Advertisement
ವಿಶೇಷವೆಂದರೆ ಈ ಮೂವರೂ ಮುಖ್ಯ ಸ್ಥರು ರಾಷ್ಟ್ರೀಯ ರಕ್ಷಣ ಅಕಾಡೆಮಿ(ಎನ್ಡಿಎ) ಕೋರ್ಸ್ನ 61ನೇ ಬ್ಯಾಚ್ನವರಾಗಿ ದ್ದಾರೆ. ಮೂವರು ಹಲವು ವರ್ಷಗಳಿಂದ ಸ್ನೇಹದಲ್ಲಿರುವುದರಿಂದಾಗಿ ಮೂರೂ ಪಡೆಗಳ ನಡುವೆ ಸಮನ್ವಯ ಚೆನ್ನಾಗಿರಲಿದೆ ಎಂದು ಜ| ಮನೋಜ್ ಪಾಂಡೆ ಹೇಳಿದ್ದಾರೆ.
ಹೊಸದಿಲ್ಲಿ: ಲೆಫ್ಟಿನೆಂಟ್ ಜನರಲ್, ಕರ್ನಾಟಕದ ಬಿ.ಎಸ್.ರಾಜು ಭಾರತೀಯ ಭೂಸೇನೆಯ ಉಪ ಮುಖ್ಯಸ್ಥರಾಗಿ ರವಿವಾರ ಅಧಿಕಾರ ಸ್ವೀಕರಿಸಿದ್ದಾರೆ. ಜನರಲ್ ಮನೋಜ್ ಪಾಂಡೆ ಅವರು ಭೂ ಸೇನೆಯ 29ನೇ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದರಿಂದ ರಾಜು ಅವರು ಭಡ್ತಿ ಪಡೆದಿದ್ದಾರೆ. ಈ ಹಿಂದೆ ರಾಜು ಅವರು ಭಾರತ-ಚೀನ ಗಡಿಯ ಎಲ್ಎಸಿಯಲ್ಲಿ ಡಿಜಿಎಂಒ ಆಗಿದ್ದಾರೆ.