Advertisement

ICC World Cup 2023: ಯಾರಿಗೆ ಸಿಗಲಿದೆ ಸರಣಿ ಶ್ರೇಷ್ಠ ಪ್ರಶಸ್ತಿ? ಇಲ್ಲಿದೆ 9 ಜನರ ಪಟ್ಟಿ

03:20 PM Nov 18, 2023 | Team Udayavani |

ಅಹಮದಾಬಾದ್: ಅತ್ಯಂತ ಯಶಸ್ವಿಯಾಗಿ ಸಾಗಿದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023 ಕೂಟ ಇದೀಗ ಅಂತಿಮ ಘಟ್ಟ ತಲುಪಿದೆ. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ. ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ.

Advertisement

ಹಲವಾರು ಆಟಗಾರರು ಈ ಬಾರಿ ಕೂಟದುದ್ದಕ್ಕೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ವಿರಾಟ್ ಕೊಹ್ಲಿ, ಕ್ವಿಂಟನ್ ಡಿಕಾಕ್, ಮೊಹಮ್ಮದ್ ಶಮಿಯಂತಹ ಹಿರಿಯರು ಮತ್ತು ರಚಿನ್ ರವೀಂದ್ರರಂತಹ ಹೊಸ ಹುರುಪಿನ ಆಟಗಾರರು ಈ ಬಾರಿಯ ಟೂರ್ನಮೆಂಟ್ ನ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.

ಇದೀಗ ಸರಣಿಶ್ರೇಷ್ಠ ಪ್ರಶಸ್ತಿಗೆ ಒಂಬತ್ತು ಜನರ ಅಂತಿಮ ಪಟ್ಟಿಯನ್ನು ಐಸಿಸಿ ಇಂದು ಬಿಡುಗಡೆ ಮಾಡಿದೆ. ವಿಶೇಷವೆಂದರೆ ಫೈನಲ್ ನಲ್ಲಿ ಸ್ಥಾನ ಪಡೆದಿರುವ ಭಾರತದ ನಾಲ್ವರು ಸರಣಿ ಶ್ರೇಷ್ಠ ಪ್ರಶಸ್ತಿ ಗೆಲ್ಲುವ ರೇಸ್ ನಲ್ಲಿದ್ದಾರೆ.

1 ವಿರಾಟ್ ಕೊಹ್ಲಿ: ಇತ್ತೀಚೆಗಷ್ಟೇ ಏಕದಿನ ಕ್ರಿಕೆಟ್ ನಲ್ಲಿ 50 ಶತಕಗಳ ದಾಖಲೆ ಬರೆದ ವಿರಾಟ್ ಕೊಹ್ಲಿ ಈ ಬಾರಿಯ ಕೂಟದಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. 711 ರನ್ ಗಳಿಸಿರುವ ವಿರಾಟ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿ.

2 ಆ್ಯಡಂ ಜಂಪಾ: ಆಸೀಸ್ ಸ್ಪಿನ್ನರ್ ಆ್ಯಂಡ ಜಂಪಾ ಅವರು ಈ ಬಾರಿ ಉತ್ತಮ ಬೌಲಿಂಗ್ ನಿಂದ ತಂಡಕ್ಕೆ ನೆರವಾದವರು. 22 ವಿಕೆಟ್ ಕಬಳಿಸಿರುವ ಜಂಪಾ ರೇಸ್ ನಲ್ಲಿದ್ದಾರೆ.

Advertisement

3 ಕ್ವಿಂಟನ್ ಡಿಕಾಕ್: ಇತ್ತೀಚೆಗಷ್ಟೇ ಕ್ರಿಕೆಟ್ ಗೆ ವಿದಾಯ ಹೇಳಿದ ಕ್ವಿಂಟನ್ ಡಿಕಾಕ್ ತನ್ನ ಕೊನೆಯ ಟೂರ್ನಮೆಂಟ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಸೆಮಿ ಫೈನಲ್ ನಲ್ಲಿ ಅಂತ್ಯವಾದ ದಕ್ಷಿಣ ಆಫ್ರಿಕಾದ ಅಭಿಯಾನದಲ್ಲಿ ಡಿಕಾಕ್ 594 ರನ್ ಗಳಿಸಿದ್ದಾರೆ.

