Advertisement
ಪ್ರೊಫೆಸರ್ ಆಫ್ ಪ್ರ್ಯಾಕ್ಟೀಸ್‌ಗೆ ಅರ್ಹರು ಯಾರು?:
Related Articles
Advertisement
ಹೊಸ ವ್ಯವಸ್ಥೆಯಲ್ಲಿ ನೇಮಕ ಹೇಗೆ? :
ವಿವಿಗಳ ವ್ಯಾಪ್ತಿಗಳಲ್ಲಿ ಕುಲಪತಿಗಳು, ಇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇಂಥ ನೇಮಕ ಮಾಡಲು ಕಾನೂನು ಬದ್ಧ ಅಧಿಕಾರ ಇರುವವರು ಆಯಾ ಕ್ಷೇತ್ರದ ಪರಿಣತರ ನೇಮಕಕ್ಕೆ ನಾಮ ನಿರ್ದೇಶನ ಮಾಡುವ ಮೂಲಕ ಕ್ರಮ ಕೈಗೊಳ್ಳುತ್ತಾರೆ. ಆಯಾ ಸಂಸ್ಥೆಗೆ ಮಂಜೂ ರಾಗಿರುವ ಒಟ್ಟು ಬೋಧಕ ಸಿಬಂದಿಯ ಶೇ.10ಕ್ಕಿಂತ ಇಂಥ ನಾಮ ನಿರ್ದೇಶನದ ಮೂಲಕ ಮಾಡುವ ನೇಮಕಗಳು ಮೀರುವಂತೆ ಇಲ್ಲ. ಆಸಕ್ತರು ತಮ್ಮ ಸ್ವವಿವರವನ್ನು ಉನ್ನತ ಶಿಕ್ಷಣ ಸಂಸ್ಥೆಗೆ ಕಳುಹಿಸಿಕೊಡಬೇಕು. ಇಬ್ಬರು ಸದಸ್ಯರು ಇರುವ ಉನ್ನತ ಸಮಿತಿ ಅವುಗ ಳನ್ನು ಪರಿಶೀಲಿಸಿ ಶಿಫಾರಸು ಮಾಡುತ್ತದೆ.
ಸಾಂಪ್ರದಾಯಿಕ ಶಿಕ್ಷಣ ಕಡ್ಡಾಯ ಅಲ್ಲ :
ವಿವಿಗಳಲ್ಲಿ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರೊಫೆಸರ್‌ಗಳಾಗಿ ಕೆಲಸ ಮಾಡಲು ಆಯಾ ವಿಷಯದಲ್ಲಿ ಸ್ನಾತಕೋತ್ತರ ಪದವಿ, ನ್ಯಾಶನಲ್ ಎಲಿಜಿಬಿಲಿಟಿ ಟೆಸ್ಟ್‌ನಲ್ಲಿ ಉತ್ತೀರ್ಣ, ಪಿಎಚ್.ಡಿ. ಪದವಿ, ಅದಕ್ಕಿಂತ ಹೆಚ್ಚಿನ ಅಧ್ಯಯನ ಬೇಕಾಗುತ್ತದೆ. ಯುಜಿಸಿ ಪರಿಚಯಿಸಲು ಮುಂದಾಗಿರುವ ಹೊಸ ವ್ಯವಸ್ಥೆಯಲ್ಲಿ ಸಾಂಪ್ರದಾಯಿಕ ಶಿಕ್ಷಣ ಎನ್ನುವುದು ಕಡ್ಡಾಯವಲ್ಲ. ನಿಗದಿತ ಕ್ಷೇತ್ರದಲ್ಲಿ ಆತ ಅಪರಿಮಿತವಾಗಿರುವ ಜ್ಞಾನ ಮತ್ತು ಪ್ರಾಯೋಗಿಕವಾಗಿ ಅದನ್ನು ಅನುಷ್ಠಾನಗೊಳಿಸಲು ಪರಿಣತಿ ಹೊಂದಿದ್ದರೆ ಸಾಂಪ್ರದಾಯಿಕ ಶಿಕ್ಷಣದ ಅಗತ್ಯವಿಲ್ಲ.
