ಏನೂ ತೋಚದೆ ಹೋದವನು ಆಕಾಶ ನೋಡುತ್ತಾನಲ್ಲ ಯಾಕೆ ಹೇಳು? ಆಕಾಶದ ವಿಶಾಲತೆಯೇ ಒಂದು ರೀತಿಯ ಕಂಫರ್ಟ್ ಕೊಡುತ್ತದೆ. ಅದಕ್ಕೆ ನೀನು ನನ್ನ ಬದುಕಿನ ಆಕಾಶ ಕಣೇ ಹುಡುಗಿ. ನೀ ನನಗೊಂದು ಹೊಸ ಕನಸು ಕೊಡು…
ನನ್ನೊಲವೇ,
ಒಲವಿನ ಮೊದಲ ಇಷಾರೆ ನಿನ್ನ ಕಣ್ಣÇÉೇ ಸಿಕ್ಕಿದೆ. ಇಂಥವೇ ನೂರಾರು ಸಂಜೆಗಳಲ್ಲಿ ನಿನ್ನ ನೆನಪುಗಳ ಸಮೇತ ಒಬ್ಬಂಟಿ ಅಲೆದಿದ್ದೇನೆ. ಆ ಸಂಜೆಗಳಲ್ಲಿ ಎದೆಯೊಳಗೆ ನೂರಾರು ಹಾಡುಗಳನ್ನು ಗುನುಗಿಕೊಂಡಿದ್ದೇನೆ. ಇಂಥ¨ªೊಂದು ಸಂಜೆಯ ಸನ್ನಿಧಿಗಾಗಿ ಅದೆಷ್ಟು ಕನವರಿಸಿ¨ªೆ ಗೊತ್ತಾ ಹುಡುಗಿ?
ಮನವನೊಲಿಸುವ ಲಯವ ಅರಿಯೆನು ಬಯಸಿದ ಇಂಚರ ಒಲಿದರೆ ಸುಂದರ ನೀನು ಇವತ್ತು ಎದುರಿಗೆ ಸಿಕ್ಕಾಗಲೇ ಎದೆಯೊಳಗೆ ಎಂಥ¨ªೋ ಹಿತವಾದ ನೋವು. ನಕ್ಕ ನಗುವÇÉೇ ಒಲವಿನ ತೊದಲ ಮಾತು ಅಡಗಿತ್ತು. ಇಬ್ಬರೂ ಮಾತುಗಳೇ ಇಲ್ಲದೇ ಉಕ್ಕುವ ಕಡಲನ್ನು ಎದೆಯೊಳಗೆ ಬಚ್ಚಿಟ್ಟುಕೊಂಡು ನಿಂತಿ¨ªೆವು. ಒಳಗೆÇÉೋ ಅಲೆಗಳ ಮೊರತ ಅದೆಷ್ಟೇ ಅದುಮಿಟ್ಟರೂ, ಕಣ್ಣು ಗುಟ್ಟು ಬಿಟ್ಟುಕೊಟ್ಟು ಹೊಳೆಯುತ್ತಿತ್ತು. ಬೀಸುವ ಗಾಳಿಯಲ್ಲಿ ನಿನ್ನ ಹೆರಳಿನ ನರ್ತನ. ನೀ ನಿಂತ ಭಂಗಿಯÇÉೇ ಸೌಂದರ್ಯವೆಂಬುದು ಹೊಮ್ಮುತ್ತಿತ್ತು. ಕಂಡ ಕನಸು ನನಸಾದ ಘಳಿಗೆಯಲಿ ಮಾತುಗಳ ರುಜುವಾತಿಗಿಂತ, ಮೌನದ ಸಹಿಯಷ್ಟೇ ಸಾಕಲ್ಲವಾ? ಮತ್ತೆ ಸಿಗೋಣ ಅಂತ ನೀ ಹೊರಟು ಗಾಳಿಯಲ್ಲಿ ಚಿಗುರು ಬೆರಳಾಡಿಸುತ್ತಾ ಹೋದೆಯÇÉಾ, ಮತ್ತೆ ಯಾವಾಗ ಭೇಟಿ? ಅಂತ ಕೇಳ್ಳೋದನ್ನೂ ಮರೆತು ಯಾವುದೋ ಸಮೊ¾àಹನಕ್ಕೆ ಒಳಗಾದವನಂತೆ ನಿಂತೇ ಇ¨ªೆ.
ಭಾವಗಳ ಧಾರೆಗೆ ನದಿಯೊಂದು ಸಿಕ್ಕಬಹುದೆ ಆಸೆಗಳ ಧ್ಯಾನಕೆ ವರದಾನವಾಗಬಹುದೆ?
ಮತ್ತೆ ಇಂಥದ್ದೇ ಒಂದು ಸಂಜೆ ನಮಗಾಗಿ ಕಾಯುತ್ತಿದೆ ಅನ್ನೊ ನಂಬಿಕೆಯಂತೂ ನನ್ನೊಳಗಿದೆ. ಆ ದಿನ ನೀನು ತಿಳಿ ನೀಲಿ ಬಣ್ಣದ ಸೀರೆಯುಟ್ಟು ಬಾ. ಆಕಾಶವನ್ನೆ ನಿನಗೆ ಉಡಿಸಿದಂತೆ ಕಾಣುತ್ತೆ. ನಂಗೆ ನೀಲಿಯೆಂದರೆ ಅಷ್ಟೊಂದು ಇಷ್ಟ. ಆಕಾಶದಷ್ಟು. ಏನೂ ತೋಚದೆ ಹೋದವನು ಆಕಾಶ ನೋಡುತ್ತಾನಲ್ಲ ಯಾಕೆ ಹೇಳು? ಆಕಾಶದ ವಿಶಾಲತೆಯೇ ಒಂದು ರೀತಿಯ ಕಂಫರ್ಟ್ ಕೊಡುತ್ತದೆ. ಅದಕ್ಕೆ ನೀನು ನನ್ನ ಬದುಕಿನ ಆಕಾಶ ಕಣೇ ಹುಡುಗಿ. ನೀ ನನಗೊಂದು ಹೊಸ ಕನಸು ಕೊಡು, ನಾ ಇಡೀ ಬದುಕನ್ನು ನಿನಗೆ ಕೊಡುತ್ತೇನೆ. ನಿನ್ನ ಕಾಯುವಿಕೆಯಲ್ಲಿಯೂ ಹಿತವಿದೆ. ಎದೆಯೊಳಗಿನ ನಿರೀಕ್ಷೆಗೆ ನಿನ್ನ ಕರೆಯ ರಿಂಗಣ ಬೇಕಿದೆ. ಕಾಯುತ್ತೇನೆ ಆ ಸಂಜೆಗಾಗಿ.
ಮಾತಿರದ ಹೂಗಳ ಮೊಗದಲ್ಲಿ ಮಂದಹಾಸ ಪ್ರೀತಿಸುವ ಹೃದಯಕೆ ಬದುಕೆಲ್ಲಾ ಚೈತ್ರಮಾಸ ನಿನ್ನವನು
– ಜೀವ ಮುಳ್ಳೂರು