Advertisement
ಎಲ್ಲರ ಮನೆಯ ಮಕ್ಕಳಂತೆ ನನ್ನ ಮಗನೂ ನಮ್ಮ ಪರಮ ಪೂಜ್ಯ ಪೂರ್ವಜರ ಲೆಕ್ಕದಲ್ಲಿಯೇ ಬರುತ್ತಾನೆ. ಅದರೂ ಅವನಿಗೆ ಬೇಸರವಾಗದಿರಲೆಂದು ನನ್ನ ಮಗ ಕ್ಯೂರಿಯಸ್ ಜಾರ್ಜ್ ಥರ ಎಂದುಬಿಡುತ್ತೇನೆ, ಆಗ ಹಾವು ಮತ್ತು ಕೋಲು ಎರಡೂ ಸೇಫ್. ಬಿದ್ದರೆ ಒಡೆಯುತ್ತದೆ ಎಂಬುದನ್ನೂ ಪರೀಕ್ಷಿಸಿಯೇ ಒಪ್ಪಿಕೊಳ್ಳುವಷ್ಟು ಪ್ರಯೋಗಶೀಲ ನನ್ನ ಮಗ. ಹೇಗೆ ಹೇಳಲಿ ನನ್ನ ಕಷ್ಟ, ಯಾವ ಔಷಧಕ್ಕೂ ಬಗ್ಗದ ಒಂದು ದೋಷವಿದೆ ನನ್ನ ಮಗನಲ್ಲಿ ! ಯಾವುದೆಂದು ಕೇಳುತ್ತೀರಾ? ನನ್ನ ಮಗನಿಗೆ “ಬೇಡ’ ಎಂಬ ಪದವನ್ನು ಎಷ್ಟೇ ಹೈ ಡೆಸಿಮಲ್‌ನಲ್ಲಿ ಹೇಳಲಿ, ಅದು ಕೇಳುವುದೇ ಇಲ್ಲ. ಹ್ಮ್… ಮಗ ಹುಟ್ಟಿದ ಮೇಲೆ ನಮಗೂ ಒಂದು ಗೀಳು ಅಂಟಿಹೋಯಿತು ಎನ್ನಿ. ಅತೀ ಪ್ರೀತಿ, ಕಾಳಜಿ ತೋರುವ ಗೀಳು. ಅದಕ್ಕೆ ತಕ್ಕನಾಗಿ ಅವನೂ ಅತಿಯಾಗಿ ತಲೆತಿನ್ನುವ, ಪ್ರಶ್ನೆ ಸುರಿಸುವ ಗುಣ ಬೆಳೆಸಿಕೊಂಡ, ಅಧಿಕಪ್ರಸಂಗಿಯ ಹಾಗೆ.
“ನಾನು ಸಾಕಿ¨ªಾ?’ ಅಡುಗೆ ಕೋಣೆ ಪೂರ್ತಿಯಾಗಿ ಕೇಂದ್ರಾಡಳಿತಕ್ಕೆ ಒಳಪಟ್ಟ ಪ್ರದೇಶ, ಅಡುಗೆ ಮನೆಯಲ್ಲಿ ಅಮ್ಮನದೇ ದರ್ಬಾರು ಅಂತ ಮುದ್ದು ಕಂದನಿಗೂ ಗೊತ್ತಿದೆ ಅನ್ನಿಸುತ್ತದೆ. ನಾಲ್ಕು ದಿನದ ಹಿಂದೆ ತಂದಿಟ್ಟ ಬಾಳೆಹಣ್ಣಿನ ಚಿಪ್ಪಿನ ಸುತ್ತ ಮುತ್ತಿದ್ದ ನೊರಜುಗಳನ್ನು ಉದ್ದೇಶಿಸಿ ಪ್ರಶ್ನೆ ಕೇಳುತ್ತಿ¨ªಾನೆ ಅಂತ ಗೊತ್ತಾಯಿತು. “ಇವೆಲ್ಲ ಸೊಳ್ಳೆಗಳಲ್ಲ, ನೊರಜು, ಕೌಳಿ ಅಥವಾ ಫ್ರುಟ್ ಫ್ಲೈ ಎನ್ನುತ್ತಾರೆ. ಇವು ಕಚ್ಚುವುದಿಲ್ಲ’ ಎಂದೆ. ಅನುಮಾನಕ್ಕೆ ಎಡೆಯಿಲ್ಲದಂತೆ ನನ್ನ ಲೆಕ್ಕದಲ್ಲಿ ಸರಿಯಾದ ಉತ್ತರ ಕೊಟ್ಟು ಮಗನನ್ನು ಸಾಗಹಾಕಿ¨ªೆ. ತೋಂಡಿ ಪರೀಕ್ಷೆ ಇಷ್ಟು ಬೇಗ ಯಾವತ್ತೂ ಮುಗಿದಿರಲಿಲ್ಲ. ಆದರೆ ಸ್ವಲ್ಪ ಹೊತ್ತಿಗೆ, “ಅಮ್ಮ , ಆಚೆ ಮನೆಯಿಂದ ಬಾಳೆಹಣ್ಣು ತಗೊಂಡು ಬರೋಣ ಬಾ’ ಬರೋಬ್ಬರಿ ಅಕ್ಕಪಕ್ಕದ ಮನೆಗೆಲ್ಲ ಕೇಳುವಂತೆ ಅರಚಾಟ ಶುರುವಾಯಿತು. “ಪಕ್ಕದ ಮನೆಯ ಬಾಳೆಹಣ್ಣು ಏಕೆ, ಮನೆಯಲ್ಲಿಯೇ ಇದೆಯಲ್ಲ’ ಅಂತ ಪುಟ್ಟ ಬಾಳೆಹಣ್ಣನ್ನು ಮಗನ ಕೈಲಿಟ್ಟೆ.
“ಅಮ್ಮ, ಫ್ರುಟ್ ಫ್ಲೈಪಕ್ಕದ ಮನೆಯಲ್ಲಿ ಫ್ರುಟ್ ಮಾಡಿರತ್ತಲ್ಲ ಅದು ಬೇಕು…’ ಏನೋ ಮಿಸ್ ಆಗಿದೆ ಅಂತ ನನಗೆ ವಾಸನೆ ಬಂದು ಹೋಯ್ತು.
Related Articles
“ಹನಿ ಬೀ ನಮ್ಮನೆ ಹೂವಿನ ಗಿಡದ ಹನಿ ಕುಡಿದು ಪಕ್ಕದ ಮನೆ ಆಂಟಿ ಕಿಟಕಿ ಹತ್ತಿರ ಹನಿ ಮಾಡಿತ್ತಲ್ವಾ, ಫ್ರುಟ್ ಫ್ಲೆ, ಕೂಡ ನಮ್ಮನೆ ಫ್ರುಟ್ ತಿಂದು ಅವರ ಮನೆಗೆ ಹೋಗಿ ಫ್ರುಟ್ ಮಾಡಲ್ವಾ?’
Advertisement
ಲಾಜಿಕ್ಕಲ್ಲಿ ಮಗನೇನೋ ಸರಿಯೇ ಇ¨ªಾನೆ, ಆದರೆ ವಾಸ್ತವ ಹಾಗಿಲ್ಲವಲ್ಲ. ನನ್ನ ಯಾವ ಉತ್ತರವೂ ಅವನ ತಲೆಗೆ ಹೋಗಲಾರದು ಅಂತ ಗೊತ್ತಿತ್ತು. ಆದರೂ ಅವನನ್ನು ಸಮಾಧಾನಪಡಿಸಿ ಅವನನ್ನು ಸಂತೈಸುವುದರೊಳಗೆ ನಾನು ಬೆಂಡಾಗಿ¨ªೆ.
