Advertisement

ಗುಪ್ತ ಶಿವಭಕ್ತ ಶಿವಶರಣ ಮಾದಾರ ಚನ್ನಯ್ಯ

03:06 PM Mar 03, 2018 | |

ಸಿಂದಗಿ: ಕುಲತಿಲಕ ಮಹಾ ಶಿವಶರಣ ಮಾದಾರ ಚನ್ನಯ್ಯನವರು 12ನೇ ಶತಮಾನದ ಶ್ರೇಷ್ಠ ಗುಪ್ತ ಶಿವಭಕ್ತನಾಗಿದ್ದ ಎಂದು ಕರ್ನಾಟಕ ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷ, ಸ್ಥಳೀಯ ಸಿ.ಎಂ. ಮನಗೂಳಿ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಬಿ.ಎನ್‌. ಪಾಟೀಲ ಇಬ್ರಾಹಿಂಪುರ ಹೇಳಿದರು.

Advertisement

ಪಟ್ಟಣದ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಮಾದಾರ ಚನ್ನಯ್ಯ ಜಯಂತಿ ಹಾಗೂ
ಮಾದಿಗರ ಜನಜಾಗೃತಿ ಸಮಾವೇಶದಲ್ಲಿ ಅವರು ಉಪನ್ಯಾಸ ನೀಡಿದರು.

12ನೇ ಶತಮಾನದಲ್ಲಿ ದೇವರು, ದೇಸವಸ್ಥಾನಗಳು ಶ್ರೀಮಂತರ ಸೊತ್ತಾಗಿದ್ದವು. ದೀನ-ದಲಿತರಿಗೆ ಪ್ರವೇಶ ನೀರಾಕರಿಸಲಾಗಿತ್ತು. ಇದರಿಂದ ಬೆಸತ್ತ ಶಿವಶರಣ ಮಾದರ ಚೆನ್ನಯ್ಯನವರು ವಚನಗಳ ಮೂಲಕ ಅಸಮಾನತೆ ಬಗ್ಗೆ ಹೇಳಿ ಸಮ ಸಮಾಜವನ್ನು ಕಟ್ಟಲಿಕ್ಕೆ ಶ್ರಮಿಸಿದ್ದರು ಎಂಬುವುದು ಲಭ್ಯವಾದ ಅವರ 10 ವಚನಗಳಿಂದ ತಿಳಿದು ಬರುತ್ತದೆ ಎಂದರು. ಯಾರು ಯಾವಾಗಲೂ ಎಲ್ಲ ಕಾಲಕ್ಕೂ ಕೆಟ್ಟದ್ದನ್ನೆ ಮಾಡುತ್ತಿದ್ದರೇ ಅವನು ಶ್ರೇಷ್ಠ ಕುಲದಲ್ಲಿ ಹುಟ್ಟಿದರೂ ಕನಿಷ್ಠನೆ, ಯಾರು ಯಾವಾಗಲೂ ಎಲ್ಲ ಕಾಲಕ್ಕೂ ಒಳ್ಳೆಯದನ್ನು ಮಾಡುತ್ತಿದ್ದರೇ ಕನಿಷ್ಠ ಕುಲದಲ್ಲಿ ಹುಟ್ಟಿದರೂ ಆತನೂ ಶ್ರೇಷ್ಠ. ಹುಟ್ಟಿನಿಂದ ಯಾರು ಶ್ರೇಷ್ಠರಲ್ಲ. ಸಪ್ತಋಷಿಗಳಲ್ಲಿ ಯಾರೂ ಸವರ್ಣಿಯರಿಲ್ಲ. ಸಾಕ್ಷಾತ ಶಿವನೇ ಅವರ ಗುಪ್ತ ಬಕ್ತಿ ಬಯಲು ಮಾಡಲು ಅವನ ಗುಡಿಸಲಿಗೆ ಬಂದು ಅಂಬಲಿಯನ್ನು ಕುಡಿದ. ಅಂತಹ ಮಾದಾರ ಚನ್ನಯ್ಯನವರು ಮಾದರ ಕುಲದಲ್ಲಿ ಹುಟ್ಟಿದರೂ ವೇದವನ್ನು ಓದುವವರು ಅವರನ್ನು ಪೂಜಿಸುವ ಮಟ್ಟಕ್ಕೆ ಬೆಳೆದರು ಎಂದರು.

ಸಮಾವೇಶ ಉದ್ಘಾಟಿಸಿ ಶಾಸಕ ರಮೇಶ ಭೂಸನೂರ ಮಾತನಾಡಿ, ಮಾದಿಗ ಸಮಾಜದ ಜನತೆ ಶ್ರಮ ಜೀವಿಗಳು ಹಾಗೂ ಪ್ರಾಮಾಣಿಕರು. ಎಲ್ಲ ಸಮಾಜದವರೊಂದಿಗೆ ಹೊಂದಿಕೊಂಡು ಹೋಗುವ ಜನತೆಯಾಗಿದ್ದಾರೆ. ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಮುಖ್ಯವಾಹಿನಿಗೆ ಬರಬೇಕು. ಮಹಾ ಶಿವಶರಣ ಮಾದಾರ ಚನ್ನಯ್ಯನವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ನಮ್ಮ ಜೀವನ ಸುಖಕರವಾಗುವುದು ಎಂದರು. ಅಧ್ಯಕ್ಷತೆ ವಹಿಸಿದ್ದ ಎಂ.ಎಸ್‌. ಹಯ್ನಾಳಕರ ಮಾತನಾಡಿದರು.

ಆದಿಜಾಂಬವ ಷಡಕ್ಷರಿ ಸ್ವಾಮೀಜಿ, ಸಿದ್ದಬಸವ ಕಬೀರ ಮಹಾಸ್ವಾಮಿಗಳು, ಆಲಮೇಲ್‌ ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಎಂ.ಎನ್‌. ಪಾಟೀಲ, ಶರಣು ಬ್ಯಾಳಿ, ಪುರಸಭೆ ಅಧ್ಯಕ್ಷ ಭಾಷಾಸಾಬ ತಾಂಬೋಳಿ, ಜಿಪಂ ಸದಸ್ಯ ಬಿ.ಆರ್‌. ಯಂಟಮನ, ಜಿಪಂ ಮಾಜಿ ಉಪಾಧ್ಯಕ್ಷ ಮಲ್ಲಣ್ಣ ಸಾಲಿ, ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ, ಹನುಮಂತಸುಣಗಾರ, ಗೊಲ್ಲಾಳ ಬಂಕಲಗಿ, ಇಕ್ಬಾಲ್‌ ತಲಕಾರಿ, ಶಂಕರ ಬಗಲಿ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next