕಿದೆ. ಈ ದಾಖಲೆಗಳು ಸರಿಯಾಗಿ ಲಭ್ಯವಿಲ್ಲ.ಮತದಾರ ಪಟ್ಟಿಯೂ ದೋಷಪೂರಿತವಾಗಿದೆ. ಇದರಿಂದ ಭೂ ದಾಖಲೆಗಳಿಲ್ಲದ ಕೂಲಿಕಾರರು ಪೌರತ್ವವನ್ನು ಶ್ರೀಲಂಕಾದ ತಮಿಳರಂತೆ ನಿರಾಶ್ರಿತರಾಗಲಿದ್ದಾರೆ. ಮಾನವ ದುರಂತ ತಪ್ಪಿಸಲು ಎಲ್ಲಾ ನೈಜ ಭಾರತೀಯ ಪ್ರಜೆಗಳ
ಪೌರತ್ವ ನೋಂದಣಿ ಮಾಡಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಸಮಿತಿ ಸದಸ್ಯ ಮಹೇಶ ನಾಡಗೌಡ, ನಿಂಗಣ್ಣ ಜಂಬಗಿ, ಜಗನ್ನಾಥ, ಮಹೇಶ, ಗೌರಮ್ಮ, ಅಭಯಾ ದಿವಾಕರ, ಶರಣು ಹೇರೂರ, ಅಜಯ ಜಾಧವ, ಈರಣ್ಣಾ ಇಸಬಾ, ಶಿಲ್ಪಾ ಬಿ.ಕೆ., ಸ್ನೇಹಾ ಕಟ್ಟಿಮನಿ ಹಾಗೂ ಇತರರು
ಭಾಗವಹಿಸಿದ್ದರು.