Advertisement
ವಿಜಯನಗರದ ಹಂಪಿನಗರ ಬಡಾವಣೆಯಲ್ಲಿರುವ ಹೋಲಿ ಏಂಜಲ್ಸ್ ಶಾಲೆ, ಕಳೆದ ಮೂರು ದಶಕಗಳಿಂದ ಶೈಕ್ಷಣಿಕ ಕ್ಷೇತ್ರಕ್ಕೆ ತನ್ನದೇ ಆದ ಕೂಡುಗೆ ನೀಡುತ್ತಾ, ಪೋಷಕರ ನಂಬಿಕೆಯನ್ನು ಉಳಿಸಿಕೊಂಡು ಬಂದಿದೆ. ಹೀಗಾಗಿ, ವಿದ್ಯಾರ್ಥಿಗಳ ಹಾಗೂ ಪೋಷಕರ ಅಚ್ಚುಮೆಚ್ಚಿನ ಶಿಕ್ಷಣ ಕೇಂದ್ರವಾಗಿ ಮನೆ ಮಾತಾಗಿದೆ.
Related Articles
Advertisement
ಸಂಸ್ಥೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿರುವ ಪುರುಷೋತ್ತಮ್ ಅವರಿಗೆ ಪತ್ನಿ ಹಾಗೂ ಶಾಲೆಯ ಕಾರ್ಯದರ್ಶಿಯಾಗಿರುವ ಪಾರ್ವತಿ ಪುರುಷೋತ್ತಮ್, ಅವರ ಪ್ರೋತ್ಸಾಹ ಕೂಡ ಇದೆ. ಇದರೊಂದಿಗೆ ಶಾಲೆ ಪ್ರಾಂಶುಪಾಲರಾಗಿರುವ ಪಿ.ಲೋಕೇಶ್ ಹಾಗೂ ನಿರ್ದೇಶಕರಾದ ಪಿ.ಚಂದ್ರಮೋಹನ್ ಅವರ ಕೂಡುಗೆಯನ್ನು ಕೂಡ ಮೆರೆಯುವಂತಿಲ್ಲ.
ಪೋಷಕರ ಸಲಹೆಗೆ ಮನ್ನಣೆ: ಸಂಸ್ಥೆಯ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳ ಪೋಷಕರ ನಡುವಿನ ಒಡನಾಟ ಈ ಸಂಸ್ಥೆಯ ಪ್ರಗತಿಗೆ ದಾರಿ ದೀಪದಂತಿದೆ. ಹೀಗಾಗಿ ನಗರದಲ್ಲಿರುವ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗಿಂತಲೂ ಹೋಲಿ ಏಂಜಲ್ಸ್ ವಿಭಿನ್ನ ಎಂದು ಮೆಚ್ಚುಗೆಗೆ ಪಾತ್ರವಾಗಿದೆ. ಪೋಷಕರ ಸಲಹೆ ಸೂಚನೆಗಳಿಗೂ ಇಲ್ಲಿ ಸೂಕ್ತ ಮನ್ನಣೆ ನೀಡುವ ಶಾಲೆ ಆಡಳಿತ ಮಂಡಳಿ, ಆ ಸಲಹೆಗಳನ್ನು ಅಳವಡಿಸಿಕೊಳ್ಳುತ್ತದೆ.
ಶಾಲೆಯಲ್ಲಿ ಕಲಿಯುತ್ತಿರುವ ಪ್ರತಿ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯನ್ನು ಪೋಷಕರ ಗಮನಕ್ಕೆ ತರುವ ಪದ್ಧತಿ ಇಲ್ಲಿದೆ. ಈ ವ್ಯವಸ್ಥೆಯು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದ ಸುಧಾರಣೆಗೆ ನೆರವಾಗಿದೆ. ಈ ವ್ಯವಸ್ಥೆ ಜಾರಿಯಿಂದಾಗಿ ಶಾಲೆಯ ಪ್ರಾಂಶುಪಾಲರು ಮತ್ತು ಪೋಷಕರ ನಡುವೆ ಉತ್ತಮ ಬಾಂಧವ್ಯ ಸೃಷ್ಟಿಯಾಗಿದೆ.
ಇಲ್ಲಿ ಶೈಕ್ಷಣಿಕ ಚಿಂತನೆ ಜತೆಗೆ ಸಾಮಾಜಿಕ, ಸಂಸ್ಕೃತಿಕ ಚಿಂತನೆಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತಲಾಗುತ್ತಿದೆ. ಈ ಕಾರಣದಿಂದಾಗಿ ಹೋಲಿ ಏಂಜಲ್ಸ್ ಶಿಕ್ಷಣ ಸಂಸ್ಥೆ ಉತ್ತುಂಗದ ಹಾದಿಯಲ್ಲಿ ಸಾಗಿದೆ. ಶಾಲೆಯ ಮುಖ್ಯಶಿಕ್ಷಕಿ ಸಿ.ರಾಧಿಕಾ ಅವರು ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತಾ, ಆಗಾಗ ಸಲಹೆ ಸೂಚನೆಗಳನ್ನು ನೀಡುತ್ತಿದ್ದು, ಇದು ಶಿಕ್ಷಕರಲ್ಲಿ ಉತ್ತಮ ಬೋಧನೆಗೆ ಸಹಕಾರಿಯಾಗಿದೆ. ಅಲ್ಲದೆ, ವಿದ್ಯಾರ್ಥಿಗಳಲ್ಲಿ ಶಿಸ್ತಿನ ಜತೆಗೆ ನಿರಂತರ ಅಧ್ಯಯನಕ್ಕೆ ಕಾರಣವಾಗಿದೆ.
ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು: ಶಿಕ್ಷಣ ಚುಟುವಟಿಕೆಗಳ ಜತೆಗೆ ಇಲ್ಲಿ ಕ್ರೀಡೆ, ಸಂಸ್ಕೃತಿಕ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರತಿ ವರ್ಷ ವಿದ್ಯಾರ್ಥಿಗಳಿಗಾಗಿ ಕ್ರೀಡೋತ್ಸವ ಆಯೋಜಿಸಲಾಗುತ್ತಿದ್ದು, ಈ ಮೂಲಕ ಶಾಲಾ ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವನೆ ಬೆಳೆಸುವ ಕೆಲಸ ಕೂಡ ಶಾಲೆಯಲ್ಲಿ ನಡೆದಿದೆ. ದೈಹಿಕ ಶಕ್ತಿ ವೃದ್ಧಿಸುವ ಈ ಕ್ರಮ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರವಾಗಿದ್ದು, ಪೋಷಕರ ಮೆಚ್ಚುಗೆ ಗಳಿಸಿದೆ.
ಎನ್‌ಸಿಸಿಗೂ ಆದ್ಯತೆ: ಹೋಲಿ ಏಂಜಲ್ಸ್ ಶಾಲಾ ಆಡಳಿತ ಮಂಡಳಿ, ಶಾಲೆಯಲ್ಲಿ ಎನ್‌ಸಿಸಿಗೆ ಹೆಚ್ಚು ಒತ್ತು ನೀಡಿದೆ. ಶಾಲೆಯ ಎನ್‌ಸಿಸಿ ವಿಭಾಗದಲ್ಲಿ ಸಕ್ರಿಯರಾಗಿರುವ ಹಲವು ವಿದ್ಯಾರ್ಥಿಗಳು, ವಿವಿಧ ಕ್ಯಾಂಪ್‌ಗ್ಳಲ್ಲಿ ಭಾಗವಹಿಸಿ ಸಾಧನೆ ತೋರಿದ್ದಾರೆ. ಅನೇಕ ಪ್ರಶಸ್ತಿಗಳನ್ನು ಗೆದ್ದು ಶಾಲೆಗೂ ಕೀರ್ತಿ ತಂದಿದ್ದಾರೆ. ಪರಿಸರ ಸಂರಕ್ಷಣೆ, ರಸ್ತೆ ಸುರಕ್ಷತಾ ಸಪ್ತಾಹ ಮಾತ್ರವಲ್ಲದೆ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸಿ ಶಾಲೆಗೆ ಹೆಸರು ತಂದಿದ್ದಾರೆ.
ಅತ್ಯುತ್ತಮ ಸಾಧನೆ: ನುರಿತ ಶಿಕ್ಷಕ ವರ್ಗ ಈ ಶಾಲೆಯಲ್ಲಿದೆ. ಇದು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಪ್ರಾಂಶುಪಾಲರ ವ್ಯವಸ್ಥಿತ ಶಿಕ್ಷಣ ಕಾರ್ಯಚಟುವಟಿಕೆಗಳು, ಜತೆಗೆ ಮುಖ್ಯ ಶಿಕ್ಷಕರ ಮಾರ್ಗದರ್ಶನ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಬಲ ನೀಡಿದೆ.
ಈ ಹಿನ್ನೆಲೆಯಲ್ಲಿ ಪ್ರಾರಂಭಿಕ ವರ್ಷದಿಂದಲೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮತ್ತು ಐಸಿಎಸ್‌ಇ ಪಠ್ಯ ಕ್ರಮದಲ್ಲಿ ಹೋಲಿ ಏಂಜಲ್ಸ್ ಶಾಲಾ ವಿದ್ಯಾರ್ಥಿಗಳು ಶೇ.100ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಫಲಿತಾಂಶದಲ್ಲಿ ಸಾಕಷ್ಟು ಪ್ರಗತಿ ಕಂಡಿದ್ದು, ಅನೇಕ ವಿದ್ಯಾರ್ಥಿಗಳು ಶೇ.98.40 ಅಂಕಗಳನ್ನು ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಗುಣ ಮಟ್ಟದ ಶಿಕ್ಷಣದ ಜತೆಗೆ ಪ್ರತಿಭಾವಂತ ರಾಷ್ಟ್ರಕ್ಕೆ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ನೀಡಬೇಕು ಎಂಬುದು ಹೋಲಿ ಏಂಜಲ್ಸ್ ಸಂಸ್ಥೆಯ ಆಶಯವಾಗಿದೆ. ಪ್ರತಿ ವರ್ಷ ಉತ್ತಮ ಫಲಿತಾಂಶ ಬರುತ್ತಿದ್ದು, ಈ ಮೂಲಕ ಸಂಸ್ಥೆ ರಾಷ್ಟ್ರಮಟದಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ.-ಪಿ.ಲೋಕೇಶ್, ಹೋಲಿ ಏಂಜಲ್ಸ್ ಸಂಸ್ಥೆ ಪ್ರಾಂಶುಪಾಲರು