ಒಂದಿನ, “ಸ್ನಾನ ಮಾಡಿಸಿ ಮೈಗೆ ಲೋಶನ್ ಹಚ್ಚುತ್ತೇನೆ ಬಾ’ ಎಂದರೆ “ಬೇಡಾ’ ಎಂದು ರಾಗ ತೆಗೆದು ಸಂಗೀತ ಕಛೇರಿ ಶುರು ಮಾಡಿದ್ದ. ಪುಸಲಾಯಿಸಿ, ಹೊಗಳಿ ಅಟ್ಟಕ್ಕೇರಿಸಿದರೂ ಹದಕ್ಕೆ ಬರಲಿಲ್ಲ.“ನೀನು ಕ್ರೀಮ್ ಹಚ್ಚಿಲ್ಲ ಎಂದರೆ ನಿನ್ನ ಚರ್ಮ ಹಾವಿನ ಚರ್ಮದಂತೆ ಹುರುಪೆಯಂತಾಗಿ ಬಿರಿಯುತ್ತದೆ, ಮೈಯೆಲ್ಲ ಉರಿಯುತ್ತದೆ’ ಎಂದೆ. “ಹಂಗಾದ್ರೆ ಹಾವಿಗೂ ಕ್ರೀಮ್ ಹಚ್ಚಿದ್ರೆ ಹಾವಿನ ಮೈ ಸರಿ ಹೋಗತ್ತಾ? ಹಾವಿಗೆ ಯಾವಾಗಲೂ ಮೈ ಬಿರಿಯುತ್ತಾ, ಉರಿಯತ್ತಾ, ಅದೇ ಕೋಪದಲ್ಲಿ ಎಲ್ಲರನ್ನೂ ಕಡಿಯತ್ತಾ?’ ಅವನ ಪ್ರಶ್ನೆಗಳಿಗೆ ಥಟ್ಟಂತ ಉತ್ತರ ಹೇಳದಿದ್ದರೂ ಗಲಾಟೆ… ಇಂಥ ತಲೆಬೇನೆಯೇ ಬೇಡ ಅಂತ ಮಾತಿನಲ್ಲಿ ಅಪ್ಪಿತಪ್ಪಿ ಯಾವತ್ತೂ ಉಪಮೆ, ರೂಪಕಗಳನ್ನು ಬಳಸುವುದನ್ನು ಬಿಟ್ಟು ಬಿಡಬೇಕು ಎಂದು ಆವತ್ತೇ ನಿರ್ಧರಿಸಿಬಿಟ್ಟೆ. ಇವೆಲ್ಲ ಕಮ್ಮಿ ಆಯ್ತು ಎಂಬಂತೆ ಈಗ ಟೀವಿ ಕೂಡ ಹಚ್ಚುವುದನ್ನು ಕಲಿತ ಮಗರಾಯ. ಎಲ್ಲರ ಮನೆಯಲ್ಲಿ ಕಾರ್ಯಕ್ರಮದ ಮಧ್ಯೆ ಜಾಹೀರಾತು ಬಂದಾಗ ಚಾನೆಲ್ ಬದಲಾಯಿಸಿದರೆ ನಮ್ಮ ಮನೆಯಲ್ಲಿ ಕಾರ್ಯಕ್ರಮ ಬಂದಾಗ ಚಾನೆಲ್ ಬದಲಾಯಿಸಿ ಜಾಹೀರಾತುಗಳನ್ನು ಮಾತ್ರ ನೋಡುವ ಹೊಸ ಪರಿಪಾಠ ಶುರುವಾಯಿತು.
“ಅಮ್ಮ, ಚಾಕ್ಲೇಟು ತಿಂದು ನನಗೂ ಕಳ್ಳರನ್ನು ಓಡಿಸಬೇಕು.. ಬಿಸ್ಕೇಟು ತಿಂದರೆ ಟೈಗರ್ ಥರ ಶಕ್ತಿ ಬರುತ್ತಲ್ಲ ಅದೂ ಬೇಕು…’ “ಅಮ್ಮ, ಈ ಪೇಸ್ಟ್‌ನಿಂದ ಹಲ್ಲುಜ್ಜಿ ಕತ್ತಲೆಯಲ್ಲಿ ಬಾಯಿ ತೆಗೆದರೆ ನನ್ನ ಬಾಯಿಯಲ್ಲಿಯೂ ಲೈಟ್ ಬರತ್ತಾ?’, “ಅಮ್ಮ, ಈ ಸೋಪು ಹಚ್ಚಿದರೆ ಆಂಟಿ ಥರ ನಾನೂ ಬೆಳ್ಳಗಾಗುತ್ತೇನಾ?’