ಸಂಶೋಧನ ಪ್ರಬಂಧ ಪ್ರಕಟಿಸಬೇಕಾಗಿಲ್ಲ :
ಹಾಲಿ ಇರುವ ನಿಯಮಗಳ ಪ್ರಕಾರ ಅಂತಿಮ ಹಂತ ದಲ್ಲಿ ಪ್ರಕಟಿಸಬೇಕಾಗಿರುವ ಪಿಎಚ್.ಡಿ. ಪ್ರಬಂಧವನ್ನು ಕನಿಷ್ಠ 2 ನಿಯತಕಾಲಿಕಗಳಲ್ಲಿ ಪ್ರಕಟಿಸಬೇಕಾಗಿತ್ತು. ಆದರೆ ಈ ನಿಯಮ ಈಗ ರದ್ದಾಗಿದೆ. ಹಲವಾರು ನಿಯತಕಾಲಿಕಗಳಲ್ಲಿ ಸಂಶೋಧನ ಪ್ರಬಂಧಗಳು ಪ್ರಕಟಗೊಂಡರೆ ನಿಗದಿತ ಶುಲ್ಕವನ್ನೂ ಪಾವತಿ ಮಾಡುತ್ತವೆ. 2019ರಲ್ಲಿ ಯುಜಿಸಿ ಸಮಿತಿ ಮಾಡಿದ ನಿಯಮದಂತೆ ಅಂಥ ನಿಯತಕಾಲಿ ಕಗಳಲ್ಲಿ ಪ್ರಕಟಗೊಂಡ ಪ್ರಬಂಧಗಳನ್ನು ಶೈಕ್ಷಣಿಕವಾಗಿ ಅರ್ಹತೆ ಪಡೆಯಲು ಪರಿಗಣಿಸಬಾರದು ಎಂದಿತ್ತು.
ಪಿಎಚ್.ಡಿ.ಗೆ ಪ್ರವೇಶ ಹೇಗೆ?:
ಹೊಸ ವ್ಯವಸ್ಥೆಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗಿಲ್ಲ. ವಿವಿಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಎನ್‌ಇಟಿ ಅಥವಾ ಜೆಆರ್‌ಎಫ್ (ಜ್ಯೂನಿಯರ್ ರಿಸರ್ಚ್ ಫೆಲೋ), ಆಯಾ ಶಿಕ್ಷಣ ಸಂಸ್ಥೆಗಳು ನಡೆಸುವ ಪ್ರವೇಶ ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಪ್ರವೇಶ ಪರೀಕ್ಷೆಯ ಪಠ್ಯಕ್ರಮದಲ್ಲಿ ರಿಸರ್ಚ್ ಮೆಥಡಾಲಜಿಯ ಶೇ.50, ಆಯಾ ವಿಷಯದ ಶೇ.50 ಅಂಶಗಳು ಇರಬೇಕು. ಲಿಖೀತ ಪರೀಕ್ಷೆಯಲ್ಲಿನ ಸಾಮರ್ಥ್ಯಕ್ಕೆ ಶೇ.70, ಮೌಖೀಕ ಸಂದರ್ಶನದಲ್ಲಿ ಶೇ.30 ಅಂಕಗಳಲ್ಲಿ ಪಡೆಯುವ ಒಟ್ಟು ಅಂಕಗಳನ್ನು ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಸಂಶೋಧನೆಗೇ ಆದ್ಯತೆ :
