Advertisement
ಪೂರ್ವದ ಜಾಗೆಯೂ, ಜಮೀನೋ ಆದರೆ ಖರೀದಿಯ ಮೂಲಕ ವಿಸ್ತರಿಸಿಕೊಳ್ಳಬಹುದು. ಎಷ್ಟು ಬೇಕಾದರೂ ಕೊಂಡುಕೊಳ್ಳಬಹುದು. ಇಂಥ ಖರೀದಿಯಿಂದ ಸಂವರ್ಧನೆಗೆ ಅವಕಾಶ ಉತ್ತಮ. ಹೀಗೆ ಕೊಂಡು ಕೊಳ್ಳುವಾಗ ಖರೀದಿಸುವವನ ಮನೆಗೆ ಪೂರ್ವ ದಿಕ್ಕಿನ ಭಾಗದ ಮುಂಬಾಗಿಲು ಆಗಿದ್ದರೆ, ಇಂಥ ಮನೆಗೆ ಉತ್ತರದಲ್ಲಿರುವ ಜಾಗವನ್ನು ಮತ್ತೆ ಪರಿಶೀಲಿಸಬೇಕು. ಏಕೆಂದರೆ, ಖರೀದಿ ಮಾಡುತ್ತಿರುವ ಜಾಗ ಖರೀದಿದಾರನ ಮನೆಯ ಸಮತಟ್ಟಿಗಿಂತ ಎತ್ತರವಾಗಿದ್ದರೆ ಖರೀದಿ ನಿಷಿದ್ಧವಾಗಿರುತ್ತದೆ.
ಮುಖ್ಯವಾಗಿ ಕೊಂಡು ಕೊಳ್ಳುವ ಖರೀದಿಗಾರನ ಮನೆಯ ಈಶಾನ್ಯದ ಭಾಗ ಹಿಗ್ಗುವ ಹಾಗೆ ಜಾಗದ ಖರೀದಿಗೆ ಅವಕಾಶ ನೀಡಬೇಕು. ಹಾಗಿಲ್ಲದೇ ಹೋದರೆ ಒಳ್ಳೆಯ ದಿನಗಳನ್ನು ಕಾಣುವಂತೆ ವರ್ತಮಾನ ಉತ್ಕರ್ಷವನ್ನು ಪಡೆಯದು. ಪೂರ್ವದ ಭಾಗ ಖರೀದಿಸುವಾಗಲೂ ಖರೀದಿ ಮಾಡುವವನ ಮನೆಗಿಂತಲೂ ಖರೀದಿಗೊಳಪಡುವ ಜಾಗ ಎತ್ತರದಲ್ಲಿ ಇರಲೇಕೂಡದು. ಹೀಗೆ ಕೊಳ್ಳುವ ಪೂರ್ವದ ಜಾಗ ಖರೀದಿಸುವವನ ಮನೆಯ ಈಶಾನ್ಯದ ಕೊನೆಯ ತನಕವೂ ಹರಡಿಕೊಂಡಿರಬೇಕು. ಇಲ್ಲದಿದ್ದರೆ ಕಷ್ಟವೇ. ಖರೀದಿಯ ಸಂದರ್ಭದಲ್ಲಿ ಕೊಡಲ್ಪಡುವ ಜಾಗ ಸಂತೋಷದಿಂದ ನೀಡುವಂತಿದ್ದರೆ ಉತ್ತಮವಾದದ್ದು. ಯಾವ ಸಂದರ್ಭದಲ್ಲೂ ಮುನಿಸಿಗೆ, ಅಸಮಾಧಾನಗಳಿಗೆ ಅವಕಾಶ ಒದಗಿ ಬರಲೇಕೂಡದು. ಖರೀದಿ ಮಾಡಲ್ಪಟ್ಟ ಜಾಗ ಉಪಯೋಗಕ್ಕೆ ಕೂಡಲೇ ಸಿಗುವಂತೆ ಕಟ್ಟಡಗಳು ಎದ್ದೇಳುವುದಾದರೆ ಉತ್ತಮ. ಇಲ್ಲದಿದ್ದರೆ ಕೊಂಡವನ ಜಾಗೆಗೆ ಖರೀದಿಸಲ್ಪಟ್ಟ ಜಾಗ ಸೇರಿಕೊಂಡಾಗ ಅಖಂಡವಾಗಿ ಒಂದೇ ಆಗಿದ್ದು ಬಹಳ ಕಾಲ ಕೊಂಡವನ ಮೂಲ ಮನೆಗಿಂತ ಖರೀದಿಸಲ್ಪಟ್ಟ ಜಾಗ ತಗ್ಗಿನಲ್ಲೇ ಇರುವಂತಾಗಬಾರದು.
Related Articles
Advertisement
ಖಾಲಿಯಾಗಿರುವ ಬಾಡಿಗೆಗೆ ಇಟ್ಟ ಜಾಗ ಬಹಳ ಕಾಲ ಖಾಲಿ ಇದ್ದರೆ, ಖಾಲಿಯಾದ ಆ ಜಾಗದ ಭಾರ ಮಾಲೀಕನ ನಿವೇಶನ/ ಮನೆಯ ಮೇಲೆ ಬಿದ್ದು ಕುಸಿತದ ಸೂಚನೆ ಕಂಡಬರಲು ಸಾಧ್ಯ. ಒಟ್ಟಿನಲ್ಲಿ ಇರುವ ಮನೆಯ ಅಕ್ಕಪಕ್ಕದಲ್ಲಿ ಜಾಗ ಕಡಿಮೆ ಹಣಕ್ಕೆ ಸಿಗುತ್ತದೆ ಎಂದ ಮಾತ್ರಕ್ಕೆ ಖರೀದಿಸಿಡಬಾರದು. ಖರೀದಿಗೂ, ವಿಲೇವಾರಿಗೂ, ಸಾಧಕ ಬಾಧಕಗಳಿಂದ ನಿಯಂತ್ರಿಸಲೂ, ತನ್ನದೇ ಆದ ನಿಯಮಗಳಿವೆ. ಎಚ್ಚರ ಇರಲಿ.
* ಅನಂತಶಾಸ್ತ್ರಿ