ಪುಟ್ಟ ಮಗನಿಗೆ ಅರ್ಥ ಆಗುತ್ತದೋ ಇಲ್ಲವೋ ಆದರೂ ಹೇಳುತ್ತಿ¨ªೆ- ಇವೆಲ್ಲ ಜನರನ್ನು ಮಳ್ಳು ಮಾಡುವ ಕಲೆ. ಜನರನ್ನು ಪೆದ್ದು ಮಾಡಿ ಅವರು ದುಡ್ಡು ಮಾಡಿಕೊಳ್ಳುತ್ತಾರೆ. ಅವರು ತೋರಿಸಿ¨ªೆಲ್ಲ ನಂಬಬಾರದು, ಚಾಕಲೇಟು ತಿಂದು ಮಕ್ಕಳೂ ಕಳ್ಳರನ್ನು ಓಡಿಸುತ್ತಿದ್ದರು ಎಂದಾದರೆ ಪೊಲೀಸರೆಲ್ಲ ಯಾಕೆ ಬೇಕಿತ್ತು ನಮಗೆ… ಅಂದೆ. ಅವನಿಗೆ ಅರ್ಥವಾಗುವಂತೆ ತಿಳಿಸಿ ಹೇಳಿದರೆ ಅದು ಅವನಿಗೆ ಅರ್ಥವಾಗದು. ಅವನು ನಂಬುವಂತೆ ಹೇಳಲು ನನಗೆ ಬಾರದು. ಏನು ಬೆಪ್ಪುತಕ್ಕಡಿ ಗಿರಾಕಿಯಪ್ಪ ನನ್ನ ಮಗ ಅನ್ನಿಸುತ್ತಿತ್ತು. ಪೇದ್ರು ಎಂದು ಮನಸ್ಸಲ್ಲೇ ಬೈದುಕೊಳ್ಳುತ್ತಿ¨ªೆ. ಆದರೂ ನಮ್ಮ ಮನೆ ಸೇರುವ ಪೇಸ್ಟ್ , ಬ್ರಶ್, ಸೋಪುಗಳನ್ನೆಲ್ಲ ಆರಿಸುವವನು ಅವನೇ. ಬುದ್ಧಿ ಹೇಳಿದರೆ ಕೇಳುವ ವಯಸ್ಸೂ ಅಲ್ಲ, ಆ ಗುಣವೂ ಇಲ್ಲ ನನ್ನ ಮಗನಿಗೆ. ಪೇಸ್ಟ್ , ಸೋಪು ಯಾವ ಬ್ರ್ಯಾಂಡಿನದಾದರೇನು, ಎಲ್ಲವೂ ಒಂದೇ ನಮ್ಮಂಥವರಿಗೆ, ಒಳ್ಳೆ ನೊರೆ ಬಂದರಾಯ್ತು. ಇಂಥದ್ದೇ ಸ್ವಲ್ಪ ಏರುಪೇರಿನ ದಿನಚರಿಯೊಂದಿಗೆ ಸುಮಾರಿಷ್ಟು ದಿನಗಳು ಕಳೆದು ಹೋದವು. ಅಷ್ಟರಲ್ಲಿ ಒಂದೊಂದೇ ಅಕ್ಷರಗಳ ದುಂಬಾಲು ಬಿದ್ದು ಹೆಕ್ಕಿ ಅಲ್ಪಸ್ವಲ್ಪ ಓದುವುದನ್ನು ಮಗ ಕಲೀತಿದ್ದ. ಹೀಗೇ ಒಂದಿನ ಮಗನನ್ನು ಕರೆದುಕೊಂಡು ದಿನಸಿ ಸಾಮಾನುಗಳನ್ನು ಕೊಳ್ಳಲು ಸೂಪರ್ ಮಾರ್ಕೆಟ್‌ಗೆ ಹೋಗಿ¨ªೆ. ವಿಶೇಷವಾಗಿ ಇಂತಹ ಸಂದರ್ಭದಲ್ಲಿ ಮಗರಾಯ ನನ್ನ ಮನಸ್ಸನ್ನು ಗೆಲ್ಲಲು ಎÇÉಾ ನಮೂನೆಯ ಸರ್ಕಸ್ಸುಗಳನ್ನು ಮಾಡುತ್ತಾನೆ. ತಳ್ಳುವ ಸಾಮಾನಿನ ಗಾಡಿಯನ್ನು ತಳ್ಳುವುದರಿಂದ ಹಿಡಿದು ಮರೆತ ಸಾಮಾನುಗಳನ್ನು