Advertisement

ಮಹಾವೀರರ ಆದರ್ಶ ಮಾದರಿ

11:53 AM Mar 30, 2018 | |

ಸಾಗರ: ಜನರಲ್ಲಿ ಮೌಡ್ಯ ನಿವಾರಣೆಯಾಗದೆ ಆತ್ಮಕಲ್ಯಾಣ ಸಾಧ್ಯವಿಲ್ಲ. ಅಹಿಂಸಾ ಪರಮೋಧರ್ಮ ಎಂಬ ತತ್ವದಡಿ ರೂಪಿತವಾಗಿರುವ ಭಗವಾನ್‌ ಮಹಾವೀರರ ಜೀವನ ಆದರ್ಶಮಯವಾದದ್ದು ಎಂದು ಸಹಾಯಕ ಆಯುಕ್ತ ನಾಗರಾಜ ಆರ್‌. ಸಿಂಗ್ರೇರ್‌ ಹೇಳಿದರು. ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಗವಾನ್‌ ಮಹಾವೀರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಭಗವಾನ್‌ ಮಹಾವೀರರು ಜಾತಿ, ಉಪಜಾತಿಗಳನ್ನು ವಿರೋಧಿಸುವ ಮೂಲಕ ಸಮಷ್ಟಿ ಸಮಾಜ ನಿರ್ಮಾಣಕ್ಕೆ ಒತ್ತು ಕೊಟ್ಟವರು. ಅಹಿಂಸೆಯನ್ನು ಪ್ರತಿಪಾದಿಸುವ ಮೂಲಕ ಈ ಜಗತ್ತಿನಲ್ಲಿ ಮನುಷ್ಯನಿಗೆ ಬದುಕುವಷ್ಟೇ ಹಕ್ಕು ಎಲ್ಲ ಪ್ರಾಣಿ, ಕ್ರಿಮಿಕೀಟಗಳಿಗೂ ಇದೆ.

ಯಾರ ಹಕ್ಕನ್ನು ಕಿತ್ತುಕೊಳ್ಳುವ ಕೆಲಸ ಮಾಡಬಾರದು. ಸುಲಭ ಹಾಗೂ ಸರಳ ಭಾಷೆಯಲ್ಲಿ ಮಹಾವೀರರು ನಾಡಿಗೆ ನೀಡಿದ ಸಂದೇಶ ಮನುಷ್ಯನಲ್ಲಿ ಪ್ರೀತಿ ವಿಶ್ವಾಸ ಹುಟ್ಟುವಂತೆ ಮಾಡುತ್ತದೆ ಎಂದು ಹೇಳಿದರು. ತಹಶೀಲ್ದಾರ್‌ ತುಷಾರ್‌ ಬಿ. ಹೊಸೂರು, ಡಿವೈಎಸ್‌ಪಿ ಮಂಜುನಾಥ ಕವರಿ, ತಾಪಂ ಕಾರ್ಯ ನಿರ್ವಾಹಣಾಧಿಕಾರಿ ಡಾ| ಕಲ್ಲಪ್ಪ ಎಸ್‌., ಪ್ರೊಬೇಷನರಿ ತಹಶೀಲ್ದಾರ್‌ ಗೋವಿಂದರಾಜು ಇದ್ದರು. ವಿ.ಟಿ. ಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು. ನಂತರ ಭಗವಾನ್‌ ಮಹಾವೀರರ ಭಾವಚಿತ್ರದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಗಣಪತಿ ದೇವಸ್ಥಾನ ಸಮೀಪದ ಶ್ವೇತಾಂಬರ ಜೈನಬಸದಿಯಲ್ಲಿ ಸಮಾಪ್ತಿಗೊಂಡಿತು. ಜೈನ ಸಮಾಜದ ಪ್ರಮುಖರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next