Advertisement

ಹಸಿವು ಮುಕ್ತ ರಾಜ್ಯ ಸಿದ್ದರಾಮಯ್ಯ ಗುರಿ

05:04 PM May 07, 2018 | Team Udayavani |

ಬಾದಾಮಿ: ಕಾಂಗ್ರೆಸ್‌ ಅಭ್ಯರ್ಥಿ ಸಿಎಂ ಸಿದ್ದರಾಮಯ್ಯ ಅಧಿಕಾರ ಹಿಡಿದ ದಿನದಿಂದ ನಾಲ್ಕು ಕೋಟಿ ಜನರಿಗೆ ಅನ್ನಭಾಗ್ಯ ಯೋಜನೆ ಜಾರಿಗೆ ತಂದು ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಹಾಗೂ ಲ್ಯಾಪ್‌ ಟ್ಯಾಪ್‌ ಆರೋಗ್ಯಭಾಗ್ಯ,ಇಂದಿರಾ ಕ್ಯಾಂಟಿನ ಮೂಲಕ ಜನರ ಹಸಿವನ್ನು ನೀಗಿಸಿದ್ದಾರೆ ಎಂದು ರಾಜ್ಯ ಮಹಿಳಾ ಕೆಪಿಸಿಸಿ ಕಾರ್ಯದರ್ಶಿ ಕಮಲಮ್ಮಾ ಮರಿಸ್ವಾಮಿ ಮನವಿ ಮಾಡಿದರು.

Advertisement

ತಾಲೂಕಿನ ಚೋಳಚಗುಡ್ಡ, ನಸಿಬಿ, ಬೇಲೂರು ಗ್ರಾಮದಲ್ಲಿ ಡಾ.ದೇವರಾಜ ಪಾಟೀಲ ಅವರ ನೇತೃತ್ವದಲ್ಲಿ ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತರೊಂದಿಗೆ ಸಿ.ಎಂ ಸಿದ್ದರಾಮಯ್ಯ ಅವರ ಪರ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಚಾರಕ್ಕೆ ಚಾಲನೆ ನೀಡಿದರು.

ನಂತರ ಡಾ.ಭಾಗ್ಯಲಕ್ಷ್ಮಿ ದೇವರಾಜ ಪಾಟೀಲ ಮಾತನಾಡಿ, ಸಿದ್ದರಾಮಯ್ಯನವರು ಬಡವರಿಗೆ ನೀಡಿದ ಯೋಜನೆಗಳನ್ನು ಪ್ರತಿ ಮನೆ ಮನೆಗೆ ತಿಳಿಸುವ ಮೂಲಕ ಕಾಂಗ್ರೆಸ್‌ ಮಾಡಿದ ಯೋಜನೆಗಳನ್ನು ಮೆಚ್ಚಿ ಪುನಃ ಸಿ.ಎಂ.ಸಿದ್ದರಾಮಯ್ಯನವರನ್ನು ಆಯ್ಕೆ ಮಾಡಬೇಕು ಎಂದು ತಿಳಿಸಿದರು.

ಎಲ್ಲರೂ ಗ್ರಾಮದ ಪ್ರತಿ ಮನೆ ಮನೆಗೆ ತೆರಳಿ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿ ಆಯ್ಕೆ ಮಾಡಬೇಕು ಮನವಿ ಮಾಡಿದರು. ಗ್ರಾಪಂ ಅಧ್ಯಕ್ಷೆ ಮಂಜುಳಾ ಜಾಲಿಕಟ್ಟಿ, ಮಕ್ತುಂಬಿ ನದಾಫ್‌, ಗ್ರಾಪಂ ಸದಸ್ಯರಾದ ಲಕ್ಷ್ಮಿ ಹೊಸಮನಿ, ಮೇನಕಾ, ಬಿಮ್ಮವ್ವಾ, ಶಾಂತವ್ವಾ ಹಾಗೂ ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತರು ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next