Advertisement

ಗುಟ್ಟಹಳ್ಳಿ ಶಾಲೆಯಲ್ಲಿ ಧ್ವಜಾರೋಹಣ ಇಲ್ಲ

12:37 PM Jan 27, 2021 | Team Udayavani |

ಚಿಂತಾಮಣಿ: ಗಣರಾಜೋತ್ಸವದಂದು ಧ್ವಜಾರೋಹಣ ಮಾಡಬೇಕಾಗಿದ್ದ ಮುಖ್ಯಶಿಕ್ಷಕ ಶಾಲೆಗೆ 12.30 ಕ್ಕೆ ಆಗಮಿಸಿದ್ದು, ಗ್ರಾಮಸ್ಥರು ಪ್ರಶ್ನಿಸಿದ್ದಕ್ಕೆ ಗಣರಾಜೋತ್ಸವ ಆಚರಣೆ ಮಾಡದೆ ವಾಪಸ್ಸಾದ ಘಟನೆ ತಾಲೂಕಿನ ಗುಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಸ.ಕಿ.ಪ್ರಾ.ಶಾಲೆಯಲ್ಲಿ ಕೆ.ವಿ.ಸುಬ್ರಹ್ಮಣ್ಯಂ ಮತ್ತು ಪಾರ್ವತಮ್ಮ ರವರು ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಈ ಪೈಕಿ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯಂ 12.30ಕ್ಕೆ ಶಾಲೆಗೆ ಆಗಮಿಸಿ ಧ್ವಜಾರೋಹಣಕ್ಕೆ ಮಕ್ಕಳ ಕೈಯಲ್ಲಿ ಕಂಬ ನೆಟ್ಟಿಸಿದ್ದನ್ನು ಕಂಡ ಗ್ರಾಮಸ್ಥರು, ತಡವಾಗಿ ಏಕೆ ಬಂದಿದ್ದು, ಈ ಹೊತ್ತಲ್ಲಿ ಧ್ವಜಾರೋಹಣ ನಡೆಸುವಿರಾ ಎಂದು ಪ್ರಶ್ನಿಸಿದ್ದಕ್ಕೆ ಶಾಲೆಗೆ ಬೀಗ ಜಡಿದು ವಾಪಸ್‌ ಆಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ರೈತರ ಟ್ರ್ಯಾಕ್ಟರ್‌ ರ್ಯಾಲಿಗೆ ಪೊಲೀಸರ ಬ್ರೇಕ್‌

ಫೈನಾನ್ಸ್‌ ವ್ಯವಹಾರದಲ್ಲಿ ಶಿಕ್ಷಕರು: ಗುಟ್ಟಹಳ್ಳಿ ಶಿಕ್ಷಕರು ನಗರದ ಐಡಿಎಂಸಿಎಸ್‌ ಕಾಂಪ್ಲೆಕ್ಸ್‌ನಲ್ಲಿ ಆಫೀಸ್‌ ಮಾಡಿಕೊಂಡು ಚೀಟಿ ಮತ್ತು ಫೈನಾನ್ಸ್‌ ವ್ಯವಹಾರ ನಡೆಸುವುದರಿಂದ ಶಾಲೆಗೆ ತಡವಾಗಿ ಬರುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಶಾಲೆಯಲ್ಲಿ ಗಣರಾಜೋತ್ಸವ ಆಚರಣೆಮಾಡದಿರುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ  ದೂರು ನೀಡಲು ದೂರವಾಣಿ ಕರೆ ಮಾಡಿದರೆ ಕರೆಗೆ ಸ್ಪಂದಿಸಿಲ್ಲವೆಂದು ಗ್ರಾಮಸ್ಥರ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next