Advertisement

ಉಚಿತ ವಿವಾಹ ಕಾರ್ಯ ಶ್ಲಾಘನೀಯ

09:55 AM Feb 25, 2019 | |

ಸಿಂದಗಿ: ಸಾಮೂಹಿಕ ವಿವಾಹಗಳು ಬಡ-ಮಧ್ಯಮ ವರ್ಗದ ಕುಟುಂಬದ ವಧು-ವರನಿಗೆ ಬದುಕಿನ ಭದ್ರತೆ ನೀಡುವ ಜೊತೆಗೆ ಕಾನೂನು ಭದ್ರತೆ ನೀಡುತ್ತವೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.

Advertisement

ರವಿವಾರ ಶಂಭೇವಾಡ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ಹಮ್ಮಿಕೊಂಡಿದ್ದ 6 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾಮೂಹಿಕ ವಿವಾಹದಲ್ಲಿ ನಡೆಯುವ ವಧು-ವರನ ಮದುವೆ ಕಾನೂನು ಪ್ರಕಾರ ನೋಂದಣಿಯಾಗುತ್ತದೆ. ಇದರಿಂದ ಎರಡು ಕುಟುಂಬದವರಿಗೆ ಕಾನೂನು ಭದ್ರತೆ ಸಿಗುತ್ತದೆ. ಸಾಮೂಹಿಕ ವಿವಾಹಗಳ ನಡೆಯುವುದರಿಂದ ಬಡ ಕುಟುಂಬಗಳಿಗೆ ಸಹಾಯವಾಗುವ ಜೊತೆಗೆ ಆಡಂಬರ
ಮದುವೆಗಳಿಗೆ ಕಡಿವಾಣ ಹಾಕಿದಂತಾಗುತ್ತದೆ ಎಂದರು.

ಉಚಿತ ಸಾಮೂಹಿಕ ವಿವಾಹಗಳು ಬಡ ಮತ್ತ ಮಧ್ಯಮ ವರ್ಗದ ಕುಟುಂಬಗಳಿಗೆ ಆಸರೆಯಾಗಿವೆ. ಇಂದಿನ ದುಬಾರಿ ಜೀವನದಲ್ಲಿ ಮದುವೆ ಮಾಡುವುದು ಅಷ್ಟೇ ಕಷ್ಟವಾಗಿದೆ. ಹೆಮ್ಮೆಗೆ ಬಿದ್ದು ಮದುವೆ ಹೆಸರಿಲ್ಲಿ ದುಂದು ಖರ್ಚು ಆಗುವುದು ಹೆಚ್ಚು. ದುಂದು ವೆಚ್ಚ ಕಡಿವಾಣ ಹಾಕಲು ಇಂಥ ಸಾಮೂಹಿಕ ವಿವಾಹಗಳು ಸಂಘಟಿಕರು ಹೆಚ್ಚು ಹೆಚ್ಚು ಆಯೋಜಿಸಬೇಕು ಎಂದು ಸಲಹೆ ನೀಡಿದರು.

ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಮಾತನಾಡಿ, ಕರವೇ ಸಂಘಟನೆ ಮೂಲಕ ಕನ್ನಡ ಪರ ಹೋರಾಟ, ಕಾರ್ಯಕ್ರಮ ಆಯೋಜಿಸುವ ಜೊತೆಗೆ ಸಾಮಾಜಿಕ ಕಾರ್ಯ ಮಾಡಲು ಉಚಿತ ಸಮೂಹಿಕ ಕಾರ್ಯಕ್ರಮದಲ್ಲಿ ಬಡ ಕುಟುಂಬಗಳ 6 ಜೋಡಿಗಳ ಮದುವೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಹೆಚ್ಚು ಹೆಚ್ಚು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.

Advertisement

ಈ ವೇಳೆ 6 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಠಾಧಿಧೀಶರು ಹಾಗೂ ಹಿರಿಯರು ಆಶೀರ್ವದಿಸಿದರು. ಸಾನ್ನಿಧ್ಯ ವಹಿಸಿದ್ದ ಅಫಜಲಪುರದ ಮಳೇಂದ್ರಶಿವಾಚಾರ್ಯರು, ತಾಲೂಕಿನ ಆಲಮೇಲ ಗ್ರಾಮದ ಜಗದೇವ ಮಲ್ಲಿಬೋಮ್ಮ ಮಹಾಸ್ವಾಮಿಗಳು, ಕುಮಸಗಿಯ ಶಿವಾನಂದಶಿವಾಚಾರ್ಯರು ಆಶೀರ್ವಚನ ನೀಡಿದರು.

ಸಿದ್ದು ಬುಳ್ಳಾ, ಸಂದೀಪ ಚೌರ, ಭೀಮರಾಯ ಅವರಾದಿ, ಶ್ರೀಕಾಂತ ಬಿಜಾಪುರ, ಚೇತನ ರಾಂಪುರ, ರೇಷ್ಮಾ ಪಡೇಕನೂರ, ಎಂ.ಸಿ. ಮುಲ್ಲಾ, ಗ್ರಾಮದ ಹಿರಿಯರಾದ ಸುಭಾಷ್‌ ಅವರಾದಿ ವೇದಿಕೆಯಲ್ಲಿದ್ದರು. ಸಂಘಟನೆ ಪದಾಧಿಕಾರಿಗಳು ಹಾಗೂ ವಧು-ವರರ ಪಾಲಕರು, ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next