Advertisement

ಬಿಸಿಗಾಳಿಯ ಪ್ರಯೋಗ

10:47 AM Sep 28, 2017 | |

ತಾಪಮಾನದಲ್ಲಿ ಬದಲಾವಣೆಯಾಗುತ್ತಿದ್ದಂತೆ ಗಾಳಿ ವಿಚಿತ್ರವಾಗಿ ವರ್ತಿಸಲಾರಂಭಿಸುತ್ತದೆ. ಗಾಳಿಯ ಗುಣಸ್ವಭಾವವನ್ನು ಅರಿಯಲು ಈ ಪ್ರಯೋಗ ಸಹಕಾರಿ.  
ಬೇಕಾಗುವ ವಸ್ತುಗಳು: ಖಾಲಿ ಬಾಟಲಿ, ಬಲೂನ್‌, ದೊಡ್ಡ ಪಾತ್ರೆಯಲ್ಲಿ ಬಿಸಿ ನೀರು

Advertisement

ಮಾಡುವ ವಿಧಾನ: 
1. ಬಲೂನ್‌ ಅನ್ನು ಕೈಗೆತ್ತಿಕೊಂಡು, ಗಾಳಿ ಊದುವ ಭಾಗವನ್ನು ಖಾಲಿ ಬಾಟಲಿಯ ಬಾಯಿಗೆ ತೂರಿಸಿ ಬಿಗಿಯಾಗಿ ಕಟ್ಟಿ. ಬಾಟಲಿಯ ಬಾಯಿ ಪೂರ್ತಿಯಾಗಿ ಮುಚ್ಚುವಂತೆ ಕಟ್ಟಿರಿ.

2. ಈಗ ಬಾಟಲಿಯನ್ನು ಬಿಸಿನೀರಿನ ಪಾತ್ರೆಯೊಳಕ್ಕೆ ಹಾಕಿ. ನಾಲ್ಕೈದು ನಿಮಿಷಗಳ ಕಾಲ ಬಾಟಲಿ ಬಿಸಿ ನೀರಲ್ಲೇ ಇರಲಿ. ಆವಾಗ ಏನಾಗುತ್ತೆ ನೋಡಿ.

ಬಾಟಲಿಯನ್ನು ಬಿಸಿನೀರಿಗೆ ಹಾಕಿದಾಗ, ಒಳಗಿದ್ದ ಗಾಳಿಯ ತಾಪಮಾನ ಏರಿಕೆಯಾಗುತ್ತದೆ. ಅಂದರೆ ಗಾಳಿ ಬಿಸಿಯಾಗತೊಡಗುತ್ತದೆ. ಅದರ ಪರಿಣಾಮವಾಗಿ ಬಲೂನಿನಲ್ಲಿ ಗಾಳಿ ತುಂಬತೊಡಗಿ ಬಲೂನು ಹಿಗ್ಗತೊಡಗುತ್ತದೆ. 

ಇದಕ್ಕೆ ಕಾರಣ?
ಗಾಳಿಯ ಗುಣವೆಂದರೆ, ಬಿಸಿಯೊಗತೊಡಗಿದಂತೆ ಹಿಗ್ಗತೊಡಗುತ್ತದೆ. ಬಿಸಿ ಗಾಳಿಗೂ ತಣ್ಣನೆಯ ಗಾಳಿಗೂ ಒಂದು ಮುಖ್ಯ ವ್ಯತ್ಯಾಸವೆಂದರೆ ಹಿಗ್ಗುವಿಕೆಯಿಂದಾಗಿ ಬಿಸಿ ಗಾಳಿ ತಂಪು ಗಾಳಿಗಿಂತ ಹೆಚ್ಚಿನ ಜಾಗವನ್ನು ಆಕ್ರಮಿಸಿಕೊಳ್ಳುತ್ತದೆ. ಇದರಿಂದಾಗಿ ಬಲೂನಿನೊಳಕ್ಕೆ ಗಾಳಿ ನುಗ್ಗಿ ಬಲೂನು ಹಿಗ್ಗತೊಡಗುತ್ತದೆ. 

Advertisement

ಇನ್ನೊಂದು ಕುತೂಹಲಕಾರಿ ಮಾಹಿತಿಯೆಂದರೆ ಬಿಸಿ ಗಾಳಿ, ತಂಪು ಗಾಳಿಗಿಂತ ಹಗುರವಾಗಿರುತ್ತದೆ. ಇದೇ ಕಾರಣಕ್ಕೆ ಪರ್ಯಟನೆ ಮಾಡುವ ಬಲೂನಿನಲ್ಲಿ ಬಿಸಿಗಾಳಿಯನ್ನೇ ಬಳಸುತ್ತಾರೆ. ಅದರಿಂದಲೇ ಅವುಗಳ ಹೆಸರು ಹಾಟ್‌ ಏರ್‌ ಬಲೂನು ಎಂದಾಗಿರುವುದು. 

* ಪೂಜಾ

Advertisement

Udayavani is now on Telegram. Click here to join our channel and stay updated with the latest news.

Next