Advertisement

ಗುರುವೇ ಪ್ರತಿಯೊಬ್ಬರ ಬದುಕಿನ ಅತ್ಯಂತ ಮುಖ್ಯ ವ್ಯಕ್ತಿ

05:24 PM Feb 05, 2022 | Team Udayavani |

ಧಾರವಾಡ: ಆತ್ಮಜ್ಞಾನಿಯಾದ ಗುರುವು ಶಿಷ್ಯಂದಿರ ಹೃದಯದೊಳಗಿನ ತಾಪಗಳನ್ನೆಲ್ಲ ಪರಿಹರಿಸುತ್ತಾ ಅವರಿಗೆ ಆತ್ಮಜ್ಞಾನ ಪಡೆಯಲು ಸಹಾಯ ಮಾಡುತ್ತಾನೆ ಎಂದು ವೈದ್ಯ ಡಾ| ಎಸ್‌. ಆರ್‌. ರಾಮನಗೌಡರ ಹೇಳಿದರು.

Advertisement

ಕವಿಸಂನಲ್ಲಿ ಪ್ರೊ| ಬಸಯ್ಯ ಶಿವಯ್ಯ ಶಿರೋಳ ದತ್ತಿ ಅಂಗವಾಗಿ ಆಯೋಜಿಸಿದ್ದ ಶ್ರೀ ಗುರುಗೀತಾ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾವಿರಾರು ವರ್ಷಗಳ ಹಿಂದೆ ವೇದವ್ಯಾಸ ರಚಿತ “ಶ್ರೀ ಗುರುಗೀತಾ’ ಎಂಬ ಗ್ರಂಥದ ಎಲ್ಲ ವಿವರಗಳನ್ನು, ಹತ್ತು ಹಲವು ಶ್ಲೋಕಗಳನ್ನು ಅರ್ಥಸಹಿತವಾಗಿ ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಮನೋವೈದ್ಯ ಡಾ| ಆನಂದ ಪಾಂಡುರಂಗಿ ಮಾತನಾಡಿ, ಗುರುವೇ ಪ್ರತಿಯೊಬ್ಬರ ಬದುಕಿನ ಅತ್ಯಂತ ಮುಖ್ಯ ವ್ಯಕ್ತಿ ಎಂದರು. ದತ್ತಿದಾನಿಗಳಾದ ಪ್ರೊ| ಬಿ.ಎಸ್‌. ಶಿರೋಳ ಅವರು ಡಾ| ರಾಮನಗೌಡರ ಅವರ ಆಧ್ಯಾತ್ಮಿಕ ಅಧ್ಯಯನ ಚಿಂತನ ಮತ್ತು ಸಾಧನೆಯ ಬಗ್ಗೆ ಪರಿಚಯಿಸಿದರು. ಡಾ| ಎಸ್‌.ಆರ್‌. ರಾಮನಗೌಡರ ಹಾಗೂ ಅವರ ಪತ್ನಿ ಅವರನ್ನು ಸನ್ಮಾನಿಸಲಾಯಿತು. ಶಂಕರ ಹಲಗತ್ತಿ, ಗುರು ಹಿರೇಮಠ, ಡಾ| ಶ್ರೀಶೈಲ ಹುದ್ದಾರ, ನಿಂಗಣ್ಣ ಕುಂಟಿ, ಪ್ರೊ| ಐ.ಜಿ. ಸನದಿ, ಡಾ| ಡಿ.ಎಂ. ಹಿರೇಮಠ, ಡಾ|ಸಂಗಮನಾಥ ಲೋಕಾಪುರ, ಜಿ.ಬಿ. ಹೊಂಬಳ, ಡಾ| ಆನಂದ ಪಾಟೀಲ, ಡಾ| ಲಿಂಗರಾಜ ಅಂಗಡಿ, ಶಶಿಧರ ತೋಡಕರ, ಐ.ಕೆ. ಬಳ್ಳೂರ, ಎಸ್‌.ಬಿ. ಗುತ್ತಲ, ಸಿ.ಎಸ್‌. ಪಾಟೀಲ, ರಾಮಚಂದ್ರ ಧೋಂಗಡೆ ಇನ್ನಿತರರಿದ್ದರು. ಬಾಲಬಳಗ ಶಾಲೆಯ ಶೃತಿ ಮತ್ತು ತನ್ಮಯಿ ಸ್ವಾಗತಗೀತೆ ಹಾಡಿದರು. ಡಾ| ಸಂಜೀವ ಕುಲಕರ್ಣಿ ಸ್ವಾಗತಿಸಿದರು. ಶಂಕರ ಕುಂಬಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next