Advertisement
ಆನಂದಪುರದ ಹೆಬ್ಬೊಡಿಯಲ್ಲಿ ವಿಶ್ವಬ್ಯಾಂಕ್ ಯೋಜನೆಯಡಿ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಸಂಗ್ರಹಿಸಿ ಇಡಲಾಗಿದ್ದ ಉತ್ತಮ ಗುಣಮಟ್ಟದ ಮರಳನ್ನು ಅನ ಧಿಕೃತವಾಗಿ ಸಾಗಾಟ ಮಾಡಲಾಗಿದೆ. ಇದನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ದೂರು ಕೊಟ್ಟಿದ್ದರೂ ಆರೋಪಿಗಳನ್ನು ಇದುವರೆಗೆ ಬಂಧಿಸದೆ ಇರುವುದರ ಹಿಂದೆ ಅನೇಕ ಅನುಮಾನ ಮೂಡಲು ಕಾರಣವಾಗಿದೆ.
Related Articles
Advertisement
ಇದರಿಂದ ಗೂಂಡಾ ಕಾಯ್ದೆಯ ಮಹತ್ವವೇ ಹಾಳಾಗುತ್ತಿದೆ ಎಂದರು. ಡಿವೈಎಸ್‌ಪಿ ಕವರಿ ಪ್ರತಿಕ್ರಿಯಿಸಿ, ನಮಗೆ ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲ. ಪೊಲೀಸರು ಸತ್ಯಾಸತ್ಯತೆ ಅರಿತು ಪ್ರಕರಣ ದಾಖಲಿಸುತ್ತಾರೆ. ಒಂದೊಮ್ಮೆ ನಾವು ತಪ್ಪು ಮಾಡಿದರೆ ನಮ್ಮ ವಿರುದ್ಧ ಕೂಡ ಪ್ರಕರಣ ದಾಖಲಿಸಲು ನಿಮಗೆ ಅವಕಾಶವಿದೆ. ಜಿಲ್ಲಾಡಳಿತ ಸೂಚನೆ ನೀಡಿದಂತೆ ನಾವು ಮರಳು ಸಾಗಾಟ ಸಂದರ್ಭದಲ್ಲಿ ಕ್ರಮ ಕೈಗೊಳ್ಳುತ್ತಿದ್ದೇವೆ. ಹೆಬ್ಬೊಡಿ ಮರಳು ಸಾಗಾಟಕ್ಕೆ ಸಂಬಂಧಪಟ್ಟಂತೆ ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಮಲೆನಾಡಿಗೆ ಪ್ರತ್ಯೇಕ ಮರಳು ನೀತಿ ಜಾರಿಗೆ ತರುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಹೊಸನಗರ ಭಾಗದಿಂದ ಬೆಂಗಳೂರಿಗೆ ಅನಧಿಕೃತವಾಗಿ ಮರಳು ಸಾಗಾಟ ನಡೆಯುತ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ನಿಗಾವಹಿಸಬೇಕು. ಆಶ್ರಯ ಮನೆ ಹಾಗೂ ಶೌಚಾಲಯ ನಿರ್ಮಾಣಕ್ಕೆ ಮರಳು ತೆಗೆದುಕೊಂಡು ಹೋಗುತ್ತಿರುವ ಬಡವರ ವಿರುದ್ಧ ಇಲಾಖೆ ಮೃದು ಧೋರಣೆ ಅನುಸರಿಸಬೇಕು ಎಂದು ತಾಪಂ ಅಧ್ಯಕ್ಷ ಬಿ.ಎಚ್. ಮಲ್ಲಿಕಾರ್ಜುನ ಹಕ್ರೆ ಸೂಚಿಸಿದರು.
ಮರಳಿನ ದರ ವಿಪರೀತವಾಗಿದ್ದು ಹಾಲಿ ಆಶ್ರಯ ಮನೆಗಳಿಗೆ ನೀಡುತ್ತಿರುವ ಅನುದಾನವನ್ನು 2.50 ಲಕ್ಷ ರೂ.ಗೆ ಹೆಚ್ಚಿಸಲು ಸರ್ಕಾರಕ್ಕೆ ಆಗ್ರಹಿಸಬೇಕು ಎಂದು ಅಶೋಕ ಬರದವಳ್ಳಿ ಸೊರಬ- ಮಾರ್ಕೆಟ್ ರಸ್ತೆಯಲ್ಲಿ ಹಗಲು ಹೊತ್ತಿನಲ್ಲಿ ಭಾರಿ ವಾಹನ ಸಂಚರಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜ್ಯೋತಿ ಒತ್ತಾಯಿಸಿದರು. ತಾಪಂ ಉಪಾಧ್ಯಕ್ಷ ಕೆ.ಎಚ್. ಪರಶುರಾಮ್, ಕಾರ್ಯನಿರ್ವಾಹಣಾಧಿಕಾರಿ ಡಾ| ಕಲ್ಲಪ್ಪ ಎಸ್. ಇದ್ದರು.
ಕೆಎಸ್‌ಆರ್‌ಟಿಸಿ ಘಟಕಕ್ಕೆ ಮುತ್ತಿಗೆಗೆ ನಿರ್ಧಾರ ತಾಲೂಕಿನ ಕೆಎಸ್‌ಆರ್‌ಟಿಸಿ ಘಟಕದಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಅವ್ಯವಸ್ಥೆಯ ಆಗರವಾದ ಘಟಕದಲ್ಲಿನ ಮುಖ್ಯಸ್ಥರು ತಾವು ಸಚಿವ ಕಾಗೋಡು ತಿಮ್ಮಪ್ಪ ಅವರ ಸಂಬಂಧಿ ಎಂದು ಹೇಳಿಕೊಳ್ಳುತ್ತಾರೆ. ಗ್ರಾಮಾಂತರದಲ್ಲಿ ಬಸ್ ಸೌಕರ್ಯ ಸರಿಯಿಲ್ಲ ಎಂದು ಸದಸ್ಯ ಕಲಸೆ ಚಂದ್ರಪ್ಪ ಆಕ್ಷೇಪಿಸಿದರು. ಸದಸ್ಯರಾದ ಸುವರ್ಣ ಟೇಕಪ್ಪ, ಪ್ರಭಾವತಿ ಚಂದ್ರಕಾಂತ್ ಮತ್ತಿತರರು ತಮ್ಮ ಆಕ್ಷೇಪ ಪ್ರಸ್ತಾಪಿಸಿ, ನೌಕರರಿಗೂ ಕಿರುಕುಳ ನೀಡಲಾಗುತ್ತಿದೆ ಎಂದರು. ಕಳೆದ 2 ವರ್ಷಗಳಿಂದ ಕೋರಿಕೆ ಸಲ್ಲಿಸಲಾದ ಮಾರ್ಗಗಳಲ್ಲಿ ಬಸ್ ಸಂಚಾರ ಪ್ರಾರಂಭಿಸಿಲ್ಲ ಎಂದು ಹೇಳಿದ ಅಧ್ಯಕ್ಷ ಹಕ್ರೆ, ಈ ಸಂಬಂಧ ಸಭೆಯಲ್ಲಿ ನಿರ್ಣಯ ಕೈಗೊಂಡರೆ ಕೆಲಸ ಆಗುವುದಿಲ್ಲ. ಬದಲಿಗೆ ಜನಪ್ರತಿನಿಧಿಗಳೆಲ್ಲರೂ ಸೇರಿ ಕೆಎಸ್‌ಆರ್‌ಟಿಸಿ ಘಟಕ್ಕೆ ಮುತ್ತಿಗೆ ಹಾಕೋಣ ಎಂದರು.