Advertisement

ದಶಕದಲ್ಲಿ ವಿಶ್ವ ನಿಬ್ಬೆರಗಾಗುವಂತೆ ದೇಶದ ಬೆಳವಣಿಗೆ-ಪಿ.ರಾಜೀವ

01:33 PM Mar 05, 2024 | Team Udayavani |

ಉದಯವಾಣಿ ಸಮಾಚಾರ
ಹುಬ್ಬಳ್ಳಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪಾರದರ್ಶಕ ಆಡಳಿತದಿಂದಾಗಿ ದಿವಾಳಿಯಾಗಿದ್ದ ಭಾರತ ಜಗತ್ತಿಗೆ ಕೊಡುಗೆ ಕೊಡುವಷ್ಟರ ಮಟ್ಟಿಗೆ ಬೆಳೆದಿದೆ. ಕೇವಲ 10 ವರ್ಷದಲ್ಲಿ ಜಗತ್ತು ನಿಬ್ಬೆರಗಾಗಿ ನೋಡುವಷ್ಟರ ಮಟ್ಟಿಗೆ ಅಭಿವೃದ್ಧಿ ಕಾರ್ಯಗಳು ಆಗಿವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ ಹೇಳಿದರು.

Advertisement

ಸೋಮವಾರ ಅರವಿಂದ ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸ್ಥಳೀಯ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಮುಖರ
ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದರಲ್ಲಿ ಎರಡು ಮಾತಿಲ್ಲ. ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಗೆಲುವು ಖಚಿತವಾಗಿದೆ ಎಂದರು.

ಹಿಂದೆ ಪ್ರಧಾನಿಯಾಗಿದ್ದ ದಿ| ರಾಜೀವ ಗಾಂಧಿ ಅವರೇ ದೇಶದಲ್ಲಿ ಶೇ.85 ಭ್ರಷ್ಟಾಚಾರ ನಡೆಯುತ್ತಿದೆ ಎಂದು ನೇರವಾಗಿ
ಒಪ್ಪಿಕೊಂಡಿದ್ದರು. ಆದರೆ ಇದಕ್ಕೆಲ್ಲಾ ಕಡಿವಾಣ ಹಾಕಿದ್ದು ಪ್ರಧಾನಿ ನರೇಂದ್ರ ಮೋದಿ. ಕೇಂದ್ರದಿಂದ ಬಿಡುಗಡೆ ಮಾಡುವ
ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗುವ ಮೂಲಕ ಯಾವುದೇ  ಮಧ್ಯವರ್ತಿಗೆ ನಯಾಪೈಸೆಯೂ ಹೋಗುವುದಿಲ್ಲ. ಈ ವ್ಯವಸ್ಥೆಯು ದೇಶದಲ್ಲಿನ ಭ್ರಷ್ಟಾಚಾರ ಹಾಗೂ ಅವ್ಯವಹಾರಕ್ಕೆ ದೊಡ್ಡ ಕಡಿವಾಣ ಹಾಕಿದೆ ಎಂದು ಹೇಳಿದರು.

ಕಾಂಗ್ರೆಸ್‌ ತುಷ್ಟೀಕರಣ: ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ನಡೆದ ಬಾಂಬ್‌ ಬ್ಲಾಸ್ಟ್‌ ಕುರಿತು ಮಾತನಾಡುವಾಗ ಹಿಂದೆಯೂ
ಘಟನೆಗಳು ನಡೆದಿದ್ದವು ಎಂದು ಹೇಳುವ ಮೂಲಕ ಘಟನೆಯನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡಿದರು. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್‌ ಎಂದು ಘೋಷಣೆ ಕೂಗಿದಾಗಲೂ ಇದನ್ನು ಪ್ರಶ್ನೆ ಮಾಡಿದ ಮಾಧ್ಯಮದವರ ಮೇಲೆಯೇ ಗೂಬೆ ಕೂರಿಸುವ ಕೆಲಸ ಮಾಡಿದರು. ನಾವು ಖಾಸಗಿ ಪ್ರಯೋಗಾಲಯದಿಂದ ವರದಿ ತರಿಸಿದ್ದು, ಅವನು ಪಾಕಿಸ್ತಾನ ಜಿಂದಾಬಾದ್‌
ಕೂಗಿರುವುದು ಸತ್ಯ ಎಂಬುದು ಸಾಬೀತಾಗಿದೆ
ಎಂದರು.

ಈ ಸರಕಾರ ಬಂದ ಮೇಲೆ ಸಾಲ ಮಾಡಿ ವೇತನ, ಪೆನ್ಶನ್‌ ಕೊಡುತ್ತಿದೆ. ಕೆಲ ಇಲಾಖೆಯ ನೌಕರರಿಗೆ ಇನ್ನೂ ವೇತನ ಆಗುತ್ತಿಲ್ಲ.
ಸಮಾಜದ ಕಟ್ಟಕಡೆಯ ಬಡವನ ಮೇಲೂ ಸಾಲ ಹೊರಿಸಿದ್ದಾರೆ. ಕೈಗಾರಿಕಾ ಅಭಿವೃದ್ಧಿ ಕುಸಿದಿದೆ. ಪ್ರತಿಯೊಂದಕ್ಕೂ ಕೇಂದ್ರದತ್ತ ಬೊಟ್ಟು ಮಾಡುವುದ್ಯಾಕೆ? ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

Advertisement

ವಿಧಾನಪರಿಷತ್ತು ಸದಸ್ಯ ಹಾಗೂ ಕ್ಲಸ್ಟರ್‌ ಸಂಚಾಲಕ ನವೀನ, ವಿಭಾಗೀಯ ಪ್ರಭಾರಿ ಲಿಂಗರಾಜ ಪಾಟೀಲ, ಮಹಾನಗರ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಗ್ರಾಮೀಣಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಮಾಜಿ ಶಾಸಕಿ ಸೀಮಾ ಮಸೂತಿ, ಶಶಿಮೌಳಿ ಕುಲಕರ್ಣಿ, ಮಾಜಿ ಅಧ್ಯಕ್ಷರಾದ ಸಂಜಯ ಕಪಟಕರ, ಬಸವರಾಜ ಕುಂದಗೋಳಮಠ, ವಿಜಯಾನಂದ ಶೆಟ್ಟಿ ಇನ್ನಿತರರಿದ್ದರು.

ಚುನಾವಣೆಗೆ ಬಿಜೆಪಿ ಸಂಪೂರ್ಣ ಸಿದ್ಧವಾಗಿದೆ. ಅಭಿವೃದ್ಧಿ ಚುನಾವಣೆಯ ವಿಷಯ ವಸ್ತು. ಪ್ರಧಾನಿ ನರೇಂದ್ರ ಮೋದಿ
ಚುನಾವಣೆಯ ಕೇಂದ್ರಬಿಂದು. ಈ ಎರಡು ವಿಷಯಗಳ ಮೇಲೆ ಸಂಘಟಿತ ಕಾರ್ಯಕರ್ತರ ಪಡೆಯಿನ್ನಿಟ್ಟುಕೊಂಡು ಚುನಾವಣೆ
ಎದುರಿಸುತ್ತೇವೆ.
ಪಿ.ರಾಜೀವ
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next