Advertisement

ಇನ್ನೂ ಈಡೇರದ ಸದನದ ನಿಷೇಧಾಜ್ಞೆ ಭರವಸೆ

02:56 PM Oct 04, 2018 | |

ಮಂಡ್ಯ: ಕೆಆರ್‌ಎಸ್‌ ಸುತ್ತ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಅಣೆಕಟ್ಟೆಗೆ ಕಂಟಕವಿರುವುದನ್ನು
ಮನಗಂಡಿದ್ದ ಕೆ.ಎಸ್‌. ಪುಟ್ಟಣ್ಣಯ್ಯ ಐದು ವರ್ಷಗಳ ಹಿಂದೆಯೇ ವಿಧಾನಸಭಾ ಅಧಿವೇಶನ ದಲ್ಲೇ ಪ್ರಬಲವಾದ ದನಿ ಎತ್ತಿದ್ದರು.

Advertisement

2013ರ ಡಿಸೆಂಬರ್‌ 5 ರಂದು ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಕಲ್ಲುಪುಡಿ ಘಟಕಗಳ ನಿಯಂತ್ರಣ ತಿದ್ದುಪಡಿ ವಿಧೇಯಕ ಕುರಿತ ಚರ್ಚೆ ವೇಳೆ ಕೆಆರ್‌ಎಸ್‌ ಅಣೆಕಟ್ಟೆಗೆ ಕಲ್ಲು ಗಣಿಗಾರಿಕೆಯಿಂದ ಅಪಾಯ ಎದುರಾಗಿರುವ ಬಗ್ಗೆ ಗಮನ ಸೆಳೆದಿದ್ದರು. ಗಣಿಗಾರಿಕೆ ಹಾಗೂ ಜಲ್ಲಿಪುಡಿ ಘಟಕಗಳ ಮೇಲೆ ನಿಯಂತ್ರಣ ಹೇರುವಂತೆಯೂ ಒತ್ತಾಯಿಸಿದ್ದರು. 

ಭರವಸೆ ನೀಡಿದ್ದರು: ಶಾಸಕ ಪುಟ್ಟಣ್ಣಯ್ಯನವರು ನೀಡಿದ ಸಲಹೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು, ಕೆಆರ್‌ಎಸ್‌ ಸುತ್ತಲಿನ ಪ್ರದೇಶದಲ್ಲಿ ವ್ಯಾಪಕ ಕಲ್ಲು ಕ್ವಾರಿಗಳು ತಲೆಎತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿಷೇಧ ಹೇರಲಾಗುವುದು.

ಕೆಆರ್‌ಎಸ್‌ ಸುತ್ತ 5 ಕಿ.ಮೀ. ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ಸೇರಿದಂತೆ ಎಲ್ಲ ರೀತಿಯ ಗಣಿ ಚಟುವಟಿಕೆಗಳ ಮೇಲೆ ನಿಷೇಧ ಹೇರುವುದಾಗಿ ತಿಳಿಸಿದ್ದರು. ಅಗತ್ಯಬಿದ್ದರೆ ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ 10 ಕಿಮೀಗೆ ನಿಷೇಧಿತ ಪ್ರದೇಶ ವಿಸ್ತರಿಸಲು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ್ದರು.

ಜಲ್ಲಿ ಕ್ರಷರ್‌ಗಳ ವಿಧೇಯಕದಲ್ಲಿ ಅಣೆಕಟ್ಟೆಗಳ ಪ್ರದೇಶದ ಉಲ್ಲೆಖವೇ ಇಲ್ಲ. ಇದರಿಂದ ಕೆಆರ್‌ಎಸ್‌ ಸುತ್ತ ನಡೆಯುತ್ತಿರುವ ಗಣಿಗಾರಿಕೆ ನಿಷೇಧಿಸಲು ಸಾಧ್ಯವಾಗುವುದಿಲ್ಲ. ಸುರಕ್ಷಿತ ವಲಯದ ವ್ಯಾಖ್ಯಾನದಲ್ಲಿ ಅಣೆಕಟ್ಟೆಗಳನ್ನು ಸೇರಿಸುವಂತೆಯೂ ಸಲಹೆ ನೀಡಿದ್ದರು.
 
ಆನಂತರದಲ್ಲಿ ಕೆಆರ್‌ಎಸ್‌ ಸುತ್ತ ಕನಿಷ್ಠ 5 ಕಿ.ಮೀ. ವ್ಯಾಪ್ತಿಯಲ್ಲೂ ನಿಷೇಧಾಜ್ಞೆ ಜಾರಿ ಆದೇಶ ಸರ್ಕಾರದಿಂದ ಹೊರಬೀಳಲೇ ಇಲ್ಲ. ರಾಷ್ಟ್ರೀಯ ನೈಸರ್ಗಿಕ ವಿಕೋಪ ಕೇಂದ್ರದ ನೀಡಿದ ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ
ಅಪಾಯವಿರುವ ಬಗ್ಗೆ ವರದಿಯನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ.

Advertisement

ಕೆಆರ್‌ಎಸ್‌ ಸುತ್ತ ಗಣಿಗಾರಿಕೆ ನಿಷೇಧಕ್ಕೆ ಐದು ತಿಂಗಳ ಹಿಂದೆ ಜಿಲ್ಲಾಧಿಕಾರಿ ಕಳುಹಿಸಿರುವ ಪ್ರಸ್ತಾವನೆಗೂ ಕ್ಯಾರೆ ಎನ್ನುತ್ತಿಲ್ಲ.  

Advertisement

Udayavani is now on Telegram. Click here to join our channel and stay updated with the latest news.

Next