ಬೆಂಗಳೂರು : ಅಂತರರಾಷ್ಟ್ರೀಯ ಮಟ್ಟದಲ್ಲಿ ಹಿಜಾಬ್ ವಿವಾದದಂತವುಗಳ ಬಗ್ಗೆ ಮೊದಲು ಚರ್ಚೆಯಾಗುತ್ತದೆ, ಆಮೇಲೆ ಲೋಕಲ್ ಗೆ ಬರುತ್ತದೆ ಬಿಡಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಗುರುವಾರ ಹೇಳಿಕೆ ನೀಡಿದ್ದಾರೆ.
ವಿಧಾನಸೌಧದ ಆವರಣದಲ್ಲಿ ಕೆಂಗಲ್ ಹನುಮಂತಯ್ಯ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಣೆ ಮಾಡಿದ ಬಳಿಕ ಮಾತನಾಡಿ, ಕೆಂಗಲ್ ಅವರು ಈ ನಾಡನ್ನು ಒಗ್ಗೂಡಿಸಿರುವ ಹಿರಿಯ ಚೇತನ, ಅವರ ತ್ಯಾಗದಿಂದ ಕರ್ನಾಟಕ ಒಂದಾಗಿದೆ. ದೂರದೃಷ್ಟಿಯ ವಿಷನ್ ಕೊಟ್ಟ ಪುಣ್ಯಾತ್ಮ. ಕೆಂಗಲ್ ಅವರ ಪ್ರತಿಮೆಯನ್ನು ಅವರ ಊರಲ್ಲಿ ಈ ವರ್ಷವೇ ನಿರ್ಮಿಸ್ತೇವೆ. ಕನ್ನಡಿಗರ ಹೃದಯ ಬೆಸೆಯುವ ಕೆಲಸ ಮಾಡಿರುವ ಮಹಾನ್ ಚೇತನ ಎಂದರು.
ಇದನ್ನೂ ಓದಿ : ಹಿಜಾಬ್ ವಿವಾದ: ಭಾರತೀಯ ಚಾರ್ಜ್ ಡಿ’ಅಫೇರ್‌ಗಳಿಗೆ ಸಮನ್ಸ್ ನೀಡಿದ ಪಾಕಿಸ್ಥಾನ!
ಶಾಂತಿ ಸುವ್ಯವಸ್ಥೆಯನ್ನ ಕಾಪಾಡುವುದು ಎಲ್ಲರ ಕರ್ತವ್ಯ.ಇದರ ಬಗ್ಗೆ ಬೆಳಗ್ಗೆಯೂ ಹೇಳಿದ್ದೇನೆ. ಮಕ್ಕಳಲ್ಲಿ ಗೊಂದಲ ಸೃಷ್ಟಿಸುವುದು ಬೇಡ ಹೊರಗಡೆಯಿಂದ ಕೆಲವರು ಪ್ರಚೋದನೆ ಮಾಡುವ ಕೆಲಸ ಆಗಬಾರದು. ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಸ್ವಯಂ ನಿಯಂತ್ರಿತ ಮಾಡಬೇಕು. ಕೋರ್ಟ್ ಗೂ ಕೂಡ ನ್ಯಾಯ ಕೊಡೋಕೆ ಶಾಂತಿಯುತ ವಾತವರಣ ನಿರ್ಮಾಣ ಮಾಡಬೇಕು. ಅವಾಗ ನ್ಯಾಯ ಕೊಡೋಕೆ ಸಾಧ್ಯವಾಗುತ್ತೆ
ಕಾನೂನು ಸುವ್ಯವಸ್ಥೆಯನ್ನ ಎಲ್ಲರೂ ಪಾಲನೆಮಾಡಬೇಕು ಎಂದರು.