4 ಮೊಹಮ್ಮದ್ ಶಮಿ: ಭಾರತದ ಬೌಲಿಂಗ್ ಶಮಿ ಅವರು ನಿಸ್ಸಂದೇಹವಾಗಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಮೊದಲ ಮೂರು ಪಂದ್ಯದಲ್ಲಿ ಆಡುವ ಅವಕಾಶ ಪಡೆಯದ ಶಮಿ ಸದ್ಯ ಕೂಟದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್. 23 ವಿಕೆಟ್ ನೊಂದಿಗೆ ಶಮಿ ಈ ರೇಸ್ ನಲ್ಲಿದ್ದಾರೆ.

5 ರಚಿನ್ ರವೀಂದ್ರ: ನ್ಯೂಜಿಲ್ಯಾಂಡ್ ನ ಹೊಸ ಬ್ಯಾಟಿಂಗ್ ಸೆನ್ಸೇಶನ್ ರಚಿನ್ ರವೀಂದ್ರ ಅವರು ಈ ಕೂಟದ ಅಚ್ಚರಿ. 578 ರನ್ ಗಳಿಸಿರುವ ಎಡಗೈ ಬ್ಯಾಟರ್ ರಚಿನ್ ಅವರು ಬೌಲಿಂಗ್ ನಲ್ಲಿ ಐದು ವಿಕೆಟ್ ಪಡೆದಿದ್ದಾರೆ.

6 ಗ್ಲೆನ್ ಮ್ಯಾಕ್ಸವೆಲ್: ವಿಶ್ವಕಪ್ ಇತಿಹಾಸದಲ್ಲಿಯೇ ಅತ್ಯಂತ ಶ್ರೇಷ್ಠ ಇನ್ನಿಂಗ್ಸ್ ಗಳಲ್ಲಿ ಒಂದನ್ನು ಆಡಿದ ಮ್ಯಾಕ್ಸವೆಲ್ ಕೂಟದಲ್ಲಿ 398 ರನ್ ಗಳಿಸಿದ್ದಾರೆ. ಇದರೊಂದಿಗೆ ಐದು ವಿಕೆಟ್ ಕೂಡಾ ಕಬಳಿಸಿದ್ದಾರೆ.

7 ರೋಹಿತ್ ಶರ್ಮಾ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಈ ಕೂಟದಲ್ಲಿ ಅದ್ಭುತ ವೇಗದ ಬ್ಯಾಟಿಂಗ್ ನಿಂದ ನೆರವಾದವರು. ಒಂದು ಶತಕ ಮೂರು ಅರ್ಧಶತಕ ಬಾರಿಸಿರುವ ರೋಹಿತ್ ಶರ್ಮಾ 550 ರನ್ ಗಳಿಸಿದ್ದಾರೆ.

8 ಜಸ್ಪ್ರೀತ್ ಬುಮ್ರಾ: ಟೀಂ ಇಂಡಿಯಾದ ವೇಗದ ಬೌಲಿಂಗ್ ವಿಭಾಗದ ಸಾರಥಿ ಜಸ್ಪ್ರೀತ್ ಬುಮ್ರಾ ಅವರು ಈ ಬಾರಿಯ ಕೂಟದಲ್ಲಿ 18 ವಿಕೆಟ್ ಪಡೆದಿದ್ದಾರೆ. ಉತ್ತಮ ಎಕಾನಮಿ ಮೂಲಕ ಬುಮ್ರಾ ಸರಣಿ ಶ್ರೇಷ್ಠ ಪ್ರಶಸ್ತಿ ರೇಸ್ ನಲ್ಲಿದ್ದಾರೆ.

9 ಡ್ಯಾರೆಲ್ ಮೆಚೆಲ್: ನ್ಯೂಜಿಲ್ಯಾಂಡ್ ನ ಈ ಬಲಗೈ ಆಟಗಾರ ಕೂಟದಲ್ಲಿ 552 ರನ್ ಗಳಿಸಿದ್ದಾರೆ. ಕೂಟದಲ್ಲಿ ಎರಡು ಶತಕ ಸಿಡಿಸಿರುವ ಮಿಚೆಲ್ ಸರಣಿ ಶ್ರೇಷ್ಠ ಪ್ರಶಸ್ತಿಯ ರೇಸ್ ನಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next