ನೆನಪಿಸುವುದು, ಸುಸ್ತಾಯಿತಾ ಅಂತ ಅಗಾಗ ಕೇಳುವುದು, ಇತ್ಯಾದಿ ಇತ್ಯಾದಿ. ಇಷ್ಟು ಮಾಡಿ ಮೆತ್ತಗೆ ಎರಡು ಲೀಟರ್ ಜ್ಯೂಸಿನ ಬಾಟಲಿಯನ್ನು ಹಿಡಿದು ನೋ ಆಡ್ಡೆಡ್ ಶುಗರ್, ನೋ ಪ್ರಿಸರ್ವೇಟಿವ್, ನೋ ಟ್ರಾನ್ಸ್ ಫ್ಯಾಟ್ ಅಂತೆಲ್ಲ ಹೆಕ್ಕಿ ಹೆಕ್ಕಿ ದೊಡ್ಡ ಸ್ವರದಲ್ಲಿ ಓದಿ ನನ್ನ ಮನವೊಲಿಸಲು ಪ್ರಯತ್ನಿಸುತ್ತಿದ್ದ. ನಾನು ಕೂಡ ಈಗ ವೆಲ್ ಪ್ರಾಕ್ಟೀಸ್ಡ್, ಮಗನ ಕೈಕೆಳಗೆ ವಾದದಲ್ಲಿ ನಿಪುಣೆಯಾಗಿದ್ದೇನೆ. ಪ್ರಿಸರ್ವೇಟಿವ್ ಇಲ್ಲದೆ, ಫ್ರಿಡ್ಜ್ನಲ್ಲಿಯೂ ಇಡದೆ ಇದ್ದರೆ ಹಣ್ಣಿನ ಜ್ಯೂಸ್ ಕೊಳೆತು ಹೋಗಿರುತ್ತದೆ ಅಂತೆಲ್ಲ ಗುಬ್ಬಿಯ ಮೇಲೆ ನನ್ನ ಉಪನ್ಯಾಸದ, ವಾಕ್ಚಾತುರ್ಯದ ಬ್ರಹ್ಮಾಸ್ತ್ರ ಬಿಟ್ಟೆ. ಮಗ ಟೈಂ ಪ್ಲೀಸ್ ಅಂದವರಂತೆ ಅಲ್ಲಿಂದ ಕಾಲ್ಕಿತ್ತು ಮತ್ತೆ ಹುಡುಕುವುದರಲ್ಲಿ ಮಗ್ನನಾದ. ಬರುವ ವಾರ ಹತ್ತಿರದವರ ಮದುವೆಗೆ ಹೋಗಬೇಕಿರುವುದರಿಂದ ಒಂದಿಷ್ಟು ಫೇಸ್‌ಪ್ಯಾಕ್, ಬ್ಲೀಚ್, ಮಸಾಜ್ ಕ್ರೀಮ್‌ಗಳನ್ನೆಲ್ಲ ಆರಿಸಿಕೊಳ್ಳುತ್ತಿ¨ªೆ. ಒಂದೊಂದು ಪ್ಯಾಕೆಟ್ಟಿನ ಮೇಲೂ ಪಿಹೆಚ್‌ಡಿ ಮಾಡುವವರಂತೆ ಮೇಲೆ ಕೆಳಗೆ, ಹಿಂದೆ, ಮುಂದೆ ನೋಡಿ, ಇನಿY†ಡಿಯೆಂಟ್ಸ್ ಓದಿ ಅಂತೂ ಕೆಲವೊಂದಿಷ್ಟು ಖರೀದಿ ಮಾಡಿ ಬಿಲ್ಲಿಂಗ್‌ಗೆ ಬಂದು ನಿಂತಾಯ್ತು. ನಮ್ಮ ಪಾಳಿ ಬಂದೊಡನೆಯೇ, “ಅಂಕಲ್, ನನ್ನ ಡೈಮಂಡ್ ಕೊಡಿ’ ಎಂದು ಅಕ್ಷರಶಃ ಕೂಗಿದ. ನಾನು ತಲೆಬುಡ ಅರಿಯದೆ ಅವಕ್ಕಾಗಿ ನಿಂತರೆ ಅಕ್ಕಪಕ್ಕದವರಿಗೆಲ್ಲ ನಗು. ಮಗನ ರಟ್ಟೆಯನ್ನು ಸ್ವಲ್ಪ ಬಿಗಿಯಾಗಿಯೇ ಹಿಡಿದೆಳೆದು, “ಮೊದಲನೆಯದಾಗಿ ಡೈಮಂಡ್ ತುಂಬಾನೇ ತುಟ್ಟಿ, ಎರಡನೆಯದಾಗಿ ಡೈಮಂಡ್ ಸಿಗುವುದು ಜ್ಯುವೆಲ್ಲರಿ ಶಾಪಿನಲ್ಲಿ’ ಎಂದೆ. “ಅಮ್ಮ, ಡೈಮಂಡ್ ಬ್ಲೀಚ್‌ನಲ್ಲಿ ಡೈಮಂಡ್ ಸಿಗತ್ತೇನೋ ಎಂದುಕೊಂಡೆ’ ಎಂದು ಮುಖ ಸಣ್ಣಗೆ ಸಿಂಡರಿಸಿದ. ಇದಕ್ಕೇನಾ ತೆಪ್ಪಗೆ ನನ್ನ ಹಿಂದೆ ಹಠ ಮಾಡದೆ ಬಿಲ್ಲಿಂಗ್‌ಗೆ ಬಂದಿದ್ದು ಅಂತ ಸತ್ಯ ತಿಳಿದವರಂತೆ ಮಗನಿಗೆ ತಿಳಿ ಹೇಳಿದೆ- ಬ್ಲೀಚ್ ಪ್ಯಾಕ್ ಮೇಲೆ ಡೈಮಂಡ್ ಬ್ಲೀಚ್ ಅಂತ ಯಾಕೆ ಬರೆದಿ¨ªಾರೆ ಎಂದು. “ಅಮ್ಮಾ, ಡೈಮಂಡ್ ಭಸ್ಮವನ್ನೆಲ್ಲ ಮುಖಕ್ಕೆ ಹಚ್ಚಿಕೊಳ್ಳುವಷ್ಟು ಶ್ರೀಮಂತರಾ ನಾವು?’ ಅಂತ ಕಣ್ಣರಳಿಸಿ, “ಈ ಬ್ಲೀಚ್ ಗೆ ಸಿಕ್ಕಾಪಟ್ಟೆ ದುಡ್ಡಾ?’ ಅಂದ. ನಾನೂ ಅಷ್ಟೇ ಕೂಲಾಗಿ ನಾನು, “ಬರೀ ಎಂಬತ್ತು ರೂಪಾಯಿ ಕೊಟ್ಟಿದ್ದೇನೆ’ ಎಂದೆ.
“ಅಂದ್ರೆ ಡೈಮಂಡ್ ಭಸ್ಮ ತುಂಬಾ ಕಾಸ್ಟ್‌ಲಿ ಅಲ್ಲ ಅನ್ನು… ಅದಕ್ಕಾಗಿಯೇ ಕೊಂಡೆಯಾ?’ ನನ್ನ ಬತ್ತಳಿಕೆಯಲ್ಲಿ ಬಾಣಗಳೇ ಇರಲಿಲ್ಲ, ಈಗ ನಾನು ಹೇಗೇ ಹೇಳಿದರೂ ಎಡವಟ್ಟು ಆಗುತ್ತದೆ ಅಂತ ಗೊತ್ತು. “ಇಲ್ಲಪ್ಪ, ಡೈಮಂಡ್ ನಿಜಕ್ಕೂ ಕಾಸ್ಟ್‌ಲಿ’ ಎಂದು ಹೇಳಿದರೆ ನಿನ್ನನ್ನು ಕೂಡ ಯಾರೋ ಪೆಕ್ರುವನ್ನಾಗಿ ಮಾಡಿ¨ªಾರೆ ಹಾಗಿದ್ದರೆ, ಡೈಮಂಡ್ ಭಸ್ಮ ಇದೆ ಎಂದು ಬರೆದು ಆಸೆ ತೋರಿಸಿ ಅಂತ ಕೊಂಕು ನಗೆ ನಕ್ಕು ನನ್ನ ಭಾಷಣ ನನಗೇ ಹೇಳುತ್ತಿದ್ದ. ಕಾಸ್ಟ್‌ಲಿ ಅಲ್ಲ ಅಂತ ಸುಳ್ಳಾಡುವಂತೆಯೂ ಇಲ್ಲ. ಒಳ್ಳೆಯ ಪೇಸ್ಟಿನಿಂದ ಹಲ್ಲುಜ್ಜಿ ನಕ್ಕರೆ ಮನೆ ತುಂಬಾ ಲೈಟ್ ಬಂದಂತೆ ವಜ್ರದ ಭಸ್ಮವಿರುವ ಕ್ರೀಮ್ ಹಚ್ಚಿದರೆ ನನ್ನ ಮುಖಕ್ಕೆ ಸ್ಪಾರ್ಕ್‌ಲಿಂಗ್ ಫೇರ್‌ನೆಸ್ ಸಿಗುತ್ತದೆ ಅಂತ ಈ ಖರೀದಿ ಎಂದು ಯಾಮಾರಿಸುವ ಉತ್ತರ ಕೊಟ್ಟು ನಕ್ಕುಬಿಡಲಾ ಅಂತ ಯೋಚಿಸುತ್ತಿ¨ªೆ. – ಛಾಯಾ ಭಟ್