ಹೊಸ ನಿಯಮಗಳ ಪ್ರಕಾರ ಯಾವುದೇ ವಿಚಾರದಲ್ಲಿ ಪಿಎಚ್.ಡಿ. ಮಾಡುವರಿಗೆ ಸಂಶೋಧನೆಗೆ ಹೆಚ್ಚಿನ ಅದ್ಯತೆ ನೀಡಲು ಸೂಚಿಸಲಾಗಿದೆ. ಅವರಿಗೆ ಬೋಧನೆಯಲ್ಲಿ ತರಬೇತಿ, ಶಿಕ್ಷಣ, ಅವರು ಆಯ್ಕೆ ಮಾಡಿದ ವಿಷಯದಲ್ಲಿ ಸಂಶೋಧನಾತ್ಮಕ ಪ್ರಬಂಧಗಳನ್ನು ಬರೆಯಲು ಒತ್ತು ನೀಡಲು ಸೂಚಿಸಲಾಗಿದೆ. ವಾರಕ್ಕೆ ನಾಲ್ಕರಿಂದ ಆರು ಗಂಟೆಗಳ ಕಾಲ ಬೋಧನೆ, ಸಂಶೋಧನೆ, ಪ್ರಯೋಗಶಾಲೆಯಲ್ಲಿ ಪ್ರಯೋಗ, ಅದರಲ್ಲಿ ಬಂದ ಅಂಶಗಳ ಮೌಲ್ಯಮಾಪನವನ್ನು ಕಡ್ಡಾಯಗೊಳಿಸಲಾಗಿದೆ. ಹಿಂದಿನ ನಿಯಮ ಪ್ರಕಾರ ಪ್ರತೀ ಆರು ತಿಂಗಳಿಗೆ ಒಂದು ಬಾರಿ ರಿಸರ್ಚ್ ಅಡ್ವೆ„ಸರಿ ಕಮಿಟಿ ಮುಂದೆ ಸಂಶೋಧನ ವಿದ್ಯಾರ್ಥಿ ಹಾಜರಾಗಿ, ಅಧ್ಯಯನದ ಪ್ರಗತಿ ಮಂಡಿಸಬೇಕಾಗಿತ್ತು. ಹೊಸ ಪದ್ಧತಿಯಲ್ಲಿ ಪ್ರತೀ ಸೆಮಿಸ್ಟರ್‌ನಲ್ಲಿ ಕೂಡ ಈ ವ್ಯವಸ್ಥೆಯನ್ನು ಮಾಡಬೇಕಾಗಿದೆ.
ಸಂಶೋಧನ ಮಾರ್ಗದರ್ಶಕರು :
ಅರ್ಹತೆ ಪಡೆದ ಪ್ರೊಫೆಸರ್‌ಗಳು, ಎಸೋಸಿಯೇಟ್ ಪ್ರೊಫೆಸರ್‌ಗಳು ಗರಿಷ್ಠವೆಂದರೆ ಎಂಟು, ಆರು ಮತ್ತು ನಾಲ್ಕು ಮಂದಿಗೆ ಮಾರ್ಗದರ್ಶನ ನೀಡಲು ಅವಕಾಶ ಇದೆ. ಹೊಸ ನಿಯಮ ಗಳ ಪ್ರಕಾರ ನಿವೃತ್ತಿಯಾಗಲು ಮೂರು ವರ್ಷ ಇರುವ ಪ್ರೊಫೆಸರ್‌ಗಳು ಹೊಸಬರಿಗೆ ಮಾರ್ಗದರ್ಶಕರಾಗಿ ನೇಮಕಗೊಳ್ಳಲು ಅವಕಾಶ ಇಲ್ಲ.
ಅರೆಕಾಲಿಕ ಪಿಎಚ್.ಡಿ . :
ಪೂರ್ಣಕಾಲಿಕ ಪಿಎಚ್.ಡಿ. ನಿಯಮವೇ ಅರೆಕಾಲಿಕವಾಗಿ ಪಿಎಚ್.ಡಿ. ಮಾಡುವವರಿಗೆ ಅನ್ವಯವಾಗುತ್ತದೆ. ಅವರು ತಮ್ಮ ಉದ್ಯೋಗದಾತನಿಂದ ಅಥವಾ ಕಂಪೆನಿಗಳಿಂದ ನಿರಾಕ್ಷೇಪಣ ಪತ್ರ (ಎನ್‌ಒಸಿ) ಸಲ್ಲಿಸಬೇಕಾಗುತ್ತದೆ. ಅದರಲ್ಲಿ ಸಂಶೋಧನ ವಿದ್ಯಾರ್ಥಿಗೆ ಬೇಕಾಗುವ ಸಮಯ ನೀಡಬೇಕಾಗುತ್ತದೆ ಎಂಬುದನ್ನೂ ನಮೂದಿಸಬೇಕಾಗುತ್ತದೆ.
-ಸದಾಶಿವ ಕೆ.